Site icon Vistara News

ಮೈಸೂರು ರಾಜವಂಶಸ್ಥರ ಸರಳತೆಗೆ ಜನತೆಯ ಬಹುಪರಾಕ್‌

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ತಮ್ಮ ಸರಳತೆ ಹಾಗೂ ಧಾರ್ಮಿಕ ಶ್ರದ್ಧಯೆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಪ್ರಿಲ್‌ 1ರಂದು ಮೈಸೂರಿನ ಶ್ರೀಮದ್‌ ಉತ್ತರಾದಿ ಮಠದಲ್ಲಿ ನಡೆದ ಶ್ರೀ ಶ್ರೀ 1008 ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಯದುವೀರ ಅವರು ಪಾಲ್ಗೊಂಡರು. ವೇದಿಕೆಯಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರು ಎತ್ತರದ ಆಸನದಲ್ಲಿ ಕುಳಿತಿದ್ದರೆ ಪಕ್ಕದಲ್ಲಿ ಕುರ್ಚಿಯೂ ಬೇಡವೆಂದು ನೆಲದಲ್ಲೆ ಯದುವೀರ್‌ ಕುಳಿತಿದ್ದಾರೆ. ರಾಜವಂಶದವರಾದರೂ ಯಾವುದೇ ಗತ್ತು ಗೈರತ್ತು ಇಲ್ಲದೆ ಸರಳತೆ ಮೆರೆದಿರುವುದು, ಧರ್ಮ ಪೀಠಕ್ಕೆ ರಾಜವಂಶಸ್ಥರು ಗೌರವ ಕೊಡುತ್ತಿರುವುದು ಸೇರಿ ಅನೇಕ ದೃಷ್ಟಿಕೋನಗಳಿಂದ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಹೆಚ್ಚಿನ ಓದು: ಮೈಸೂರಿನ ರಾಜೇಂದ್ರ ವಿಲಾಸ ಅರಮನೆಯ ನವೀಕರಣ: ರಾಜಮಾತೆ ಪ್ರಮೋದಾದೇವಿ ಹೇಳಿದ್ದೇನು..?

Exit mobile version