Site icon Vistara News

Lok Sabha Election 2024 : ಲೋಕಸಭೆಗೆ ಕಾಂಗ್ರೆಸ್‌ ಟಾರ್ಗೆಟ್‌ 20; ಸಿದ್ದು-ಡಿಕೆಶಿಗೆ ತಲಾ 10 ಕ್ಷೇತ್ರದ ಟಾಸ್ಕ್!

DCM DK Shivakumar Mallikarjuna kharge and CM siddaramaiah

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮಣಿಸುವ ದೃಷ್ಟಿಯಿಂದ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿವೆ. ಅಲ್ಲದೆ, ಕಾವೇರಿ ಜಲ ವಿವಾದದಲ್ಲಿ (Cauvery Water Dispute) ಜಂಟಿ ಹೋರಾಟವನ್ನೂ ನಡೆಸುತ್ತಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಮುಗಿ ಬೀಳುತ್ತಿದೆ. ಈ ಮೂಲಕ ತನ್ನದೇ ಆದ ರಾಜಕೀಯ ತಂತ್ರಗಾರಿಕೆಯನ್ನು (Political Strategy) ಉಭಯ ಪಕ್ಷಗಳು ಹೆಣೆಯುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಸಹ ತನ್ನ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಿದೆ. 28 ಲೋಕಸಭಾ ಕ್ಷೇತ್ರಗಳ (Lok Sabha constituencies) ಪೈಕೆ ಕನಿಷ್ಠ 20 ಸೀಟನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದೆ. ಈಗ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಲೋಕಸಭಾ ಚುನಾವಣಾ ಟಾಸ್ಕ್‌‌ ಅನ್ನು ಹೈಕಮಾಂಡ್‌ (Congress High Command) ನೀಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ (KPCC president and Deputy CM DK Shivakumar) ಟಾರ್ಗೆಟ್‌‌ ನೀಡಲಾಗಿದೆ.

ಈಗ 28 ಕ್ಷೇತ್ರಗಳ ಟಾರ್ಗೆಟ್‌‌ ಅನ್ನು ನಿಗದಿ ಮಾಡಿ ಹೈಕಮಾಂಡ್‌‌ ಕೆಲವು ನಿರ್ದೇಶನಗಳನ್ನು ನೀಡಿದೆ. ಲೋಕಸಭಾ ಚುನಾವಣೆ ನಮಗೆ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ವರ್ಕೌಟ್‌ ಆಗದಂತೆ ನೋಡಿಕೊಳ್ಳಿ. ಗ್ಯಾರಂಟಿಗಳನ್ನು (Congress Guarantee Scheme) ಜನರ ಮನಗೆ ತಲುಪಿಸಿ. ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಟಾಸ್ಕ್‌ ನೀಡಲಾಗಿದೆ.

ತಲಾ 10 ಸ್ಥಾನ ಗೆಲ್ಲುವ ಟಾರ್ಗೆಟ್!

20 ಸ್ಥಾನಗಳಲ್ಲಿ ಸಿಎಂ-ಡಿಸಿಎಂಗೆ ಟಾರ್ಗೆಟ್‌ ಫಿಕ್ಸ್‌‌ ಮಾಡಿದ್ದು, ಉಭಯ ನಾಯಕರು ತಲಾ ಹತ್ತು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಬೇಕು. ಬೆಂಗಳೂರಿಂದ ಬೀದರ್‌ವರೆಗೂ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಗೆದ್ದರೂ, ಸೋತರೂ ನಿಮ್ಮದೇ ಜವಾಬ್ದಾರಿ ಎಂಬ ಸಂದೇಶವನ್ನು ಹೈಕಮಾಂಡ್‌ ರವಾನೆ ಮಾಡಿದೆ. ಅಲ್ಲದೆ, ಇದಕ್ಕೆ ಜಾತಿ ಸಮೀಕರಣದ ಸೂತ್ರವನ್ನೂ ಹೆಣೆಯಲಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದವರು, ಜಾತಿಯವರು ಪ್ರಬಲರಾಗಿದ್ದಾರೆ ಎಂಬುದನ್ನು ನೋಡಿ ಈ ಟಾರ್ಗೆಟ್‌ ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಯಾವ ಕ್ಷೇತ್ರ ಯಾರಿಗೆ ಹಂಚಿಕೆ?

Exit mobile version