Lok Sabha Election 2024 : ಲೋಕಸಭೆಗೆ ಕಾಂಗ್ರೆಸ್‌ ಟಾರ್ಗೆಟ್‌ 20; ಸಿದ್ದು-ಡಿಕೆಶಿಗೆ ತಲಾ 10 ಕ್ಷೇತ್ರದ ಟಾಸ್ಕ್! - Vistara News

ಕರ್ನಾಟಕ

Lok Sabha Election 2024 : ಲೋಕಸಭೆಗೆ ಕಾಂಗ್ರೆಸ್‌ ಟಾರ್ಗೆಟ್‌ 20; ಸಿದ್ದು-ಡಿಕೆಶಿಗೆ ತಲಾ 10 ಕ್ಷೇತ್ರದ ಟಾಸ್ಕ್!

Lok Sabha Election 2024 : ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಟಾಸ್ಕ್‌ ನೀಡಿದ್ದು, ಟಾರ್ಗೆಟ್‌ 20ರಲ್ಲಿ ತಲಾ 10 ಕ್ಷೇತ್ರಗಳನ್ನು ಗೆಲ್ಲುವಂತೆ ಸೂಚನೆ ನೀಡಿದೆ.

VISTARANEWS.COM


on

DCM DK Shivakumar Mallikarjuna kharge and CM siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮಣಿಸುವ ದೃಷ್ಟಿಯಿಂದ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿವೆ. ಅಲ್ಲದೆ, ಕಾವೇರಿ ಜಲ ವಿವಾದದಲ್ಲಿ (Cauvery Water Dispute) ಜಂಟಿ ಹೋರಾಟವನ್ನೂ ನಡೆಸುತ್ತಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಮುಗಿ ಬೀಳುತ್ತಿದೆ. ಈ ಮೂಲಕ ತನ್ನದೇ ಆದ ರಾಜಕೀಯ ತಂತ್ರಗಾರಿಕೆಯನ್ನು (Political Strategy) ಉಭಯ ಪಕ್ಷಗಳು ಹೆಣೆಯುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಸಹ ತನ್ನ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಿದೆ. 28 ಲೋಕಸಭಾ ಕ್ಷೇತ್ರಗಳ (Lok Sabha constituencies) ಪೈಕೆ ಕನಿಷ್ಠ 20 ಸೀಟನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದೆ. ಈಗ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಲೋಕಸಭಾ ಚುನಾವಣಾ ಟಾಸ್ಕ್‌‌ ಅನ್ನು ಹೈಕಮಾಂಡ್‌ (Congress High Command) ನೀಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ (KPCC president and Deputy CM DK Shivakumar) ಟಾರ್ಗೆಟ್‌‌ ನೀಡಲಾಗಿದೆ.

ಈಗ 28 ಕ್ಷೇತ್ರಗಳ ಟಾರ್ಗೆಟ್‌‌ ಅನ್ನು ನಿಗದಿ ಮಾಡಿ ಹೈಕಮಾಂಡ್‌‌ ಕೆಲವು ನಿರ್ದೇಶನಗಳನ್ನು ನೀಡಿದೆ. ಲೋಕಸಭಾ ಚುನಾವಣೆ ನಮಗೆ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ವರ್ಕೌಟ್‌ ಆಗದಂತೆ ನೋಡಿಕೊಳ್ಳಿ. ಗ್ಯಾರಂಟಿಗಳನ್ನು (Congress Guarantee Scheme) ಜನರ ಮನಗೆ ತಲುಪಿಸಿ. ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಟಾಸ್ಕ್‌ ನೀಡಲಾಗಿದೆ.

ತಲಾ 10 ಸ್ಥಾನ ಗೆಲ್ಲುವ ಟಾರ್ಗೆಟ್!

20 ಸ್ಥಾನಗಳಲ್ಲಿ ಸಿಎಂ-ಡಿಸಿಎಂಗೆ ಟಾರ್ಗೆಟ್‌ ಫಿಕ್ಸ್‌‌ ಮಾಡಿದ್ದು, ಉಭಯ ನಾಯಕರು ತಲಾ ಹತ್ತು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಬೇಕು. ಬೆಂಗಳೂರಿಂದ ಬೀದರ್‌ವರೆಗೂ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಗೆದ್ದರೂ, ಸೋತರೂ ನಿಮ್ಮದೇ ಜವಾಬ್ದಾರಿ ಎಂಬ ಸಂದೇಶವನ್ನು ಹೈಕಮಾಂಡ್‌ ರವಾನೆ ಮಾಡಿದೆ. ಅಲ್ಲದೆ, ಇದಕ್ಕೆ ಜಾತಿ ಸಮೀಕರಣದ ಸೂತ್ರವನ್ನೂ ಹೆಣೆಯಲಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದವರು, ಜಾತಿಯವರು ಪ್ರಬಲರಾಗಿದ್ದಾರೆ ಎಂಬುದನ್ನು ನೋಡಿ ಈ ಟಾರ್ಗೆಟ್‌ ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಯಾವ ಕ್ಷೇತ್ರ ಯಾರಿಗೆ ಹಂಚಿಕೆ?

  • ಬೆಂಗಳೂರು ಉತ್ತರ – ಡಿ.ಕೆ. ಶಿವಕುಮಾರ್‌ – ಒಕ್ಕಲಿಗ ಪ್ರಭಾವ
  • ಬೆಂಗಳೂರು ದಕ್ಷಿಣ – ಡಿ.ಕೆ. ಶಿವಕುಮಾರ್‌ – ಒಕ್ಕಲಿಗ ಪ್ರಭಾವ
  • ಬೆಂಗಳೂರು ಗ್ರಾಮಾಂತರ – ಡಿ.ಕೆ. ಶಿವಕುಮಾರ್‌- ಒಕ್ಕಲಿಗ ಪ್ರಭಾವ
  • ಮಂಡ್ಯ – ಡಿ.ಕೆ. ಶಿವಕುಮಾರ್‌- ಒಕ್ಕಲಿಗ ಪ್ರಭಾವ
  • ಚಿಕ್ಕಬಳ್ಳಾಪುರ – ಡಿ.ಕೆ. ಶಿವಕುಮಾರ್‌- ಒಕ್ಕಲಿಗ ಪ್ರಭಾವ
  • ತುಮಕೂರು – ಡಿ.ಕೆ. ಶಿವಕುಮಾರ್‌ /ಡಾ. ಜಿ. ಪರಮೇಶ್ವರ್‌- ಒಕ್ಕಲಿಗ ಮತ್ತು ಅಹಿಂದ
  • ಹಾಸನ – ಡಿ.ಕೆ. ಶಿವಕುಮಾರ್‌- ಒಕ್ಕಲಿಗ ಪ್ರಭಾವ
  • ಉಡುಪಿ ಚಿಕ್ಕಮಗಳೂರು – ಡಿ.ಕೆ. ಶಿವಕುಮಾರ್‌/ಲಕ್ಷ್ಮೀ ಹೆಬ್ಬಾಳ್ಕರ್‌‌- ಬ್ರಾಹ್ಮಣ, ಒಕ್ಕಲಿಗ ಪ್ರಭಾವ
  • ಶಿವಮೊಗ್ಗ – ಡಿ.ಕೆ. ಶಿವಕುಮಾರ್‌- ಒಕ್ಕಲಿಗ ಪ್ರಭಾವ
  • ಬಳ್ಳಾರಿ – ಡಿ.ಕೆ. ಶಿವಕುಮಾರ್‌‌ – ರೆಡ್ಡಿ ಒಕ್ಕಲಿಗ, ಮುಸ್ಲಿಂ ಹಾಗೂ ದಲಿತ ಸಮುದಾಯ ಪ್ರಭಾವ
  • ಬೆಂಗಳೂರು ಕೇಂದ್ರ – ಸಿದ್ದರಾಮಯ್ಯ/ಬೈರತಿ ಸುರೇಶ್‌‌ – ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ
  • ಕೋಲಾರ – ಸಿದ್ದರಾಮಯ್ಯ/ಬೈರತಿ ಸುರೇಶ್‌‌ – ಮುಸ್ಲಿಂ, ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರ
  • ಮೈಸೂರು -/ಮಹದೇವಪ್ಪ – ಒಕ್ಕಲಿಗ, ಲಿಂಗಾಯತ ಹಾಗೂ ಕುರುಬ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ- ಸ್ವಂತ ಜಿಲ್ಲೆ
  • ಚಾಮರಾಜನಗರ – ಸಿದ್ದರಾಮಯ್ಯ/ಮಹದೇವಪ್ಪ – ದಲಿತ ಸಮುದಾಯ ನಿರ್ಣಾಯಕ
  • ದಕ್ಷಿಣ ಕನ್ನಡ – ಸಿದ್ದರಾಮಯ್ಯ – ಮುಸ್ಲಿಂ ಮತ್ತು ಅಹಿಂದ ಪ್ರಭಾವ
  • ಉತ್ತರ ಕನ್ನಡ – ಸಿದ್ದರಾಮಯ್ಯ- ಬ್ರಾಹ್ಮಣ, ಬಿಲ್ಲವ ಹಾಗೂ ಅಹಿಂದ ಪ್ರಭಾವ
  • ಬೆಳಗಾವಿ -ಸಿದ್ದರಾಮಯ್ಯ/ಸತೀಶ್‌‌ ಜಾರಕಿಹೊಳಿ – ಲಿಂಗಾಯತ, ಕುರುಬ ಪ್ರಭಾವ
  • ಚಿಕ್ಕೋಡಿ – ಸಿದ್ದರಾಮಯ್ಯ / ಪ್ರಕಾಶ್‌ ಹುಕ್ಕೇರಿ – ಲಿಂಗಾಯತ ಪ್ರಭಾವ
  • ವಿಜಯಪುರ – ಸಿದ್ದರಾಮಯ್ಯ/ ಎಂ.ಬಿ. ಪಾಟೀಲ್‌ – ಲಿಂಗಾಯತ, ದಲಿತ ಪ್ರಭಾವ
  • ಬಾಗಲಕೋಟೆ – ಸಿದ್ದರಾಮಯ್ಯ/ಶಿವಾನಂದ ಪಾಟೀಲ್‌ – ಲಿಂಗಾಯತ, ಕುರುಬ ಸಮುದಾಯದ ಪ್ರಭಾವ
  • ಹಾವೇರಿ – ಸಿದ್ದರಾಮಯ್ಯ – ಕುರುಬ ಮತ್ತು ಮುಸ್ಲಿಂ ಸಮುದಾಯದ ಪ್ರಭಾವ
  • ದಾವಣಗೆರೆ – ಸಿದ್ದರಾಮಯ್ಯ/ ಶಾಮನೂರು ಶಿವಶಂಕರಪ್ಪ – ಲಿಂಗಾಯತ, ಕುರುಬ ಸಮುದಾಯದ ಪ್ರಭಾವ
  • ಚಿತ್ರದುರ್ಗ – ಸಿದ್ದರಾಮಯ್ಯ- ದಲಿತ ಮತ್ತು ಲಿಂಗಾಯತ ಪ್ರಭಾವ
  • ಕೊಪ್ಪಳ – ಸಿದ್ದರಾಮಯ್ಯ / ರಾಘವೇಂದ್ರ ಹಿಟ್ನಾಲ್‌‌ – ಕುರುಬ ಸಮುದಾಯದ ಪ್ರಭಾವ
  • ರಾಯಚೂರು – ಸಿದ್ದರಾಮಯ್ಯ- ಎಸ್‌ಟಿ ಮತ್ತು ಕುರುಬ ಹಾಗೂ ಲಿಂಗಾಯತ ಪ್ರಭಾವ
  • ಕಲಬುರಗಿ – ಸಿದ್ದರಾಮಯ್ಯ/ ಮಲ್ಲಿಕಾರ್ಜುನ ಖರ್ಗೆ – ದಲಿತ ಮತ್ತು ಲಿಂಗಾಯತ ಸಮುದಾಯಗಳ ಪ್ರಭಾವ
  • ಬೀದರ್‌‌ – ಸಿದ್ದರಾಮಯ್ಯ/ಈಶ್ವರ ಖಂಡ್ರೆ – ಲಿಂಗಾಯತ, ಮುಸ್ಲಿಂ, ದಲಿತ ಸಮುದಾಯ ನಿರ್ಣಾಯಕ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

CP Yogeshwara: ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

VISTARANEWS.COM


on

nisha cp yogeshwara
Koo

ರಾಮನಗರ: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್‌ (CP Yogeshwara) ಪುತ್ರಿ ನಿಶಾ (Nisha Yogeshwara) ಅವರು ತಮ್ಮ ತಂದೆಯ ವಿರುದ್ಧ ರೊಚ್ಚಿಗೆದ್ದಿದ್ದು, ಹಲವಾರು ವಿಡಿಯೋಗಳ ಮೂಲಕ ಇನ್‌ಸ್ಟಗ್ರಾಂನಲ್ಲಿ (Social media) ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಂದೆ ತಮ್ಮ ಮೇಲೆ ಹಲ್ಲೆ (Assault) ಮಾಡುತ್ತಾರೆ, ತಮ್ಮ ಕುಟುಂಬವನ್ನು, ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಿಶಾ (ಈ ಪೋಸ್ಟ್‌ಗಳಲ್ಲಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್‌ಗಳು ವೈರಲ್‌ (viral video) ಆಗಿವೆ.

ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಯೋಗೇಶ್ವರ್ ಮಕ್ಕಳಾದ ತಮ್ಮನ್ನು ದೂರ ಮಾಡಿದ್ದಾರೆ. ಮನೆಗೆ ಹೋದರೆ ತಮ್ಮ ಮೇಲೆ ಹಲ್ಲೆ ಮಾಡ್ತಾರೆ. ಅವರನ್ನು ಮಾತನಾಡಿಸಲು ಹೋದರೆ ರಪರಪ ಎಂದು ಹೊಡೆಯುತ್ತಾರೆ. ಏನಾರೂ ಕೇಳಿದರೆ, ನಮ್ಮ ಬಳಿ ಬರಬೇಡ, ಬೇಕಾದರೆ ಭಿಕ್ಷೆ ಮಾಡಿಕೊಂಡು ಜೀವನ ಮಾಡು ಎನ್ನುತ್ತಾರೆ. ನಮಗೆ ತಂದೆಯ ಪ್ರೀತಿ ಸಿಗಲಿಲ್ಲ, ಅವರು ಆದರ್ಶ ಅಪ್ಪನಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಮಾಯಣದ ಕಥೆ ಹೇಳಿ, ಕುಟುಂಬದಲ್ಲಿರುವ ಜಗಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ʼನಿಶಾ ಯೋಗೇಶ್ವರ್‌ʼ ಎಂದು ಬಳಸುತ್ತಿರುವ ತನ್ನ ಹೆಸರಿನಲ್ಲಿ ʼಯೋಗೇಶ್ವರ್ʼ ಹೆಸರು ಬಳಸದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧಮಕಿ ಹಾಕುತ್ತಿದ್ದಾರೆ. ತನ್ನ ತಾಯಿ ಯೋಗೇಶ್ವರ್‌ ಅವರ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ಆದರೆ ತಂದೆ, ತಾಯಿಗೆ ಕಪಾಳಮೋಕ್ಷ ಮಾಡಿದರು. ತನ್ನ ತಮ್ಮನಿಗೂ ಥಳಿಸಿದ್ದಾರೆ. ಮೊದಲ ಪತ್ನಿ ಹಾಗೂ ಮಕ್ಕಳನ್ನು ಯೋಗೇಶ್ವರ್‌ ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಅಳಲು ತೋಡಿಕೊಂಡಿದ್ದಾಎ.

20 ವರ್ಷ ಹಿಂದೆ ನಮಗೆ ಹೇಳದೆ ಕೇಳದೆ ತಂದೆ ಬೇರೆ ಸಂಸಾರ ಕಟ್ಟಿಕೊಂಡರು. ಆದರ್ಶ ಮಗಳಾಗು ಎಂದು ನನಗೆ ಹೇಳುತ್ತಾರೆ. ಅವರು ಆದರ್ಶ ತಂದೆಯಾಗಬೇಕಲ್ಲವೇ? ಮೊದಲನೇ ಮದುವೆಯ ಮಕ್ಕಳನ್ನು ಬೆಳೆಸಬೇಕಲ್ಲವೇ? ಇಂಥ ತಂದೆಯ ಜೊತೆಗೆ ಹೇಗಿರಲಿ? ಎಂದು ಯೋಗೇಶ್ವರ್ ಎರಡನೇ ಪತ್ನಿ, ಮಕ್ಕಳ ಬಗ್ಗೆ ಪ್ರಸ್ತಾಪ ಮಾಡಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Continue Reading

ರಾಜಕೀಯ

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Nandini Milk: ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಆರ್.‌ ಅಶೋಕ್‌ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ ಎಂದು ಟೀಕಿಸಿದ್ದಾರೆ.

VISTARANEWS.COM


on

Nandini Milk No incentives for milk producers Ashok slams govt for sponsoring foreign cricket team
Koo

ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಗರಂ ಆಗಿದ್ದಾರೆ. ಒಂದು ಕಡೆ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಮತ್ತೊಂದು ಕಡೆ ಕೆಎಂಎಫ್‌ ಸಂಸ್ಥೆಯ ನಂದಿನಿ ಹಾಲು (Nandini Milk) ಉತ್ಪಾದನೆಯಿಂದ ಬಂದ ಲಾಭದಲ್ಲಿ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್.‌ ಅಶೋಕ್‌, ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

ಆರ್.‌ ಅಶೋಕ್‌ ಪೋಸ್ಟ್‌ನಲ್ಲೇನಿದೆ?

“ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ.

ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ?

ಇದನ್ನೂ ಓದಿ: Phone tapping: ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು ಏನು?

ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನ ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು” ಎಂದು ಆರ್.‌ ಅಶೋಕ್‌ ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

Continue Reading

ರಾಜಕೀಯ

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Phone tapping: ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ವಿಧಾನಸಭಾ ವಿಪಕ್ಷ ನಾಯಕ ಆರ್.‌ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.

VISTARANEWS.COM


on

Phone tapping case Let Ashok file a complaint to Home Minister DK Shivakumar hits back at phone tapping allegations
Koo

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಫೋನ್‌ ಕದ್ದಾಲಿಕೆ (Phone tapping) ಆರೋಪವು ದಿನೇ ದಿನೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಬಳಿಕ ಇದಕ್ಕೆ ಧ್ವನಿಗೂಡಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು. ಈಗ ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದು, ಅಶೋಕ್‌ ಅವರಿಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲು ಹೇಳಿ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಕ್ಕೆ ತಿರುಗೇಟು ನೀಡಿದರು.

ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಿಮ್ಮ ಸುತ್ತ ಮುತ್ತ ಇರುವವರೇ ಮಾಹಿತಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಹಳ ಸಂತೋಷ. ಅವರು ಯಾರು ಯಾರು ಮಾಹಿತಿ ಕೊಟ್ಟಿದ್ದಾರೆಂಬುದರ ಬಗ್ಗೆ ಅಪ್ಡೇಟ್ ಕೊಡುವುದಕ್ಕೆ ಹೇಳಿ ಎಂದು ಮಾಧ್ಯಮವರಿಗೆ ಹೇಳಿದರು.

ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು

ಫೋನ್‌ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ. ಅವರು ತಪ್ಪು ಮಾಡಿಲ್ಲ ಎಂದಾದರೆ ಕೂಡಲೇ ಸಿಬಿಐಗೆ ತನಿಖೆ ಹೊಣೆಯನ್ನು ಒಪ್ಪಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಮಂಗಳವಾರ ಮಾಧ್ಯಮದವರ ಮುಂದೆ ಸವಾಲು ಹಾಕಿದ್ದರು.

ಫೋನ್‌ ಟ್ಯಾಪಿಂಗ್‌ ಬಗ್ಗೆ ಮಾಜಿ ಸಿಎಂ ಎಚ್‌.ಡಿ.‌ ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್‌ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್‌ ಟ್ಯಾಪ್‌ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ? ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

ಸರ್ಕಾರ ಮಾಡಿಲ್ಲವಾದರೆ ತನಿಖೆಗೆ ಕೊಡಲಿ

ಫೋನ್‌ ಟ್ಯಾಪ್‌ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್‌ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಆರ್‌. ಅಶೋಕ್ ಒತ್ತಾಯಿಸಿದ್ದರು.

Continue Reading

ಬೆಂಗಳೂರು

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

Drink and Drive: ಇಷ್ಟು ದಿನ ಕೇವಲ ಸಂಚಾರಿ ಪೊಲೀಸರು ಮಾತ್ರ ಈ ಚೆಕ್‌ ಮಾಡುತ್ತಿದ್ದರು. ಇನ್ನು ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ತಪಾಸಣೆ ನಡೆಸಲಾಗುವುದು. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

VISTARANEWS.COM


on

drink and drive RTO check
Koo

ಬೆಂಗಳೂರು: ಇನ್ನು ಮುಂದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರು (Drink and Drive) ಪಾರಾಗುವುದು ಬಹಳ ಕಷ್ಟ. ರಸ್ತೆಯ ಒಂದು ಕಾರ್ನರ್‌ನಲ್ಲಿ ಟ್ರಾಫಿಕ್ ಪೊಲೀಸರು (Traffic Police) ಡ್ರಿಂಕ್‌ ಆಂಡ್‌ ಡ್ರೈವ್‌ ಟೆಸ್ಟ್‌ (Drink and Drive test) ನಡೆಸುತ್ತಿರುವಾಗ ಅವರಿಂದ ಹೇಗೋ ಪಾರಾಗಿ ಬಂದೆ ಎಂದು ಬೀಗಬೇಡಿ. ಮುಂದಿನ ತಿರುವಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೇ (RTO Officers) ನಿಮ್ಮನ್ನು ಚೆಕ್‌ ಮಾಡಲು ನಿಂತಿರಬಹುದು. ಅಲ್ಲೂ ನೀವು ಸಿಕ್ಕಿಹಾಕಿಕೊಳ್ಳಬಹುದು.

ಹೌದು, ಇನ್ನು ಮೇಲೆ ಲಿಕ್ಕರ್‌ ಸೇವಿಸಿ ಡ್ರೈವ್‌ ಮಾಡುವ ಚಾಲಕರನ್ನು ಹಿಡಿದುಹಾಕಲು ಆರ್‌ಟಿಒದಿಂದಲೂ (RTO) ಡ್ರಿಂಕ್ ಆಂಡ್ ಡ್ರೈವ್ (Drink and Drive) ಆಪರೇಷನ್ ನಡೆಸಲಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳಿಂದ ಈ ತಪಾಸಣೆ ನಡೆಯಲಿದೆ. ಸಿಕ್ಕಿಬಿದ್ದವರಿಗೆ ಹೆಚ್ಚಿನ ದಂಡ ಬೀಳಲಿದೆ.

ಇಷ್ಟು ದಿನ ಕೇವಲ ಸಂಚಾರಿ ಪೊಲೀಸರು ಮಾತ್ರ ಈ ಚೆಕ್‌ ಮಾಡುತ್ತಿದ್ದರು. ಇನ್ನು ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ತಪಾಸಣೆ ನಡೆಸಲಾಗುವುದು. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ (Bengaluru) 10 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗುವುದು. ಬೆಂಗಳೂರಲ್ಲಿ ಕುಡಿದು ವಾಹನ ಓಡಿಸಿ ಅಪಘಾತ ಎಸಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಇದಕ್ಕೆ ತಡೆಹಾಕಲು ಹೊಸ ಉಪಕ್ರಮ ಬರುತ್ತಿದೆ.

ಪ್ರಯಾಣಿಕರ ಪಿಕಪ್‌ಗೂ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಶುಲ್ಕ, ಪ್ರತಿಭಟನೆ ಬಳಿಕ ರದ್ದು

ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- Kempegowda International Airport- KIA) ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು (pickup vehicles) ಬರುವ ವಾಹನಗಳೂ ಇನ್ನು ಮುಂದೆ ನಿಲುಗಡೆ ಶುಲ್ಕ (Parking fees) ಕೊಡಬೇಕು ಎಂಬ ನಿಯಮ ಮಾಡಿ ಏರ್ಪೋರ್ಟ್‌ ಆಡಳಿತ ಮಂಡಳಿ ನಿನ್ನೆ ವಸೂಲಿ ಶುರು ಮಾಡಿತ್ತು. ಇದೀಗ ಎದುರಾದ ಪ್ರತಿರೋಧವನ್ನು ಕಂಡು ಬೆಚ್ಚಿಬಿದ್ದು ತಾತ್ಕಾಲಿಕವಾಗಿ ವಸೂಲಿ ಸ್ಥಗಿತಗೊಳಿಸಿದೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರ ಪಿಕ್ ಅಪ್‌ಗೂ ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರು ಹಾಗೂ ಬಾಡಿಗೆ ವಾಹನ ಚಾಲಕರು ಬೆಚ್ಚಿ ಬಿದ್ದಿದ್ದಾರೆ. ಆಗಮನದ ದ್ವಾರದ ಬಳಿ ವಾಹನಗಳಲ್ಲಿ ಪಿಕಪ್ ಮಾಡುವುದಕ್ಕೆ ದರ ನಿಗದಿ ಮಾಡಿದ ಪರಿಣಾಮ ಕೆಂಪೇಗೌಡ ಏರ್ಪೋರ್ಟ್‌ ಮತ್ತಷ್ಟು ದುಬಾರಿಯಾಗಿತ್ತು. ಇಷ್ಟು ದಿನ ವಾಹನ ಚಾಲಕರು ಪ್ರಯಾಣಿಕರನ್ನು ಉಚಿತವಾಗಿ ಪಿಕಪ್ ಮಾಡುತ್ತಿದ್ದರು.

ಪಿಕಪ್‌ಗೆ ಹೆಚ್ಚುವರಿ ಲೈನ್ ಮಾಡಿ ಹಣ ವಸೂಲಿ ಮಾಡಲು ಶುರು ಮಾಡಲಾಗಿತ್ತು. ಕಾರು, ಜೀಪ್ ಪಿಕಪ್ ಪ್ರವೇಶಕ್ಕೆ 7 ನಿಮಿಷದವರೆಗೂ 150 ರೂ. ದರ, 7ರಿಂದ 14 ನಿಮಿಷಕ್ಕೆ 300 ರೂ., ಬಸ್ಸಿಗೆ 600 ರೂಪಾಯಿ, ಟಿಟಿಗೆ 300 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿತ್ತು. ನೂತನ ವಸೂಲಿ ಕಂಡು ಪ್ರಯಾಣಿಕರಿಗೆ ತಲೆ ತಿರುಗಿತ್ತು.

ಪಿಕಪ್‌ಗೂ ಹಣ ಕೊಡಬೇಕಾ ಎಂದು ರೊಚ್ಚಿಗೆದ್ದ ಚಾಲಕರು ಹಾಗೂ ಪ್ರಯಾಣಿಕರು ಏರ್ಪೋರ್ಟ್‌ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಲಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಮಂಡಳಿ ತಾತ್ಕಾಲಿಕವಾಗಿ ವಸೂಲಿ ನಿಲ್ಲಿಸಿದೆ. ನಾಳೆ ದರ ನಿಗದಿ ವಿರುದ್ಧ ಏರ್ಪೋರ್ಟ್‌ನಲ್ಲಿ ಪ್ರತಿಭಟನೆಗೆ ಚಾಲಕರು ಸಜ್ಜಾಗಿದ್ದಾರೆ.

ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport – KIA) ನೂತನ ಟರ್ಮಿನಲ್ 2 (Terminal 2, T2) ಇದರಲ್ಲಿ ಭಾರಿ ಸೋರಿಕೆ (leakage) ಕಂಡುಬಂತು. ಭಾರಿ ಮಳೆಯ ಪರಿಣಾಮ ಇಲ್ಲಿಗೆ ಬರಬೇಕಿದ್ದ ಹಲವು ವಿಮಾನಗಳನ್ನು ಬೇರೆ ಕಡೆಗೆ ಕಳಿಸಲಾಯಿತು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

Continue Reading
Advertisement
Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್8 mins ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್13 mins ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ19 mins ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್29 mins ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

AR Rahman says his mother thought his Oscar statuettes were made of gold
ಬಾಲಿವುಡ್33 mins ago

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Phone tapping case Let Ashok file a complaint to Home Minister DK Shivakumar hits back at phone tapping allegations
ರಾಜಕೀಯ43 mins ago

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Cannes 2024 Chidananda S Naik bows in Cannes with Kannada folk tale
ಸಿನಿಮಾ53 mins ago

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Turbulence
ವಿದೇಶ1 hour ago

Singapore Airlines: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

MDH, Everest Spices
ದೇಶ1 hour ago

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

drink and drive RTO check
ಬೆಂಗಳೂರು2 hours ago

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ6 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ19 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌