Site icon Vistara News

HC Balakrishna : ರಾಜ್ಯದ ಬಿಜೆಪಿ ಸಂಸದರು ಬರೀ ಶೋಪೀಸ್‌ಗಳು, ಯಾರೂ ಗಂಡಸರಲ್ಲ!

HC Balakrishna Magadi MLA

ಬೆಂಗಳೂರು/ರಾಮನಗರ: ಬಿಜೆಪಿಯ ಸಂಸದರೆಲ್ಲರೂ ಶೋಪೀಸ್‌ಗಳು, ಅದರ ನಾಯಕರು ಯಾರೂ ಗಂಡಸರಲ್ಲ.. (No Karnataka BJP MP is a Man) ಹೀಗೊಂದು ವಿವಾದಾತ್ಮಕ ಹೇಳಿಕೆ (controversial Statement) ನೀಡಿದ್ದಾರೆ ಮಾಗಡಿಯ ಕಾಂಗ್ರೆಸ್‌ ಶಾಸಕ (Magadi Congress MLA) ಎಚ್.ಸಿ. ಬಾಲಕೃಷ್ಣ. (HC Balakrishna) ಕೆಲವು ದಿನದ ಹಿಂದಷ್ಟೇ ಸಂಸತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ಅವರು ಇನ್ನೊಂದು ಅಂಥಹುದೇ ಹೇಳಿಕೆಯನ್ನು ನೀಡಿದ್ದಾರೆ.

ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆಪಾದಿಸಿ ದಿಲ್ಲಿಯಲ್ಲಿ ಆಯೋಜಿಸಲಾಗಿರುವ ಜಂತರ್‌ ಮಂತರ್‌ ಪ್ರತಿಭಟನೆಗೆ ಸಂಬಂಧಿಸಿ ಹೇಳಿಕೆ ನೀಡಿದ ಅವರು ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ರಾಜ್ಯ ಸಂಸದರ ಅಸಹಾಯಕತೆಯನ್ನು ಆಡಿಕೊಂಡರು.

ʻʻಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದು. ನಮಗೆ ಕೊಡಬೇಕಾದ ಅನಯದಾನವನ್ನ ನಮಗೆ ಕೊಡ್ತಿಲ್ಲ.ʼʼ ಎಂದು ಹೇಳಿದ ಬಾಲಕೃಷ್ಣ ‌ ಅವರು, ʻʻಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ತಾರೆ, ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ. ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಇವರ ಕೆಲಸ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡ್ತಿದ್ದೀವಿʼʼ ಎಂದು ಹೇಳಿದರು.

ʻʻಪಾಪ.. ನಮ್ಮ ಹೋರಾಟ ನೋಡಿಯಾದರೂ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ.. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ.! ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥʼʼ ಎಂದು ಬಿಜೆಪಿ ಸಂಸದರ ವಿರುದ್ಧ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Congress Protest : ಜಂತರ್‌ ಮಂತರ್‌ ಹೋರಾಟಕ್ಕೆ ನೀವೂ ಬನ್ನಿ; ಬಿಜೆಪಿ ನಾಯಕರು, ಸಂಸದರಿಗೆ ಸಿಎಂ ಆಹ್ವಾನ

ಡಿ.ಕೆ. ಸುರೇಶ್‌ ಎದುರಿಸುವ ಅಭ್ಯರ್ಥಿ ಮೈತ್ರಿಯಲ್ಲಿ ಇಲ್ಲ

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಸುರೇಶ್ ಅವರನ್ನು ಎದುರಿಸುವಂತ ಅಭ್ಯರ್ಥಿ ಅವರಲ್ಲಿ ಇಲ್ಲ. ಲೋಕಸಭಾ ಸದಸ್ಯ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿಕೊಟ್ಟಿದ್ದಾರೆʼʼ ಎಂದು ಬಾಲಕೃಷ್ಣ ಹೇಳಿದರು.

ʻʻಬೇಕಿದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ಅವರಿಗೆ ಅಭ್ಯರ್ಥಿಯೇ ಇಲ್ಲ. ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ವರ್ಕೌಟ್ ಆಗಲ್ಲ. ತಾಕತ್ತಿದ್ದರೆ ಕುಮಾರ ಸ್ವಾಮಿ , ಯೋಗೇಶ್ವರ್ ಮೊದಲು ಸ್ಪರ್ಧೆ ಮಾಡಲಿ. ನಂತರ ಮಾತನಾಡೋಣʼʼ ಎಂದು ಮಾಗಡಿ ಶಾಸಕ ಎಚ್‌.ಸಿ ಬಾಲಕೃಷ್ಣ ಹೇಳಿದರು.

Exit mobile version