ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವಾರ ವಿಸ್ತರಣೆ ಮಾಡಲಾಗಿದೆ. ನವೆಂಬರ್ 5ರಿಂದ ಆರಂಭವಾಗಿದ್ದ ಅರ್ಜಿ ಸಲ್ಲಿಕೆ ಅವಧಿ ನವೆಂಬರ್ 15ಕ್ಕೆ ಮುಕ್ತಾಯವಾಯಿತು.
ಸುಮಾರು ಒಂದು ಸಾವಿರ ಜನರು ಅರ್ಜಿಯನ್ನು ಪಡೆದಿದ್ದು, ಕೇವಲ 450ರಷ್ಟು ಮಾತ್ರ ಸಲ್ಲಿಕೆ ಆಗಿವೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಘಟಾನುಘಟಿಗಳೇ ಅರ್ಜಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ ನವೆಂಬರ್ 21ರವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಯಶವಂತಪುರಕ್ಕೆ ಭಾವನಾ ಅರ್ಜಿ
ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಚಿತ್ರನಟಿ ಭಾವನಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಭಾವನಾ, ಯಶವಂತಪುರ ಕ್ಷೇತ್ರದಕ್ಕೆ ಸ್ಪರ್ಧೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ. ವರಿಷ್ಠರು ನನಗೆ ಟಿಕೆಟ್ ಕೊಟ್ಟು ಸಾಥ್ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಈ ಹಿಂದೆಯೂ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಪಕ್ಷದ ಎಲ್ಲ ನಾಯಕರ ಕೃಪಾಕಟಾಕ್ಷ ನನ್ನ ಮೇಲೆ ಇದೆ. ನಾನು MLA ಆದರೆ ಜನರಿಗೆ ಹತ್ತಿರ ಆಗಬಹುದು. ಜನರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ ನಾವು ಜನರಿಗೆ ಹತ್ತಿರ ಆಗಬೇಕು. ಈ ಬಾರಿ ಟಿಕೆಟ್ ನೀಡಿದರೆ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತೇನೆ ಎಂದರು.
ಇದೀಗ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಪ್ರತಿನಿಧೀಸುತ್ತಿರುವ ಶಿವಾಜಿ ನಗರ ಕ್ಷೇತ್ರಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ | Election 2023 | ಕಾಂಗ್ರೆಸ್ ಟಿಕೆಟ್ ಅರ್ಜಿ ಪಡೆದ 1,000 ಮಂದಿ: ಕೋಲಾರಕ್ಕೆ ಸುದರ್ಶನ್, ಫ್ಯಾಮಿಲಿ ಲೆಕ್ಕದಲ್ಲಿ ಅನೇಕರ ಸ್ಪರ್ಧೆ