ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕವಾಗುತ್ತಿದ್ದಂತೆಯೇ ಯಾರೆಲ್ಲಾ ಸಚಿವರಾಗಿ (Government Formation) ನೇಮಕಗೊಳ್ಳಲಿದ್ದಾರೆ, ಮುಖ್ಯಮಂತ್ರಿಯೊಂದಿಗೆ ಯಾರು ಯಾರು ಪ್ರಮಾಣವಚನ (new cabinet minister) ಸ್ವೀಕರಿಸಲಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಡಿ.ಕೆ. ಶಿವಕುಮಾರ್ ಮಾತ್ರ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಸರ್ಕಾರದಲ್ಲಿ ನಾಲ್ಕೈದು ಉಪ ಮುಖ್ಯಮಂತ್ರಿಗಳಿರಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ.
ಇವರಲ್ಲದೆ, ಪಕ್ಷದ ಕೆಲ ಹಿರಿಯ ನಾಯಕರು ಕೂಡ ಶನಿವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬಹುದೆಂದು ಹೇಳಲಾಗುತ್ತಿದ್ದು, ಅವರಲ್ಲಿ ಮುಖ್ಯವಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಪ್ರಿಯಾಂಕ ಖರ್ಗೆ ಹೆಸರು ಕೇಳಿ ಬರುತ್ತಿದೆ.
ಹೈಕಮಾಂಡ್ ಮಟ್ಟದಲ್ಲಿ ಚರ್ಚೆ
ಪಕ್ಷದ ಉನ್ನತ ನಾಯಕರು ಮುಖ್ಯಮಂತ್ರಿ ನೇಮಕಕ್ಕೆ ಚರ್ಚೆ ನಡೆಸಿದ ಸಂದರ್ಭದಲ್ಲಿಯೇ ಯಾರನ್ನೆಲ್ಲಾ ಸಚಿವರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂಬ ಬಗ್ಗೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇಬ್ಬರೂ ತಮ್ಮ ಆಯ್ಕೆಯ ಸಚಿವರ ಪಟ್ಟಿಯನ್ನು ಹೈಕಮಾಂಡ್‌ಗೆ ಒಪ್ಪಿಸಿದ್ದಾರೆಂದು ಹೇಳಲಾಗುತ್ತಿದೆ. ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಕುರಿತು ಈಗಾಗಲೇ ಒಂದು ಸುತ್ತು ಚರ್ಚೆ ನಡೆದಿದೆ.
ಶುಕ್ರವಾರ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮತ್ತೆ ದೆಹಲಿಗೆ ತೆರಳಲಿದ್ದು, ಹೈಕಮಾಂಡ್‌ನೊಂದಿಗೆ ಸಚಿವರ ಆಯ್ಕೆ ಮತ್ತು ಖಾತೆ ಹಂಚಿಕೆಯ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಕುರಿತು ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ನಡುವೆ ಅತ್ಯುತ್ತಮ ಆಡಳಿತ ನೀಡುವ ಸಚಿವ ಸಂಪುಟವನ್ನು ಈ ಬಾರಿ ರಚಿಸಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಿದ್ದು, ಇದಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್ ಕನುಗೋಲು ನೇತೃತ್ವದ ತಂಡವೊಂದನ್ನು ರಚಿಸಿತ್ತು. ಈ ತಂಡ ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ಹತ್ತು ಸಲಹೆಗಳನ್ನು ನೀಡಿದೆ.
ಈ ಸಲಹೆಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ;
ಸಿದ್ದರಾಮಯ್ಯ( ಕುರುಬ) ಸಿಎಂ, ಡಿ ಕೆ ಶಿವಕುಮಾರ್ ( ಒಕ್ಕಲಿಗ) ಡಿಸಿಎಂ, ಬಿ.ಕೆ ಹರಿಪ್ರಸಾದ್ ( ಬಿಲ್ಲವ), ಜಮೀರ್ ಅಹ್ಮದ್ ಖಾನ್ (ಮುಸ್ಲಿಂ), ಯು.ಟಿ ಖಾದರ್(ಮುಸ್ಲಿಂ), ದಿನೇಶ್ ಗುಂಡೂರಾವ್ (ಬ್ರಾಹ್ಮಣ), ಕೆ ಜೆ ಜಾರ್ಜ್ (ಕ್ರೈಸ್ತ), ಜಗದೀಶ್ ಶೆಟ್ಟರ್ (ಲಿಂಗಾಯತ), ರಾಮಲಿಂಗಾ ರೆಡ್ಡಿ (ಒಕ್ಕಲಿಗ ರೆಡ್ಡಿ), ಎಂ.ಬಿ ಪಾಟೀಲ್ (ಲಿಂಗಾಯತ), ಡಾ. ಜಿ.ಪರಮೇಶ್ವರ (ಎಸ್ಸಿ), ಕೃಷ್ಣ ಬೈರೇಗೌಡ (ಒಕ್ಕಲಿಗ), ಯಾಂಕ್ ಖರ್ಗೆ (ಎಸ್ಸಿ), ಲಕ್ಷ್ಮೀ ಹೆಬ್ಬಾಳ್ಕರ್ (ಲಿಂಗಾಯತ), ತುಕರಾಮ್ (ಎಸ್ ಟಿ), ನಾಗೇಂದ್ರ (ಎಸ್ ಟಿ), ಲಕ್ಷಣ ಸವದಿ, (ಲಿಂಗಾಯತ), ರಾಘವೇಂದ್ರ ಹಿಟ್ನಾಳ್ (ಕುರುಬ), ಪುಟ್ಟರಂಗ ಶೆಟ್ಟಿ (ಉಪ್ಪಾರ), ಸಂತೋಷ್ ಲಾಡ್( ಮರಾಠಿ), ಎಚ್ ಕೆ ಪಾಟೀಲ್ (ರೆಡ್ಡಿ ಲಿಂಗಾಯತ), ಶಿವಲಿಂಗೇಗೌಡ (ಒಕ್ಕಲಿಗ), ಮಧು ಬಂಗಾರಪ್ಪ (ಈಡಿಗ), ಟಿ.ಬಿ ಜಯಚಂದ್ರ (ಒಕ್ಕಲಿಗ), ರಾಮಲಿಂಗಾ ರೆಡ್ಡಿ (ರೆಡ್ಡಿ) ಕೆ. ಎಚ್ ಮುನಿಯಪ್ಪ/ ರೂಪಾ ಶಶಿಧರ್ (ಎಸ್ಸಿ), ಶಿವಾನಂದ ಪಾಟೀಲ್ (ಲಿಂಗಾಯತ) ಈಶ್ವರ್ ಖಂಡ್ರೆ (ಲಿಂಗಾಯತ), ಟಿ.ಡಿ.ರಾಜೇಗೌಡ (ಒಕ್ಕಲಿಗ), ವಿನಯ್ ಕುಲಕರ್ಣಿ(ಲಿಂಗಾಯತ), ಎಂ. ಕೃಷ್ಣಪ್ಪ (ಒಕ್ಕಲಿಗ), ಶಿವರಾಜ್ ತಂಗಡಗಿ (ಭೋವಿ), ಅಜಯ್ ಧರ್ಮಸಿಂಗ್ (ರಜಪೂತ), ಸತೀಶ್ ಜಾರಕಿಹೊಳಿ (ಎಸ್ ಟಿ), ಬಸವರಾಜ ರಾಯರೆಡ್ಡಿ (ಲಿಂಗಾಯತ), ರುದ್ರಪ್ಪ ಲಮಾಣಿ(ಬಂಜಾರ).
ಯಾವ ಜಿಲ್ಲೆಯಿಂದ ಯಾರಾಗಬಹುದು ಸಚಿವರು?
ಬೆಳಗಾವಿ: ಲಕ್ಷ್ಮಣ್ ಸವದಿ/ ಲಕ್ಷ್ಮೀ ಹೆಬ್ಬಾಳ್ಕರ್/ ಸತೀಶ್ ಜಾರಕಿಹೊಳಿ.
ಬಾಗಲಕೋಟೆ: ಆರ್.ಬಿ. ತಿಮ್ಮಾಪುರ್.
ವಿಜಯಪುರ: ಎಂ.ಬಿ.ಪಾಟೀಲ್/ಶಿವಾನಂದ ಪಾಟೀಲ್/ ಯಶವಂತ ರಾಯಗೌಡ ಪಾಟೀಲ್
ಕಲಬುರಗಿ: ಪ್ರಿಯಾಂಕ ಖರ್ಗೆ/ಅಜಯ್ ಸಿಂಗ್/ ಶರಣ ಪ್ರಕಾಶ್ ಪಾಟೀಲ್
ರಾಯಚೂರು : ಬಸನಗೌಡ ತೆಹುವಿಹಾಳ
ಯಾದಗಿರಿ: ಶರಣಪ್ಪ ದರ್ಶನಾಪುರ್
ಬೀದರ್: ರಹೀಮ್ ಖಾನ್/ಈಶ್ವರ್ ಖಂಡ್ರೆ
ಗದಗ: ಎಚ್.ಕೆ. ಪಾಟೀಲ್
ಧಾರವಾಡ : ವಿನಯ್ ಕುಲಕರ್ಣಿ/ ಪ್ರಸಾದ್ ಅಬ್ಬಯ್ಯ
ಉತ್ತರ ಕನ್ನಡ: ಭೀಮಣ್ಣ ನಾಯಕ
ಹಾವೇರಿ: ರುದ್ರಪ್ಪ ಲಮಾಣಿ
ಬಳ್ಳಾರಿ: ತುಕಾರಾಮ್/ ನಾಗೇಂದ್ರ
ಚಿತ್ರದುರ್ಗ: ರಘುಮೂರ್ತಿ
ದಾವಣಗೆರೆ: ಶಿವಶಂಕರಪ್ಪ/ಎಸ್‌ಎಸ್ ಮಲ್ಲಿಕಾರ್ಜುನ್
ಶಿವಮೊಗ್ಗ: ಮಧು ಬಂಗಾರಪ್ಪ/ ಬಿ.ಕೆ. ಸಂಗಮೇಶ್
ಚಿಕ್ಕಮಗಳೂರು: ಟಿ.ಡಿ. ರಾಜೇಗೌಡ
ತುಮಕೂರು: ಡಾ. ಪರಮೇಶ್ವರ್/ಎಸ್.ಆರ್. ಶ್ರೀನಿವಾಸ್/ ಕೆ.ಎನ್. ರಾಜಣ್ಣ
ಚಿಕ್ಕಬಳ್ಳಾಪುರ : ಸುಬ್ಬಾರೆಡ್ಡಿ
ಕೋಲಾರ: ರೂಪ ಶಶೀಧರ್/ ನಾರಾಯಣ ಸ್ವಾಮಿ
ಬೆಂಗಳೂರು: ಕೆ.ಜೆ.ಜಾರ್ಚ್/ ರಾಮಲಿಂಗರೆಡ್ಡಿ/ಎಂ.ಕೃಷ್ಣಪ್ಪ/ ದಿನೇಶ್ ಗುಂಡೂರಾವ್/ ಜಮೀರ್ ಅಹ್ಮದ್/ ಬಿ. ಶಿವಣ್ಣ.
ಮಂಡ್ಯ: ಎಚ್.ಚೆಲುವರಾಯ ಸ್ವಾಮಿ/ಪಿ.ಎಣ. ನರೇಂದ್ರ ಸ್ವಾಮಿ (ದೆಹಲಿಯ ವಿಶೇಷ ಪ್ರತಿನಿಧಿ?)
ಮಂಗಳೂರು: ಯು.ಟಿ. ಖಾದರ್
ಮೈಸೂರು: ಎಚ್.ಸಿ. ಮಾಹದೇವಪ್ಪ/ ತನ್ವೀರ್ ಸೇಠ್
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಕೊಡಗು: ಎ.ಎಸ್. ಪೊನ್ನಣ್ಣ.
ಬೆಂಗಳೂರು ಗ್ರಾಮಾಂತರ: ಕೆ.ಎಚ್. ಮುನಿಯಪ್ಪ
ಇವರಲ್ಲದೆ, ವಿಧಾನ ಪರಿಷತ್ ಸದಸ್ಯರಾಗಿರುವ ಕೆಲವರು ಕೂಡ ಸಚಿವರಾಗಬಹುದು. ಸಂಭವ್ಯ ಅಭ್ಯರ್ಥಿಗಳೆಂದರೆ; ಬಿ.ಕೆ. ಹರಿಪ್ರಸಾದ್, ಸಲೀಂ ಅಹಮದ್, ನಜೀರ್ ಅಹಮದ್, ಮಂಜುನಾಥ ಭಂಡಾರಿ, ದಿನೇಶ್ ಗೂಳಿಗೌಡ.
ಇದನ್ನೂ ಓದಿ : Karnataka CM : ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಡಿಸಿಎಂ; ಎಐಸಿಸಿಯಿಂದ ಅಧಿಕೃತ ಘೋಷಣೆ