Site icon Vistara News

HD Kumaraswamy : Big Update; ಎಚ್‌ಡಿಕೆ ಹಾರ್ಟ್‌ ಸರ್ಜರಿ ಸಕ್ಸಸ್‌, ಮಂಡ್ಯಕ್ಕೆ ಕುಮಾರಣ್ಣನೇ ಅಭ್ಯರ್ಥಿ

HD Kumaraswamy Heart Surgery

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು (CS Puttaraju) ಅವರು BIG UPDATE ನೀಡಿದ್ದಾರೆ. ಮೊದಲನೆಯದು, ಚೆನ್ನೈಯ ಆಸ್ಪತ್ರೆಯಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರ ಹೃದಯ ಶಸ್ತ್ರ ಚಿಕಿತ್ಸೆ (Heart Surgery Success) ಯಶಸ್ವಿಯಾಗಿದೆ, ಎರಡನೆಯದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಣ್ಣನೇ ಅಭ್ಯರ್ಥಿ (HDK to Contest from Mandya).

ಮಡ್ಯದ ಪಾಂಡವಪುರದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್‌ ಪುಟ್ಟರಾಜು ಅವರು, ನಮ್ಮ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರ ಹೃದಯ ಶಸ್ತ್ರ ಚಿಕಿತ್ಸೆ ಚೆನ್ನೈನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಅಭಿಮಾನಿಗಳ ಪ್ರಾರ್ಥನೆ ಹಾಗೂ ದೇವೇಗೌಡ, ಚನ್ನಮ್ಮ ಅವರ ಆಶೀರ್ವಾದ ಕುಮಾರಣ್ಣ ಮೇಲಿದೆ. ಯಾವುದೇ ತೊಂದರೆ ಇಲ್ಲದಂತೆ ಕುಮಾರಣ್ಣ ಗುಣಮುಖರಾಗಿದ್ದಾರೆ. ಇನ್ನ ಮೂರ್ನಾಲ್ಕು ದಿನಗಳಲ್ಲಿ ಕುಮಾರಣ್ಣ ವಾಪಸ್ ಆಗಲಿದ್ದಾರೆ ಎಂದು ಹೇಳಿದರು. ನಮ್ಮ ಜಿಲ್ಲೆಯ ಎಲ್ಲಾ ನಾಯಕರು ಚಲುವನಾರಾಯಣ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಅದು ಫಲಿಸಲಿದೆ. ಕುಮಾರಣ್ಣ ಗುಣಮುಖರಾಗಲಿದ್ದಾರೆ ಎಂದು ಅವರು ಹೇಳಿದರು.

ಮಂಡ್ಯಕ್ಕೆ ನೂರಕ್ಕೆ ನೂರು ಕುಮಾರಣ್ಣನೇ ಅಭ್ಯರ್ಥಿ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನೂರಕ್ಕೆ ನೂರು ಕುಮಾರಣ್ಣನೇ ಅಭ್ಯರ್ಥಿಯಾಗಲಿದ್ದಾರೆ ಎಂದು ಪುಟ್ಟರಾಜು ಘೋಷಿಸಿದರು. ʻʻʻನಾನೇ ನಿಂತು ಕುಮಾರಣ್ಣ ಚುನಾವಣೆ ಮಾಡಲಿದ್ದೇನೆ. ಅತ್ಯಂತ ಪ್ರಚಂಡವಾಗಿ ಅವ್ರನ್ನ ಗೆಲ್ಲಿಸಲಿದ್ದೇವೆʼʼ ಎಂದು ಹೇಳಿದರು

ʻʻಕುಮಾರಣ್ಣ ನಾಮಪತ್ರ ಹಾಕಿದರೆ ಸಾಕು, ಚುನಾವಣೆ ನಾವು ಮಾಡ್ತೇವೆ. ದೇವೇಗೌಡರ ಆಶೀರ್ವಾದ, ಮೋದಿಯವರ ಸಹಕಾರದಿಂದ ಅತ್ಯಂತ ಬಹುಮತದಿಂದ ಗೆಲ್ಲಲಿದ್ದೇವೆʼʼ ಎಂದು ಅವರು ನುಡಿದರು.

ಕೋಲಾರ, ಮಂಡ್ಯ, ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವುದು ಖಚಿತ. ಅಲ್ಲಿಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಗೆಹರಿಸುವುದಾಗಿ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ ಅವರು, ಮಾರ್ಚ್‌ 22ರಂದು ಬಿಜೆಪಿಗೆ ಯಾವ ಕ್ಷೇತ್ರ, ಜೆಡಿಎಸ್‌ಗೆ ಯಾವ ಕ್ಷೇತ್ರ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ : Sumalatha Ambarish : ಮಾರ್ಚ್‌ 25ರವರೆಗೆ ಸುಮಲತಾ ಸೈಲೆಂಟ್‌, ನಂತರ ಏನಾಗಲಿದೆ?

ಸಿ.ಎಸ್‌. ಪುಟ್ಟರಾಜುಗೆ ಕಾಂಗ್ರೆಸ್‌ ಗಾಳ ಹಾಕಿದೆಯಾ?

ಕಾಂಗ್ರೆಸ್ ನಾಯಕರು ಸಿ.ಎಸ್‌. ಪುಟ್ಟರಾಜು ಅವರಿಗೆ ಗಾಳ ಹಾಕಿದ್ದಾರೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗೇ ಇರುತ್ತೇನೆ ಎಂದರು.

ಅಂಬರೀಷ್‌ ಸುಮಲತಾ ಅವರು ಕೂಡಾ ಮಂಡ್ಯ ಕ್ಷೇತ್ರದ ಟಿಕೆಟ್‌ಗೆ ಪಟ್ಟು ಹಿಡಿದಿರುವ ಬಗ್ಗೆ ಗಮನ ಸೆಳೆದಾಗ, ಹಿಂದೆ ರಾಜಕೀಯವಾಗಿ ವ್ಯತ್ಯಾಸಗಳು ಆಗಿವೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲಾ.
ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು. ಈ ಮೂಲಕ ಮಂ‌ಡ್ಯವನ್ನು ಸುಮಲತಾ ಅವರಿಗೆ ಬಿಟ್ಟು ಕೊಡುವ ಯಾವ ಸಾಧ್ಯತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version