Site icon Vistara News

MLA Muniratna : ಶಾಸಕ ಮುನಿರತ್ನ ವಿರುದ್ಧ ಮಹಿಳೆಯಿಂದ ಹನಿಟ್ರ್ಯಾಪ್ ಬಾಂಬ್!

Muniratna and CD Lady

ಬೆಂಗಳೂರು: ರಾಜ್ಯದಲ್ಲಿ ಸಿಡಿ ರಾಜಕಾರಣ ಮತ್ತೆ ತಲೆ ಎತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ಮಂದಿಯ ವಿರುದ್ಧ “ಸಿಡಿ” ಪ್ರಕರಣದ (CD case) ಸುದ್ದಿಗಳು ಕೇಳಿಬಂದಿದ್ದವು. ಕೆಲವು ಬಿಡುಗಡೆಯೂ ಆಗಿದ್ದಲ್ಲದೆ, ಅವುಗಳನ್ನು ಫೇಕ್‌ ಎಂದೂ ಹೇಳಲಾಗಿತ್ತು. ಆದರೆ, ಈಗ ಕರ್ನಾಟಕ ರಾಜಕೀಯದಲ್ಲಿ (Karnataka Politics) ಮತ್ತೊಂದು ಸಿಡಿ ಲೇಡಿ ಪ್ರತ್ಯಕ್ಷವಾಗಿದ್ದಾರೆ. ಅವರು ಮಾಜಿ ಸಚಿವ, ಶಾಸಕ ಮುನಿರತ್ನ (MLA Muniratna) ವಿರುದ್ಧ ನೇರ ಆರೋಪ ಮಾಡಿದ್ದು, ಸ್ಫೋಟಕ ಸಂಗತಿಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ. ತಮ್ಮಿಂದ ಹನಿಟ್ರ್ಯಾಪ್‌ ಮಾಡಿಸಿದ್ದಾರೆ. ಅಲ್ಲದೆ, ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪದ ಬಗ್ಗೆ ಮುನಿರತ್ನ ಅವರ ಮುಂದಿನ ನಡೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಆರ್. ಆರ್. ನಗರ ಶಾಸಕರಾಗಿರುವ ಮಾಜಿ ಸಚಿವ ಮುನಿರತ್ನ ವಿರುದ್ಧ ಈಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಹಿಳೆಯೊಬ್ಬರು ಹನಿಟ್ರ್ಯಾಪ್‌ ಆರೋಪ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಹೊಸ ಸಿಡಿ ಲೇಡಿ ಪ್ರತ್ಯಕ್ಷವಾದಂತೆ ಆಗಿದೆ.

ಸಿಡಿ ಲೇಡಿ ಆರೋಪ ಏನು?

ನನ್ನ ಜೀವನದ ಅಧೋಗತಿಗೆ ಕಾರಣವೇ ಮಿಸ್ಟರ್ ಮುನಿರತ್ನ. ಎಲ್ಲ ಪ್ಲ್ಯಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದೇ ಮುನಿರತ್ನ. ಅದಕ್ಕೋಸ್ಕರವೇ ನನ್ನ ಹೋರಾಟ. ಇದು ಅಂತ್ಯವಾಗಲೇಬೇಕು. ಬೇರೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎಂದು ಸಿಡಿ ಲೇಡಿ ವಿಡಿಯೊ ಮೂಲಕ ಗುಡುಗಿದ್ದಾರೆ.

ಫೇಸ್‌ಬುಕ್‌ ಪೇಜ್‌ನಲ್ಲಿ ಮಹಿಳೆ ಪ್ರತ್ಯಕ್ಷ

“ಒಕ್ಕಲಿಗರು ರಾಜರಾಜೇಶ್ವರಿ ನಗರ” (Vokkaligas Rajarajeshwarinagar) ಫೇಸ್​ಬುಕ್​​ ಪೇಜ್​​ನಲ್ಲಿ ಮಹಿಳೆ ಪ್ರತ್ಯಕ್ಷವಾಗಿದ್ದು, ಮಾಜಿ ಸಚಿವ ಮುನಿರತ್ನ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. “ನನ್ನ ಜೀವನದ ದುರಂತಕ್ಕೆ ಮುನಿರತ್ನ ಅವರೇ ಹೊಣೆ. ಯಾವ ಕಾರಣಕ್ಕೂ ಈ ಹೋರಾಟ ಕೈ ಬಿಡಲ್ಲ. ಮುನಿರತ್ನ ಅವರ ಹನಿಟ್ರ್ಯಾಪ್​​ ದಂಧೆ ಬಯಲಿಗೆ ಎಳೆಯುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Lingayat CM : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಅಸ್ತ್ರ ಡ್ಯಾಮೇಜ್? ಸಾಫ್ಟ್‌ ಆದ ಸಿದ್ದರಾಮಯ್ಯ!

ಮದುವೆ ಆಗುತ್ತೇನೆ ಎಂದು ಮೋಸ ಮಾಡಿದರು!

ನನ್ನನ್ನು ಬಳಸಿಕೊಂಡು ಹನಿ ಟ್ರ್ಯಾಪ್​​ ಮಾಡಿಸಿದ್ದಾರೆ. ಅಲ್ಲದೆ, ಮದುವೆ ಆಗುತ್ತೇನೆ ಎಂದು ಮುನಿರತ್ನ ನನಗೆ ಮೋಸ ಮಾಡಿದ್ದಾರೆ. ಅವರ ಮೇಲೆ ನಂಬಿಕೆ ಮೇಲೆ ನಾನು ಜತೆಗೆ ಹೋಗಿದ್ದೆ. ಆದರೆ, ಆ ನಂಬಿಕೆಗೆ ಅವರು ದ್ರೋಹ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಮಹಿಳೆ ತಮ್ಮ ಕೈಯಲ್ಲಿ ಒಂದು ದಾಖಲೆ ಮಾದರಿಯಲ್ಲಿ ಫೈಲ್‌ ಅನ್ನು ಇಟ್ಟುಕೊಂಡಿದ್ದಾರೆ. ಆದರೆ, ಅದರ ಪ್ರದರ್ಶನವನ್ನು ಮಾತ್ರ ಮಾಡಿಲ್ಲ. ಜತೆಗೆ ತಾನು ಯಾರು? ಮುಂದೇನು ಮಾಡುತ್ತೇನೆ ಎಂಬುದನ್ನೂ ಹೇಳಿಲ್ಲ. ಪೊಲೀಸ್‌ ಠಾಣೆಗೆ ಹೋಗುವ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಆ ಮಹಿಳೆ ತಮ್ಮ ಗುರುತನ್ನು ಮರೆಮಾಚಿಕೊಂಡು ವಿಡಿಯೊ ಮಾಡಿ ಅಪ್ಲೋಡ್‌ ಮಾಡಿದ್ದಾರೆ.

Exit mobile version