Site icon Vistara News

Jammu-Kashmir Polls: ಜಮ್ಮು-ಕಾಶ್ಮೀರ ಚುನಾವಣೆ; ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

Jammu-Kashmir Polls

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ (Jammu-Kashmir Polls)ಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಬಿಜೆಪಿ (BJP) 29 ಅಭ್ಯರ್ಥಿಗಳನ್ನೊಳಗೊಂಡ ತನ್ನ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 2ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 10 ಅಭ್ಯರ್ಥಿಗಳು ಮತ್ತು 3ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 19 ಅಭ್ಯರ್ಥಿಗಳು ಸೇರಿದ್ದಾರೆ. ಈ ಮೂಲಕ ಬಿಜೆಪಿ 3 ಪಟ್ಟಿಗಳಲ್ಲಿ ಇದುವರೆಗೆ 45 ಆಭ್ಯರ್ಥಿಗಳ ಹೆಸರು ಘೋಷಿಸಿದಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಹೊರ ಬೀಳಲಿದೆ. ಕೊನೆಯ ಬಾರಿ 2014ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಇಲ್ಲಿ ಒಟ್ಟು 90 ಸ್ಥಾನಗಳಿವೆ.

ಪಟ್ಟಿಯಲ್ಲಿ ಯಾರಿದ್ದಾರೆ?

ಹಬ್ಬಕದಲ್ – ಅಶೋಕ್ ಭಟ್
ಗುಲಾಬ್‌ಗಢ (ಎಸ್‌ಟಿ) – ಮೊಹಮ್ಮದ್ ಅಕ್ರಮ್ ಚೌಧರಿ
ರಿಯಾಸಿ – ಕುಲದೀಪ್ ರಾಜ್ ದುಬೆ
ಶ್ರೀ ಮಾತಾ ವೈಷ್ಣೋದೇವಿ – ಬಲದೇವ್ ರಾಜ್ ಶರ್ಮಾ
ಕಲಕೋಟೆ-ಸುಂದರಬಾನಿ – ಠಾಕೂರ್ ರಣಧೀರ್ ಸಿಂಗ್
ಬುಧಾಲ್ (ಎಸ್‌ಟಿ) – ಚೌಧರಿ ಜುಲ್ಫಿಕರ್ ಅಲಿ
ತನ್ನಮಂಡಿ (ಎಸ್‌ಟಿ) – ಮೊಹಮ್ಮದ್. ಇಕ್ಬಾಲ್ ಮಲಿಕ್
ಸೂರನ್ಕೋಟೆ (ಎಸ್‌ಟಿ) – ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ
ಪೂಂಚ್ ಹವೇಲಿ – ಚೌಧರಿ ಅಬ್ದುಲ್ ಘನಿ
ಮೆಂಧರ್ (ಎಸ್‌ಟಿ) – ಮುರ್ತಾಜಾ ಖಾನ್
ಉಧಂಪುರ್ ಪಶ್ಚಿಮ – ಪವನ್ ಗುಪ್ತ
ಚೆನಾನಿ – ಬಲ್ವಂತ್ ಸಿಂಗ್ ಮನ್ಕೋಟಿಯಾ
ರಾಮನಗರ (ಎಸ್‌ಸಿ) – ಸುನಿಲ್ ಭಾರದ್ವಾಜ್
ಬನಿ – ಜೀವನ್ ಲಾಲ್
ಬಿಲ್ಲಾವರ್ – ಸತೀಶ್ ಶರ್ಮಾ
ಬಸೋಹ್ಲಿ – ದರ್ಶನ್ ಸಿಂಗ್
ಜಸ್ರೋಟಾ – ರಾಜೀವ್ ಜಸ್ರೋಟಿಯಾ
ಹಿರಾನಗರ್ – ವಿಜಯ್ ಕುಮಾರ್ ಶರ್ಮಾ
ರಾಮಗಢ (ಎಸ್‌ಸಿ) – ಡಾ.ದೇವಿಂದರ್ ಕುಮಾರ್ ಮಾನ್ಯಲ್
ಸಾಂಬಾ – ಸುರ್ಜಿತ್ ಸಿಂಗ್ ಸ್ಲಾಥಿಯಾ
ವಿಜಯಪುರ – ಚಂದ್ರ ಪ್ರಕಾಶ್ ಗಂಗಾ
ಸುಚೇತ್ಗಢ್ (ಎಸ್‌ಸಿ) – ಘರು ರಾಮ್ ಭಗತ್
ಆರ್.ಎಸ್.ಪುರ-ಜಮ್ಮು ದಕ್ಷಿಣ – ಡಾ.ನರೀಂದರ್ ಸಿಂಗ್ ರೈನಾ
ಜಮ್ಮು ಪೂರ್ವ – ಯುಧ್ವೀರ್ ಸೇಥಿ
ನಗ್ರೋಟಾ – ಡಾ.ದೇವಿಂದರ್ ಸಿಂಗ್ ರಾಣಾ
ಜಮ್ಮು ಪಶ್ಚಿಮ – ಅರವಿಂದ್ ಗುಪ್ತಾ
ಜಮ್ಮು ಉತ್ತರ – ಶಾಮ್ ಲಾಲ್ ಶರ್ಮಾ
ಅಖ್ನೂರ್ (ಎಸ್‌ಸಿ) – ಮೋಹನ್ ಲಾಲ್ ಭಗತ್
ಛಂಬ್ – ರಾಜೀವ್ ಶರ್ಮಾ

ತ್ರಿಕೋನ ಸ್ಪರ್ಧೆ

ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆಯಲ್ಲಿ ಇನ್ನೂ ಭಿನ್ನಾಭಿಪ್ರಾಯಗಳನ್ನು ಹೊರಹಾಕಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ನೇತೃತ್ವದ ಪಿಡಿಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ (Free Electricity) ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆ (Old pension scheme)ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: Jammu-Kashmir Election: ರಂಗೇರಿದ ಚುನಾವಣೆ- ಫಾರೂಖ್‌ ಭೇಟಿಯಾದ ರಾಹುಲ್‌, ಖರ್ಗೆ; ಕಾಂಗ್ರೆಸ್‌-NC ಮೈತ್ರಿ ಕನ್ಫರ್ಮ್‌

Exit mobile version