Jammu-Kashmir Polls: ಜಮ್ಮು-ಕಾಶ್ಮೀರ ಚುನಾವಣೆ; ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ - Vistara News

ರಾಜಕೀಯ

Jammu-Kashmir Polls: ಜಮ್ಮು-ಕಾಶ್ಮೀರ ಚುನಾವಣೆ; ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

Jammu-Kashmir Polls: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಬಿಜೆಪಿ 29 ಅಭ್ಯರ್ಥಿಗಳನ್ನೊಳಗೊಂಡ ತನ್ನ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 2ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 10 ಅಭ್ಯರ್ಥಿಗಳು ಮತ್ತು 3ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 19 ಅಭ್ಯರ್ಥಿಗಳು ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಹೊರ ಬೀಳಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು.

VISTARANEWS.COM


on

Jammu-Kashmir Polls
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ (Jammu-Kashmir Polls)ಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಬಿಜೆಪಿ (BJP) 29 ಅಭ್ಯರ್ಥಿಗಳನ್ನೊಳಗೊಂಡ ತನ್ನ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 2ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 10 ಅಭ್ಯರ್ಥಿಗಳು ಮತ್ತು 3ನೇ ಹಂತದ ಚುನಾವಣೆಗೆ ಸ್ಪರ್ಧಿಸುವ 19 ಅಭ್ಯರ್ಥಿಗಳು ಸೇರಿದ್ದಾರೆ. ಈ ಮೂಲಕ ಬಿಜೆಪಿ 3 ಪಟ್ಟಿಗಳಲ್ಲಿ ಇದುವರೆಗೆ 45 ಆಭ್ಯರ್ಥಿಗಳ ಹೆಸರು ಘೋಷಿಸಿದಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಹೊರ ಬೀಳಲಿದೆ. ಕೊನೆಯ ಬಾರಿ 2014ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಇಲ್ಲಿ ಒಟ್ಟು 90 ಸ್ಥಾನಗಳಿವೆ.

ಪಟ್ಟಿಯಲ್ಲಿ ಯಾರಿದ್ದಾರೆ?

ಹಬ್ಬಕದಲ್ – ಅಶೋಕ್ ಭಟ್
ಗುಲಾಬ್‌ಗಢ (ಎಸ್‌ಟಿ) – ಮೊಹಮ್ಮದ್ ಅಕ್ರಮ್ ಚೌಧರಿ
ರಿಯಾಸಿ – ಕುಲದೀಪ್ ರಾಜ್ ದುಬೆ
ಶ್ರೀ ಮಾತಾ ವೈಷ್ಣೋದೇವಿ – ಬಲದೇವ್ ರಾಜ್ ಶರ್ಮಾ
ಕಲಕೋಟೆ-ಸುಂದರಬಾನಿ – ಠಾಕೂರ್ ರಣಧೀರ್ ಸಿಂಗ್
ಬುಧಾಲ್ (ಎಸ್‌ಟಿ) – ಚೌಧರಿ ಜುಲ್ಫಿಕರ್ ಅಲಿ
ತನ್ನಮಂಡಿ (ಎಸ್‌ಟಿ) – ಮೊಹಮ್ಮದ್. ಇಕ್ಬಾಲ್ ಮಲಿಕ್
ಸೂರನ್ಕೋಟೆ (ಎಸ್‌ಟಿ) – ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ
ಪೂಂಚ್ ಹವೇಲಿ – ಚೌಧರಿ ಅಬ್ದುಲ್ ಘನಿ
ಮೆಂಧರ್ (ಎಸ್‌ಟಿ) – ಮುರ್ತಾಜಾ ಖಾನ್
ಉಧಂಪುರ್ ಪಶ್ಚಿಮ – ಪವನ್ ಗುಪ್ತ
ಚೆನಾನಿ – ಬಲ್ವಂತ್ ಸಿಂಗ್ ಮನ್ಕೋಟಿಯಾ
ರಾಮನಗರ (ಎಸ್‌ಸಿ) – ಸುನಿಲ್ ಭಾರದ್ವಾಜ್
ಬನಿ – ಜೀವನ್ ಲಾಲ್
ಬಿಲ್ಲಾವರ್ – ಸತೀಶ್ ಶರ್ಮಾ
ಬಸೋಹ್ಲಿ – ದರ್ಶನ್ ಸಿಂಗ್
ಜಸ್ರೋಟಾ – ರಾಜೀವ್ ಜಸ್ರೋಟಿಯಾ
ಹಿರಾನಗರ್ – ವಿಜಯ್ ಕುಮಾರ್ ಶರ್ಮಾ
ರಾಮಗಢ (ಎಸ್‌ಸಿ) – ಡಾ.ದೇವಿಂದರ್ ಕುಮಾರ್ ಮಾನ್ಯಲ್
ಸಾಂಬಾ – ಸುರ್ಜಿತ್ ಸಿಂಗ್ ಸ್ಲಾಥಿಯಾ
ವಿಜಯಪುರ – ಚಂದ್ರ ಪ್ರಕಾಶ್ ಗಂಗಾ
ಸುಚೇತ್ಗಢ್ (ಎಸ್‌ಸಿ) – ಘರು ರಾಮ್ ಭಗತ್
ಆರ್.ಎಸ್.ಪುರ-ಜಮ್ಮು ದಕ್ಷಿಣ – ಡಾ.ನರೀಂದರ್ ಸಿಂಗ್ ರೈನಾ
ಜಮ್ಮು ಪೂರ್ವ – ಯುಧ್ವೀರ್ ಸೇಥಿ
ನಗ್ರೋಟಾ – ಡಾ.ದೇವಿಂದರ್ ಸಿಂಗ್ ರಾಣಾ
ಜಮ್ಮು ಪಶ್ಚಿಮ – ಅರವಿಂದ್ ಗುಪ್ತಾ
ಜಮ್ಮು ಉತ್ತರ – ಶಾಮ್ ಲಾಲ್ ಶರ್ಮಾ
ಅಖ್ನೂರ್ (ಎಸ್‌ಸಿ) – ಮೋಹನ್ ಲಾಲ್ ಭಗತ್
ಛಂಬ್ – ರಾಜೀವ್ ಶರ್ಮಾ

ತ್ರಿಕೋನ ಸ್ಪರ್ಧೆ

ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮತ್ತು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆಯಲ್ಲಿ ಇನ್ನೂ ಭಿನ್ನಾಭಿಪ್ರಾಯಗಳನ್ನು ಹೊರಹಾಕಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ನೇತೃತ್ವದ ಪಿಡಿಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ (Free Electricity) ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆ (Old pension scheme)ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: Jammu-Kashmir Election: ರಂಗೇರಿದ ಚುನಾವಣೆ- ಫಾರೂಖ್‌ ಭೇಟಿಯಾದ ರಾಹುಲ್‌, ಖರ್ಗೆ; ಕಾಂಗ್ರೆಸ್‌-NC ಮೈತ್ರಿ ಕನ್ಫರ್ಮ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯೂ ಎಲೆಕ್ಷನ್ ವಾಚ್‌ನ ವರದಿಯ ಪ್ರಕಾರ 2009ರಿಂದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಅದರಲ್ಲೂ ಮಹಿಳೆಯರ ವಿರುದ್ದದ ಅಪರಾಧ (Crimes Against Women) ಪ್ರಕರಣಗಳಲ್ಲಿ ಬಿಜೆಪಿಯ ಹೆಚ್ಚಿನ ಸಂಸದರು, ಶಾಸಕರು ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

VISTARANEWS.COM


on

By

Crimes Against Women
Koo

ನವದೆಹಲಿ: ಮಹಿಳೆಯರ ವಿರುದ್ಧ ಅಪರಾಧ (Crimes Against Women) ಪ್ರಕರಣಗಳಲ್ಲಿ ಒಟ್ಟು 151 ಹಾಲಿ ಸಂಸದರು ಮತ್ತು ಶಾಸಕರು ಭಾಗಿಯಾಗಿರುವುದಾಗಿ ಘೋಷಿಸಿದ್ದಾರೆ. ರಾಜಕೀಯ ಪಕ್ಷದಲ್ಲಿ ಭಾರತೀಯ ಜನತಾ ಪಕ್ಷ (BJP) ಮತ್ತು ರಾಜ್ಯದ ಪೈಕಿ ಪಶ್ಚಿಮ ಬಂಗಾಳ (West Bengal) ಅತಿ ಹೆಚ್ಚು ಶಾಸಕರು, ಸಂಸದರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವರದಿಯೊಂದು ತಿಳಿಸಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯೂ ಎಲೆಕ್ಷನ್ ವಾಚ್ (NEW) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ಹಾಲಿ ಸಂಸದರು ಮತ್ತು ಶಾಸಕರ 4,809 ಚುನಾವಣಾ ಅಫಿಡವಿಟ್‌ಗಳಲ್ಲಿ 4,693 ಅನ್ನು ವಿಶ್ಲೇಷಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಹಾಲಿ ಸಂಸದರ 776 ಅಫಿಡವಿಟ್‌ಗಳಲ್ಲಿ 755 ಮತ್ತು 4,033 ಹಾಲಿ ಶಾಸಕರ ಪೈಕಿ 3,938 ವಿಶ್ಲೇಷಣೆಯನ್ನು ಒಳಗೊಂಡಿದೆ.

ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿ ಘೋಷಿತ ಪ್ರಕರಣಗಳನ್ನು ಹೊಂದಿರುವ 151 ಹಾಲಿ ಸಂಸದರು ಮತ್ತು ಶಾಸಕರ ಪೈಕಿ 16 ಸಂಸದರು ಮತ್ತು 135 ಶಾಸಕರಿದ್ದಾರೆ ಎಂದು ವರದಿ ಹೇಳಿದೆ.

Crimes Against Women
Crimes Against Women


ಪಕ್ಷಗಳ ಪೈಕಿ ಬಿಜೆಪಿಗೆ ಮೊದಲ ಸ್ಥಾನ

ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸಂಸದರು ಮತ್ತು ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. ಮಹಿಳೆಯರ ವಿರುದ್ಧದ ಅಪರಾಧಗಳ ಘೋಷಿತ ಪ್ರಕರಣಗಳಲ್ಲಿ ಬಿಜೆಪಿಯ 54, ಕಾಂಗ್ರೆಸ್ ನ 23, ತೆಲುಗು ದೇಶಂ ಪಕ್ಷದ (ಟಿಡಿಪಿ) 17 ಶಾಸಕ, ಸಂಸದರು ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹೆಚ್ಚು

ರಾಜ್ಯಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧಗಳ ಘೋಷಿತ ಪ್ರಕರಣಗಳೊಂದಿಗೆ 25 ಸಂಸದರು ಮತ್ತು ಶಾಸಕರು ಪಶ್ಚಿಮ ಬಂಗಾಳದವರಾಗಿದ್ದರೆ. ಆಂಧ್ರಪ್ರದೇಶದಲ್ಲಿ 21, ಒಡಿಶಾದಲ್ಲಿ 17 ಮಾಡಿ ಇದ್ದು, ಅನಂತರದ ಸ್ಥಾನದಲ್ಲಿದೆ.

16 ಜನಪ್ರತಿನಿಧಿಗಳ ಮೇಲೆ ಅತ್ಯಾಚಾರ ಪ್ರಕರಣ

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಘೋಷಿಸಿರುವ ಒಟ್ಟು 151 ಸಂಸದರು ಮತ್ತು ಶಾಸಕರ ಪೈಕಿ 16 ಹಾಲಿ ಶಾಸಕರು ಅತ್ಯಾಚಾರ ಪ್ರಕರಣಗಳನ್ನು ಘೋಷಿಸಿದ್ದಾರೆ. ಈ 16 ಮಂದಿಯಲ್ಲಿ ಇಬ್ಬರು ಹಾಲಿ ಸಂಸದರಾಗಿದ್ದು, ಉಳಿದ 14 ಮಂದಿ ಶಾಸಕರಾಗಿದ್ದಾರೆ.

ಪಕ್ಷಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅತ್ಯಧಿಕ ಸಂಖ್ಯೆಯ ಹಾಲಿ ಸಂಸದರು ಮತ್ತು ಶಾಸಕರನ್ನು ಹೊಂದಿದ್ದು, ತಲಾ ಐದು ಅತ್ಯಾಚಾರ ಪ್ರಕರಣಗಳನ್ನು ಹೊಂದಿದ್ದಾರೆ. ರಾಜ್ಯಗಳ ಪೈಕಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳವು ಅತ್ಯಾಚಾರಕ್ಕೆ ಸಂಬಂಧಿಸಿದ ಘೋಷಿತ ಪ್ರಕರಣಗಳೊಂದಿಗೆ ಅತಿ ಹೆಚ್ಚು ಶಾಸಕರನ್ನು ಹೊಂದಿದ್ದು, ತಲಾ ಇಬ್ಬರನ್ನು ಹೊಂದಿದೆ.

ಅಪರಾಧ ಪ್ರಕರಣ ಹೆಚ್ಚಳ

2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಮತ್ತು ಇತರ ವಿವರಗಳನ್ನು ವಿಶ್ಲೇಷಿಸುವ ಎಡಿಆರ್ ಮತ್ತು ನ್ಯೂ ನ ಪ್ರತ್ಯೇಕ ವರದಿಯು ಇತ್ತೀಚೆಗೆ ಬಿಡುಗಡೆ ಮಾಡಿದ್ದು, 2009 ರಿಂದ ಘೋಷಿತ ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆ ಶೇ. 124ರಷ್ಟು ಹೆಚ್ಚಳವಾಗಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಪೈಕಿ ಶೇ. 31 ಅಂದರೆ 170 ಅಭ್ಯರ್ಥಿಗಳು ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಇತ್ಯಾದಿಗಳಿಗೆ ಸಂಬಂಧಿಸಿದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.

2019 ರಲ್ಲಿ 539 ಮಂದಿ ಗೆದ್ದಿದ್ದು, ಶೇ. 29ರಷ್ಟು ಅಂದರೆ 159 ಮಂದಿ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.

2014 ರಲ್ಲಿ, 542 ಸಂಸದರಲ್ಲಿ 112 ಅಂದರೆ ಶೇ. 21ರಷ್ಟು ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

2009 ರಲ್ಲಿ ವಿಶ್ಲೇಷಿಸಲಾದ 543 ಸಂಸದರಲ್ಲಿ 76 ಅಂದರೆ ಶೇ. 14ರಷ್ಟು ಸಂಸದರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದರು.


ಇದನ್ನೂ ಓದಿ: Physical Abuse : ಡಜನ್‌ಗಟ್ಟಲೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಮಾಡಿ ಬೆದರಿಸುತ್ತಿದ್ದ ವ್ಯಕ್ತಿ ಬಂಧನ

ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆಗಳು ಶೇ. 15.3 ಆಗಿದ್ದರೆ, ಶುದ್ಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಯು ಗೆಲ್ಲುವ ಸಾಧ್ಯತೆ ಶೇ. 4.4 ಎಂದು ವರದಿ ತಿಳಿಸಿದೆ.

18ನೇ ಲೋಕಸಭೆಯಲ್ಲಿ ಪಕ್ಷಗಳ ಪೈಕಿ ಬಿಜೆಪಿಯು ತನ್ನ 240 ವಿಜೇತ ಅಭ್ಯರ್ಥಿಗಳಲ್ಲಿ 94 ಅಭ್ಯರ್ಥಿಗಳು ಘೋಷಿತ ಕ್ರಿಮಿನಲ್ ಪ್ರಕರಣಗಳೊಂದಿಗೆ ಅತಿ ಹೆಚ್ಚು ಸಂಸದರನ್ನು ಹೊಂದಿದೆ. ಇದರ ಅನಂತರ ಕಾಂಗ್ರೆಸ್ 49, ಮತ್ತು ಸಮಾಜವಾದಿ ಪಕ್ಷದ 21 ಮಂದಿ ಸಂಸದರು ಘೋಷಿತ ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದಾರೆ.

Continue Reading

ಸಿನಿಮಾ

Kangana Ranaut: ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೂ ಮುನ್ನ ಶಿರಚ್ಛೇದದ ಬೆದರಿಕೆ; ಪೊಲೀಸರ ಸಹಾಯ ಕೇಳಿದ ಕಂಗನಾ

ಸೆಪ್ಟೆಂಬರ್ 6 ರಂದು ಚಿತ್ರಮಂದಿರಗಳಲ್ಲಿ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಸಾಮಾಜಿಕ ಮಾಧ್ಯಮದ ಮೂಲಕ ಕಂಗನಾ ರಣಾವತ್ ಗೆ (Kangana Ranaut) ಶಿರಚ್ಛೇದದ ಬೆದರಿಕೆ ಬಂದಿದ್ದು, ಅವರು ಪೊಲೀಸರ ರಕ್ಷಣೆ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

VISTARANEWS.COM


on

By

Kangana Ranaut
Koo

ಮುಂಬೈ: ಬಹುನಿರೀಕ್ಷಿತ ಬಾಲಿವುಡ್‌ನ ʼಎಮರ್ಜೆನ್ಸಿʼ ಚಿತ್ರ (Emergency Movie) ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದ (Social media) ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನಟಿ (actress), ಬಿಜೆಪಿ ಸಂಸದೆ (BJP MP) ಕಂಗನಾ ರಣಾವತ್ (Kangana Ranaut) ಪೊಲೀಸರ ಸಹಾಯವನ್ನು ಕೋರಿದ್ದಾರೆ. ಸೆಪ್ಟೆಂಬರ್ 6ರಂದು ʼಎಮರ್ಜೆನ್ಸಿʼ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ನಟಿಸುವ ಜತೆಗೆ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ಒಂದು ವೇಳೆ ಈ ಚಿತ್ರ ಬಿಡುಗಡೆಯಾದರೆ ನೀವು ಸರ್ದಾರರಿಂದ ಚಪ್ಪಲಿ ಏಟು ಪಡೆಯುತ್ತೀರಿ. ನಾನು ಅತ್ಯಂತ ಹೆಮ್ಮೆಯ ಭಾರತೀಯ. ನನ್ನ ದೇಶದಲ್ಲಿ, ನನ್ನ ಮಹಾರಾಷ್ಟ್ರದಲ್ಲಿ ನಾನು ಎಲ್ಲಿಯಾದರೂ ನಿಮ್ಮನ್ನು ಕಂಡರೆ ನಾನು ಸಿಖ್ ಮತ್ತು ಹೆಮ್ಮೆಯ ಮರಾಠಿ ಎಂದು ಹೇಳುತ್ತೇನೆ. ನನ್ನ ಎಲ್ಲ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರು ಸಹ ಚಪ್ಪಲಿಗಳೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.

ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಕಂಗನಾ, “ದಯವಿಟ್ಟು ಇದನ್ನು ನೋಡಿ” ಎಂದು ಬರೆದು ಹಿಮಾಚಲ, ಮಹಾರಾಷ್ಟ್ರ ಮತ್ತು ಪಂಜಾಬ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.


ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಚಿತ್ರದಲ್ಲಿ ಸಿಖ್ಖರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದಾರೆ. ಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ನಿಜವಾಗಿ ಆಗಿದೆಯೇ? ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಯಾರೆಂದು ನೆನಪಿಸಿಕೊಳ್ಳಿ. ಯಾರ ಮೇಲೆ ನಾವು ಬೆರಳು ತೋರಿಸುತ್ತೇವೆಯೋ ಉಳಿದ ಬೆರಳು ಗಳು ನಮ್ಮನ್ನು ತೋರಿಸುತ್ತವೆ. ನಮಗೆ ತಲೆಯ ಬಲಿ ನೀಡಲೂ ಗೊತ್ತಿದೆ, ತಲೆ ಕಡಿಯಲು ಗೊತ್ತಿದೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೂಡಲೇ ಕಂಗನಾ ಸುರಕ್ಷತೆಯ ಬಗ್ಗೆ ಹಲವು ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು, ನಮ್ಮ ರಾಷ್ಟ್ರದಲ್ಲಿ ಏನಾಗುತ್ತಿದೆ? ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಜನರು ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸರಳವಾಗಿ ಭಾರತದ ಇತಿಹಾಸವನ್ನು ಚಿತ್ರಿಸಲು, ದೇಶದ ಬಲಿಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರೆಂದು ಹೇಳಿಕೊಳ್ಳುವ ಭಾರತದ ಉಕ್ಕಿನ ಮಹಿಳೆಯ ಕಥೆಯನ್ನು ಹೇಳುವುದು ತಪ್ಪೇ? ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸುರಕ್ಷತೆಗಾಗಿ ನಾವು ನಿಜವಾಗಿಯೂ ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

Continue Reading

ರಾಜಕೀಯ

Mayawati: ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಯಾವತಿ ಮರು ಆಯ್ಕೆ

Mayawati: ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕಿ ಮಾಯಾವತಿ ಮರು ಆಯ್ಕೆಯಾಗಿದ್ದಾರೆ. 68 ವರ್ಷದ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಎರಡು ದಶಕಗಳ ಹಿಂದೆ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

VISTARANEWS.COM


on

Mayawati
Koo

ಲಕ್ನೋ: ಬಹುಜನ ಸಮಾಜ ಪಾರ್ಟಿ (Bahujan Samaj Party)ಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕಿ ಮಾಯಾವತಿ (Mayawati) ಮರು ಆಯ್ಕೆಯಾಗಿದ್ದಾರೆ. ಬಿಎಸ್‌ಪಿ ಕೇಂದ್ರ ಕಾರ್ಯಕಾರಿ ಸಮಿತಿ (Central Executive Committee), ರಾಷ್ಟ್ರೀಯ ಮಟ್ಟದ ಹಿರಿಯ ಪದಾಧಿಕಾರಿಗಳು, ರಾಜ್ಯ ಪಕ್ಷದ ಘಟಕಗಳು ಮತ್ತು ದೇಶಾದ್ಯಂತ ಆಯ್ಕೆಯಾದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

68 ವರ್ಷದ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಎರಡು ದಶಕಗಳ ಹಿಂದೆ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

ಮಾಯಾವತಿ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮಾಯಾವತಿ ಅವರು, “ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ನನ್ನ ಅನುಪಸ್ಥಿತಿಯಲ್ಲಿ ಅಥವಾ ತೀವ್ರ ಅನಾರೋಗ್ಯದ ಸಮಯದಲ್ಲಿ ಪಕ್ಷವು ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ಉತ್ತರಾಧಿಕಾರಿಯಾಗಿ ನೇಮಿಸಿದಾಗ ಜಾತಿವಾದಿ ಮಾಧ್ಯಮಗಳು ಜನರು ಜಾಗರೂಕರಾಗಿರಬೇಕು ಎಂಬ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ” ಎಂದು ಕಿಡಿಕಾರಿದ್ದಾರೆ.

“ನಾನು ಮತ್ತೊಮ್ಮೆ ಬಹುಜನ ಸಮಾಜ ಪಕ್ಷ (BSP)ದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದೇನೆ ಮತ್ತು ಇದಕ್ಕಾಗಿ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದವರ ಮಾನವೀಯ ಧ್ಯೇಯವನ್ನು ಮುನ್ನಡೆಸಲು ಯಾವುದೇ ತ್ಯಾಗ ಮಾಡಲು ಸಿದ್ಧ ಎಂದು ಮಾಯಾವತಿ ಅವರು ಪಕ್ಷದ ಅನುಯಾಯಿಗಳಿಗೆ ಭರವಸೆ ನೀದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಮಾಯಾವತಿ ಅವರು ಸಾಮಾಜಿಕ ಜಾಲತಾಣ ತಾಣದಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ಯಾರಿವರು ಆಕಾಶ್‌ ಆನಂದ್?

ಬಿಎಸ್‌ಪಿಯ ಉತ್ತರಾಧಿಕಾರಿಯಾಗಿ ಕೆಲವು ದಿನಗಳ ಹಿಂದೆ ಆಯ್ಕೆಯಾದ ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದ್ದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಪಾದಯಾತ್ರೆ ಸಂಘಟಿಸಿದ್ದ ಆಕಾಶ್ ಆನಂದ್

ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಯಾತ್ರೆ ನಡೆಸಿದ್ದರು.

ಇದನ್ನೂ ಓದಿ: Asad Encounter: ಅಸಾದ್ ಅಹ್ಮದ್ ಎನ್​ಕೌಂಟರ್​​ ನಕಲಿ ಎಂದ ಅಖಿಲೇಶ್ ಯಾದವ್​; ತನಿಖೆಯಾಗಲಿ ಎಂದ ಮಾಯಾವತಿ

Continue Reading

ದೇಶ

K Kavitha: ದಿಲ್ಲಿ ಮದ್ಯ ನೀತಿ ಹಗರಣ: ಕವಿತಾಗೆ ಬಿಗ್‌ ರಿಲೀಫ್‌; ಸುಪ್ರೀಂ ಕೋರ್ಟ್‌ನಿಂದ ಜಾಮೀನು

K Kavitha: ದಿಲ್ಲಿ ಮದ್ಯ ನೀತಿ ಹಗರಣದಲ್ಲಿ ಬಂಧಿಸ್ಪಟ್ಟ ಬಿಆರ್‌ಎಸ್ ನಾಯಕಿ, ಎಂಎಲ್‌ಸಿ ಕೆ. ಕವಿತಾ ಅವರಿಗೆ ಕೊನೆಗೂ ರಿಲೀಫ್‌ ಸಿಕ್ಕಿದೆ. ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್‌ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

VISTARANEWS.COM


on

K Kavitha
Koo

ನವದೆಹಲಿ: ದಿಲ್ಲಿ ಮದ್ಯ ನೀತಿ ಹಗರಣದಲ್ಲಿ ಬಂಧಿಸ್ಪಟ್ಟ ಬಿಆರ್‌ಎಸ್ (Bharat Rashtra Samithi) ನಾಯಕಿ, ಎಂಎಲ್‌ಸಿ ಕೆ. ಕವಿತಾ (K Kavitha) ಅವರಿಗೆ ಕೊನೆಗೂ ರಿಲೀಫ್‌ ಸಿಕ್ಕಿದೆ. ಅವರಿಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ (ಆಗಸ್ಟ್‌ 27) ಜಾಮೀನು ಮಂಜೂರು ಮಾಡಿದೆ. ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಮತ್ತು ಒಂದು ತಿಂಗಳ ನಂತರ ಸಿಬಿಐ ಕವಿತಾ ಅವರನ್ನು ಬಂಧಿಸಿತ್ತು. ಇದೀಗ ಹಲವು ದಿನಗಳ ನಂತರ ಅವರಿಗೆ ಷರತ್ತುಬದ್ಧ ಜಾಮೀನು ಲಭಿಸಿದೆ.

ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಕೆ.ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯ ಇದೆ ಎಂಬುದನ್ನು ತೋರಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಕೇಳಿದೆ.

ಈ ಪ್ರಕರಣದಲ್ಲಿ ಜಾಮೀನು ಪಡೆದ ಎರಡನೇ ನಾಯಕಿ ಕವಿತಾ. ಕಳೆದ ವರ್ಷ ಫೆಬ್ರವರಿಯಲ್ಲಿ ಬಂಧಿಸಲ್ಪಟ್ಟ ಮನೀಷ್‌ ಸಿಸೋಡಿಯಾ ಅವರನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡೂ ಸಂಸ್ಥೆಗಳಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇ.ಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಸಿಬಿಐ ಸಲ್ಲಿಸಿದ ಪ್ರಕರಣದಲ್ಲಿ ಇನ್ನೂ ಜಾಮೀನು ಪಡೆದಿಲ್ಲ. ಹೀಗಾಗಿ ಅವರು ಇನ್ನೂ ಜೈಲಿನಲ್ಲಿದ್ದಾರೆ.

ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್‌ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಜಾಮೀನು ಆದೇಶ ಹೊರಡಿಸಿದ ಸ್ವಲ್ಪ ಸಮಯದ ನಂತರ ಬಿಆರ್‌ಎಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, “ಕವಿತಾ ಅವರನ್ನು 166 ದಿನಗಳ ಕಾಲ ಅಕ್ರಮವಾಗಿ ಬಂಧಿಸಲಾಯಿತು. ಜತೆಗೆ ಯಾವುದೇ ಪುರಾವೆಗಳನ್ನು ಹಾಜರುಪಡಿಸರಿಲ್ಲ. ಕೊನೆಗೂ ರಾಜಕೀಯ ಪ್ರೇರಿತ ಪ್ರಕರಣದಲ್ಲಿ ನ್ಯಾಯ ಗೆದ್ದಿದೆʼʼ ಎಂದು ಬರೆದುಕೊಂಡಿದೆ.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೀಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಇಲ್ಲಿಯ ತನಕ ನಡೆದ ತನಿಖೆಯ ಪ್ರಕಾರ ಒಟ್ಟು 1,100 ಕೋಟಿ ರೂ. ಮೊತ್ತದ ಹಗರಣ ನಡೆದಿರುವುದು ಕಂಡು ಬಂದಿದೆ. ಕವಿತಾ, ಚಂಪ್ರೀತ್ ಸಿಂಗ್, ಪ್ರಿನ್ಸ್ ಕುಮಾರ್, ದಾಮೋದರ್ ಶರ್ಮಾ ಮತ್ತು ಅರವಿಂದ್ ಸಿಂಗ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿತ್ತು.

ಇದನ್ನೂ ಓದಿ: Arvind Kejriwal: “ಜೈಲಿನಲ್ಲಿ ಕೇಜ್ರಿವಾಲ್‌ ಹತ್ಯೆಗೆ ಸಂಚು”- ಸಂಚಲನ ಮೂಡಿಸ್ತಿದೆ ಆಪ್‌ ಆರೋಪ

Continue Reading
Advertisement
Hair Combing
ಆರೋಗ್ಯ49 mins ago

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

dhavala dharini column Hanuman's setubandha to meet Sugriva in ramayana by narayana yaji
ಅಂಕಣ49 mins ago

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

karnataka weather Forecast
ಮಳೆ2 hours ago

Karnataka Weather : ಬೆಂಗಳೂರಿನಲ್ಲಿ ಘಳಿಗೆವೊಂದು ವಾತಾವರಣ; ಕರಾವಳಿಗೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ3 hours ago

Dina Bhavishya: ಈ ದಿನ ಆತ್ಮೀಯರೊಂದಿಗೆ ಕಾಲ ಕಳೆಯುವಿರಿ; ಆದ್ರೆ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ

Murder Case
ಬೆಂಗಳೂರು11 hours ago

Murder Case: ಶೀಲ ಶಂಕೆ; ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಭೀಕರ ಹತ್ಯೆ

Actor Darshan
ಬೆಂಗಳೂರು12 hours ago

Actor Darshan: ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ಆ.31ಕ್ಕೆ ನಿರ್ಧಾರ

Fashion Trend
ಫ್ಯಾಷನ್13 hours ago

Fashion Trend: ಕಟೌಟ್‌ ಪ್ಯಾಂಟ್‌ ಸೂಟ್‌; ಗ್ಲಾಮರಸ್‌ ಯುವತಿಯರ ಲೇಟೆಸ್ಟ್ ಆಯ್ಕೆ!

Stray Dogs Attack
ಕ್ರೈಂ13 hours ago

Stray Dogs Attack: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ

R Ashok
ಬೆಂಗಳೂರು13 hours ago

R Ashok: ರಾಜ್ಯ ಸರ್ಕಾರದಿಂದ ದ್ವೇಷ ರಾಜಕಾರಣ; ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದ ಆರ್‌. ಅಶೋಕ್‌

karnataka weather Forecast
ಮಳೆ13 hours ago

Karnataka Weather : ನಿರಂತರ ಮಳೆಗೆ ಮನೆ ಗೋಡೆ ಕುಸಿತ; ಮಹಿಳೆ ಆಸ್ಪತ್ರೆ ಪಾಲು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ5 days ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌