Site icon Vistara News

K J George Profile : ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲೊಬ್ಬರು ಕೆ ಜೆ ಜಾರ್ಜ್‌

Malicious post against Minister George Arrest of IT cell employee of BRS party

ಕೆ ಜೆ ಜಾರ್ಜ್: ಇವರ ಪೂರ್ಣ ಹೆಸರು ಕೇಳಚಂದ್ರ ಜೋಸೆಫ್ ಜಾರ್ಜ್. ಇವರಿಗೀಗ 76 ವರ್ಷ. ಕಾಂಗ್ರೆಸ್‌ ಮುಂಚೂಣಿ ಪಡೆಯ ನಾಯಕರಲ್ಲಿ ಕೆ ಜೆ ಜಾರ್ಜ್‌ (K J George) ಪ್ರಮುಖರು. ಕ್ರಿಶ್ಚಿಯನ್ ಸಮುದಾಯದ ಜೋಸೆಫ್ ಕೇಳಚಂದ್ರ ಚಾಕೋ ಮತ್ತು ಮರಿಯಮ್ಮ ದಂಪತಿಯ ಪುತ್ರ ಇವರು. ತಮ್ಮ ಬಾಲ್ಯವನ್ನು ಇವರು ಕಳೆದಿದ್ದು ಕೊಡಗಿನಲ್ಲಿ.

2018ರ ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಜಾರ್ಜ್‌ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದರು. ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಕರ್ನಾಟಕ ಗೃಹ ಸಚಿವ ಹೊಣೆಯನ್ನೂ ಅವರು ನಿಭಾಯಿಸಿದ್ದಾರೆ. ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಎಸ್. ಬಂಗಾರಪ್ಪ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಮುಂತಾದ ಖಾತೆಗಳನ್ನು ನಿಭಾಯಿಸಿದ್ದರು.

ತಮ್ಮ ರಾಜಕೀಯ ಜೀವನವನ್ನು ಗೋಣಿಕೊಪ್ಪಲು ಪಟ್ಟಣದಿಂದ ಆರಂಭಿಸಿದ್ದರು ಜಾರ್ಜ್‌. ಸುಜಾ ಇವರ ಪತ್ನಿ. ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಇವರ ಮಕ್ಕಳು.

ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್‌ ಅವರು, ಡಿವೈಎಸ್‌ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿದ್ದರು. ಇವರ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಜಾರ್ಜ್‌ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಇವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆದಿತ್ತು. ಸುಪ್ರೀಂ ಕೋರ್ಟ್‌ ಕೂಡ ಈ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾರ್ಜ್‌ ರಾಜೀನಾಮೆ ನೀಡಿದ್ದರು. ಆ ಬಳಿಕ ಇವರಿಗೆ ಈ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿತ್ತು. ಹಾಗಾಗಿ ಸಿದ್ದರಾಮಯ್ಯ ಅವರು ಇವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದರು.

ರಾಜಕೀಯ ಬದುಕಿನ ಹಿನ್ನೋಟ…
1968ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
1969ರಲ್ಲಿ ಗೋಣಿಕೊಪ್ಪಲು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ.
1971-72ರಲ್ಲಿ ವಿರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ.
1975-78ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಖಜಾಂಚಿ
1982-85ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿ
1985-89ರಲ್ಲಿ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
1989-94ರಲ್ಲಿ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
1989-91ರಲ್ಲಿ ಸಾರಿಗೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ರಾಜ್ಯ ಸಚಿವ
1991-93ರಲ್ಲಿ ವಸತಿ ಮತ್ತು ನಗರ ಅಭಿವೃದ್ಧಿ ಖಾತೆಯ ಸಂಪುಟ ಸಚಿವ
2013ರಿಂದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶಾಸಕ
2013ರ ಮೇಯಿಂದ ಅಕ್ಟೋಬರ್ 2015ರವರೆಗೆ ಕರ್ನಾಟಕ ಸರ್ಕಾರದ ಗೃಹ ಖಾತೆಯ ಸಂಪುಟದಲ್ಲಿ ಸಚಿವ
ಅಕ್ಟೊಬರ್ 2015ರಿಂದ 18ರವರೆಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಸಚಿವ, ಗೃಹ ಸಚಿವ
ಜೂನ್ 2018ರಿಂದ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವ
ಮೇ 2023ರಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ.

ಇದನ್ನೂ ಓದಿ: Siddaramaiah Profile : ಹಲವು ಏಳು-ಬೀಳು ಕಂಡ ಜನಪರ ನಾಯಕ ಸಿದ್ದರಾಮಯ್ಯ; ಇಲ್ಲಿದೆ ಅವರ ಜೀವನಚಿತ್ರ

Exit mobile version