Site icon Vistara News

Karnataka Election 2023 : ನಾಮಪತ್ರ ಸಲ್ಲಿಕೆಗೆ ಇಂದು ಶುಭ ದಿನ; ನೂರಾರು ಅಭ್ಯರ್ಥಿಗಳಿಂದ ನಾಮಿನೇಷನ್‌ ಸಾಧ್ಯತೆ

Karnataka Election 2023 Today is an auspicious day for nomination

#image_title

ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಇಂದು (ಸೋಮವಾರ) ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗುತ್ತಿದೆ. ಇದಕ್ಕೆ ಕಾರಣ ಇಂದು ನಾಮಪತ್ರ ಸಲ್ಲಿಕೆಗೆ ಅತ್ಯಂದ ಶುಭದಿನ ಎಂದು ಪರಿಗಣಿಸಲಾಗಿರುವುದು.

ಬಹುತೇಕವಾಗಿ ಎಲ್ಲ ರಾಜಕೀಯನ ಪಕ್ಷಗಳ ಅಗ್ರ ನಾಯಕರು ಕೂಡ ಇಂದೇ ನಾಮ ಪತ್ರ ಸಲ್ಲಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಚುನಾವಣಾಧಿಕಾರಿಗಳ ಕಚೇರಿ ಗಿಜಿಗಿಜಿಗುಡುತ್ತಿದೆ. ಒಬ್ಬರ ಹಿಂದೆ ಒಬ್ಬರು ನಾಮ ಪತ್ರಸಲ್ಲಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಇನ್ನು ನಾಮಪತ್ರ ಸಲ್ಲಿಸಲು ಉಳಿದಿರುವುದು ನಾಲ್ಕು ದಿನ ಮಾತ್ರ ಬಾಕಿ. ಅದರಲ್ಲಿಯೂ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವ ಏ. 20ರ ಗುರುವಾರ ಅಮಾವಾಸ್ಯೆ ಬಂದಿರುವುದರಿಂದ ಉಳಿದಿರುವ ಮೂರು ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಬೇಕಿರುತ್ತದೆ. ಅದರಲ್ಲಿಯೂ ಇಂದು ಮತ್ತು ನಾಳೆ ಮಾತ್ರ ಶುಭದಿನವೆಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಏ.19 ರ ಬುಧವಾರ ಬೂದು ಎಂಬ ಕಾರಣಕ್ಕೆ ಕೆಲವರು ಅಶುಭವೆಂದು ಪರಿಗಣಿಸುತ್ತಾರೆ.

ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷದ ದ್ವಾದಶಿಯ ದಿನವಾದ ಇಂದು, ಬ್ರಹ್ಮ ಯೋಗದ ದಿನವಾಗಿದೆ. ರಾಹುಕಾಲ ಬೆಳಗ್ಗೆ 9 ಗಂಟೆಗೇ ಮುಗಿದು ಹೋಗಿರುವುದರಿಂದ ನಾಮಪತ್ರ ಸಲ್ಲಿಕೆಗೆ ಯಾವುದೇ ಅಡೆ-ತಡೆ ಇಲ್ಲವಾಗಿದೆ. ಮಂಗಳವಾರ ಕೂಡ ನಾಮ ಪತ್ರ ಸಲ್ಲಿಸಲು ಶುಭ ದಿನವಾಗಿದೆ. ಆದರೆ ಮಧ್ಯಾಹ್ನ 3.30 ರಿಂದ ಸಂಜೆ 5 ಗಂಟೆಯವರೆಗೆ ರಾಹುಕಾಲ ಇರಲಿದ್ದು, ಅದರೊಳಗೇ ನಾಮ ಪತ್ರಸಲ್ಲಿಸಬೇಕಿರುತ್ತದೆ.

ಬಹುತೇಕವಾಗಿ ಪ್ರಮುಖ ಎರಡು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿವೆ. ಕಾಂಗ್ರೆಸ್‌ 14, ಬಿಜೆಪಿ 12 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿವೆ. ಜೆಡಿಎಸ್‌ ಮಾತ್ರ ಇನ್ನೂ ಸುಮಾರು 70 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿದೆ. ಕರ್ನಾಟ ರಾಷ್ಟ್ರ ಸಮಿತಿ (ಕೆಆರ್‌ಎಸ್‌), ಆಪ್‌ ಮತ್ತಿತರ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ಮುಂದಿದ್ದು, ಒಟ್ಟಾರೆ ಸೋಮಾವಾರದ ಬೆಳಗ್ಗೆಯವರೆಗೆ 387 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Karnataka Elections : ಬಿಜೆಪಿಯಿಂದ ಲಿಂಗಾಯತ ನಾಯಕರಿಗೆ ಅಪಮಾನ; ಶೆಟ್ಟರ್‌ ಸೇರ್ಪಡೆ ವೇಳೆ ಸಿದ್ದರಾಮಯ್ಯ ವಾಗ್ಬಾಣ

Exit mobile version