Site icon Vistara News

Karnataka Election Results 2023 : ಫಲಿತಾಂಶ ಏನೇ ಆದರೂ ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧ!

Karnataka Election Results 2023 : congress ready for any consequences

24 rebel Congress candidates expelled

ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ (karnataka election results 2023) ಏನೇ ಆದರೂ ಅದನ್ನು ಹೇಗೆ ಎದುರಿಸಬೇಕೆಂಬ ಕುರಿತು ಕಾಂಗ್ರೆಸ್‌ ಪಕ್ಷವು ಸಿದ್ಧತೆ ಮಾಡಿಕೊಂಡಿದೆ. ಶುಕ್ರವಾರ ನಗರದ ಖಾಸಗಿ ಹೊಟೇಲ್‌ ಒಂದರಲ್ಲಿ ನಡೆದ ಪಕ್ಷದ ಉನ್ನತರ ನಾಯಕರ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಶನಿವಾರ ಫಲಿತಾಂಶ ಪ್ರಕಟವಾದ ನಂತರ ಪಕ್ಷವು 113 ಗಡಿ ದಾಟಿದರೆ ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯುವುದು. ಆದಷ್ಟು ಬೇಗ ಶಾಸಕಾಂಗ ಪಕ್ಷದ ನಾಯಕನನ್ನು ನೇಮಕ ಮಾಡಿ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತೀರ್ಮಾನಿಸಲಾಗಿದೆ.

ಪಕ್ಷೇತರರ ಸಂಪರ್ಕಕ್ಕೂ ಪ್ಲಾನ್‌

ಒಂದು ವೇಳೆ ಪಕ್ಷವು ಸರಳ ಬಹುಮತಕ್ಕಿಂತ ಕಡಿಮೆ ಸ್ಥಾನ ಗೆದ್ದು, ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯವಿದೆ ಎಂದೆನಿಸಿದರೆ ಗೆಲ್ಲಬಲ್ಲ ಪಕ್ಷೇತರರೊಂದಿಗೆ ಯಾರು ಮಾತನಾಡಬೇಕೆಂಬುದನ್ನೂ ತೀರ್ಮಾನಿಸಲಾಗಿದೆ. ಪಕ್ಷ 105 ರಿಂದ 108 ಸ್ಥಾನಗಳನ್ನು ಪಡೆದರೆ ಏನು ಎಂಬುದನ್ನು ಈ ಪ್ಲಾನ್‌ನಲ್ಲಿ ಸ್ಪಷ್ಟಪಡಿಸಿಕೊಳ್ಳಲಾಗಿದೆ.

ಅರಕಲಗೂಡು ಕೃಷ್ಣೇಗೌಡರು ಗೆದ್ದರೆ ಅವರನ್ನು ಸಂಪರ್ಕಿಸುವ ಜವಾಬ್ದಾರಿಯನ್ನು ಎಚ್ ಎಂ ರೇವಣ್ಣ ಹೆಗಲಿಗೆ ಹೋರಿಸಲಾಗಿದೆ. ಮಾಡಳ್‌ ಮಲ್ಲಿಕಾರ್ಜುನ ಅವರ ಸಂಪರ್ಕದ ಜವಾಬ್ದಾರಿಯನ್ನು ಶ್ಯಾಮನೂರು ಶಿವಶಂಕರಪ್ಪ ಮತ್ತು ನಿಖಿಲ್ ಕೊಂಡಜ್ಜಿ ಗೆ ವಹಿಸಲಾಗಿದೆ.

ಪುಲಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಜಮೀರ್ ಅಹಮದ್ ಖಾನ್ ಅವರಿಗೆ ವಹಿಸಿದ್ದು, ಲತಾ ಮಲ್ಲಿಕಾರ್ಜುನ ಸಂಪರ್ಕ ಮಾಡಲು ಶ್ಯಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್‌ಗೆ ಜವಾಬ್ದಾರಿ ನೀಡಲಾಗಿದೆ. ಶಿರಹಟ್ಟಿ ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮಣಿ ಅವರನ್ನು ಸೆಳೆಯುವ ಟಾಸ್ಕ್‌ ಅನ್ನು ಉತ್ತರ ಕನ್ನಡದ ನಾಯಕರಿಗೆ ನೀಡಲಾಗಿದೆ.

ಖರ್ಗೆ ಅವರ ನಿವಾಸದಲ್ಲಿಯೂ ಸಭೆ ನಡೆದಿತ್ತು.

ಸಮ್ಮಿಶ್ರ ಸರ್ಕಾರಕ್ಕೂ ರೆಡಿ

ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆ ನಿರ್ಮಾಣವಾದರೆ‌ ಜೆಡಿಎಸ್‌ನ ವರಿಷ್ಠ ದೇವೇಗೌಡರನ್ನು ಸಂಪರ್ಕ ಮಾಡುವುದೆಂದು ತೀರ್ಮಾನಿಸಲಾಗಿದ್ದು. ಪಕ್ಷ 80 ಸ್ಥಾನ ದಾಟಿದರೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಮೈತ್ರಿ ಏರ್ಪಟ್ಟರೆ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದೆ.

ರಾಜ್ಯ ರಾಜಕಾರಣದ ಕುತೂಹಲಕಾರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಒಟ್ಟಾರೆಯಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಆಗದಂತೆ ತಡೆಯುವ ಎಲ್ಲ ಪ್ರಯತ್ನ ನಡೆಸಲು ಸಭೆಯು ಒಮ್ಮತದ ತೀರ್ಮಾನಕ್ಕೆ ಬಂದಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇದನ್ನೂ ಓದಿ : Karnataka Election 2023 : ಇನ್ನು ಕೆಲವೇ ಕ್ಷಣಗಳಲ್ಲಿ ಕೌಂಟಿಂಗ್‌ ಶುರು : ಮತ ಎಣಿಕೆ ಹೇಗೆ ಗೊತ್ತೇ?

Exit mobile version