Site icon Vistara News

Karnataka Elections 2023 : ಜೆಡಿಎಸ್‌ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ; ಮಂಡ್ಯದ ಅಭ್ಯರ್ಥಿಯ ಹೆಸರಿಲ್ಲ!

Karnataka Elections 2023 JDS releases its fourth list of 59 candidates

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಜಾತ್ಯತೀತ ಜನತಾದಳ ಬುಧವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮಂಡ್ಯದ ಅಭ್ಯರ್ಥಿಯ ಹೆಸರಿಲ್ಲ. ಹೀಗಾಗಿ ಈ ಕ್ಷೇತ್ರದಿಂದ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತ ಕುತೂಹಲ ಮುಂದುವರಿದಿದೆ.

ಆಶ್ಚರ್ಯಕರ ಬೆಳವಣಿಗೆಯಲ್ಲಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್‌ ಬೆಂಬಲ ಘೋಷಿಸಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಂಸದ ದಿವಂಗತ ಧ್ರುವನಾರಾಯಣ್ ಅವರ ಮಗ ದರ್ಶನ್ ಧ್ರುವನಾರಾಯಣ್‌ಗೆ ಜೆಡಿಎಸ್‌ ಬೆಂಬಲ ನೀಡಿದೆ.

ನಾಲ್ಕನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರಿದೆ. ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದ್ದು, ಪಟ್ಟಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಸೇರಿಸಲಾಗಿದೆ. ಇಂದಷ್ಟೇ ಬಿಜೆಪಿ ತೊರೆದು ಜೆಡಿಎಸ್‌ ಸೇರಿರುವ ಶಿವಮೊಗ್ಗದ ಆಯನೂರು ಮಂಜುನಾಥ್‌ರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಈ ಕ್ಷೇತ್ರದಿಂದ ಮಾಜಿ ಶಾಸಕ ಪ್ರಸನ್ನಕುಮಾರ್‌ ಕೂಡ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದರು. ಇದುವರೆಗೆ ಜೆಡಿಎಸ್‌ ಒಟ್ಟು 207 ಕ್ಷೇತ್ರಗಳ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇಂದು ಸಂಜೆ ಅಂತಿಮಗೊಳಿಸಲಾಗುವುದು ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ;

7 ಕ್ಷೇತ್ರಗಳಲ್ಲಿ ಪರೋಕ್ಷ ಬೆಂಬಲ

ಜೆಡಿಎಸ್‌ ಪಕ್ಷವು ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ , ಬಾಗೆಪಲ್ಲಿ ಮತ್ತು ಕೆ. ಆರ್. ಪುರ ಕ್ಷೇತ್ರದಲ್ಲಿ ಸಿಪಿಐಎಮ್ ಪಕ್ಷದ ಅಭ್ಯರ್ಥಿಗೆ ಹಾಗೂ ಸಿ. ವಿ. ರಾಮನ್‌ನಗರ, ವಿಜಯನಗರ, ಮಹದೇವಪುರ ಕ್ಷೇತ್ರಗಳಲ್ಲಿ ಆರ್ ಪಿ ಐ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ.

12 ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ

ಒಟ್ಟು 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದೆ.
ಬಸವನಬಾಗೇವಾಡಿ : ಪರಮಾನಂದ ಬಸಪ್ಪ ತನಿಖೆದಾರ್ ಬದಲಿಗೆ ಸೋಮನಗೌಡ ಪಾಟೀಲ್ ಟಿಕೆಟ್‌ ನೀಡಲಾಗಿದೆ.
ಬಸವಕಲ್ಯಾಣ: ಸೈಯ್ಯದ್ ಯಶ್ರಬ್ ಆಲಿ ಖಾದ್ರಿ ಬದಲಿಗೆ ಸಂಜಯ್ ವಾಡೇಕರ್‌ಗೆ ಟಿಕೆಟ್ ನೀಡಲಾಗಿದೆ.
ಬೀದರ್ : ರಮೇಶ್ ಪಾಟೀಲ್ ಸೋಲಾಪುರ ಬದಲಿಗೆ ಸೂರ್ಯಕಾಂತ ನಾಗರಮಾರಪಲ್ಲಿಗೆ ಟಿಕೆಟ್ ನೀಡಲಾಗಿದೆ.
ಕುಷ್ಟಗಿ: ತುಕರಾಂ ಸರ್ವೆ ಬದಲಿಗೆ ಶರಣಪ್ಪ ಕುಂಬಾರಗೆ ಟಿಕೆಟ್ ನೀಡಲಾಗಿದೆ.
ಹಗರಿಬೊಮ್ಮನಹಳ್ಳಿ: ಪರಮೇಶ್ವರಪ್ಪ ಬದಲಿಗೆ ನೇಮಿರಾಜ್ ನಾಯ್ಕ್‌ಗೆ ಟಿಕೆಟ್ ನೀಡಲಾಗಿದೆ.
ಬಳ್ಳಾರಿ ನಗರ : ಅಲ್ಲಾಭಕ್ಷ ಮುನ್ನಾ ಬದಲಿಗೆ ಅನಿಲ್ ಲಾಡ್ ಟಿಕೆಟ್ ನೀಡಲಾಗಿದೆ.
ಚನ್ನಗಿರಿ: ಎಂ ಯೋಗೇಶ್ ಬದಲಿಗೆ ತೇಜಸ್ವಿ ಪಟೇಲ್‌ಗೆ ಟಿಕೆಟ್ ನೀಡಲಾಗಿದೆ.
ಮೂಡಿಗೆರೆ : ಬಿ ಬಿ ನಿಂಗಯ್ಯ ಬದಲಿಗೆ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ರಾಜಾಜಿನಗರ : ಗಂಗಾಧರ ಮೂರ್ತಿ ಬದಲಿಗೆ ಆಂಜನಪ್ಪಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರು ದಕ್ಷಿಣ: ಪ್ರಭಾಕರ್ ರೆಡ್ಡಿ ಬದಲಿಗೆ ರಾಜಗೋಪಾಲ ರೆಡ್ಡಿಗೆ ಟಿಕೆಟ್ ನೀಡಲಾಗಿದೆ.
ಮಂಡ್ಯ : ಹಾಲಿ ಶಾಸಕ ಎಂ ಶ್ರೀನಿವಾಸ್ ಬದಲಿಗೆ ಬಿ ಆರ್ ರಾಮಚಂದ್ರಗೆ ಟಿಕೆಟ್ ನೀಡಲಾಗಿದೆ.
ವರುಣ: ಅಭಿಷೇಕ್ ಬದಲಿಗೆ ಭಾರತಿ ಶಂಕರ್‌ಗೆ ಟಿಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : Karnataka Election: ಆಯನೂರು ಮಂಜುನಾಥ್ ಬಿಜೆಪಿಗೆ ರಾಜೀನಾಮೆ, ಜೆಡಿಎಸ್‌ ಸೇರ್ಪಡೆಗೆ ಕ್ಷಣಗಣನೆ

Exit mobile version