Site icon Vistara News

Karnataka Politics : ಕರಸೇವಕರು ಕ್ರಿಮಿನಲ್ಸ್‌, ಗಲಭೆಕೋರರು ಅಮಾಯಕರು; ಬಿಜೆಪಿ-ಕಾಂಗ್ರೆಸ್‌ ವಾರ್‌

KG Halli DJ Halli

ಬೆಂಗಳೂರು: ರಾಜ್ಯದಲ್ಲಿ ಕ್ರಿಮಿನಲ್‌ ಪಾಲಿಟಿಕ್ಸ್‌ (Criminal politics) ಜೋರಾಗಿದೆ. ಅಯೋಧ್ಯಾ ಕರಸೇವಕರನ್ನು (Ayodhya Karasevaks) ಕ್ರಿಮಿನಲ್‌ಗಳಂತೆ ಬಿಂಬಿಸಿ ಬಂಧಿಸುವ ಸರ್ಕಾರ ಬೆಂಗಳೂರಿನ ಕೆ.ಜಿ.ಹಳ್ಳಿ-ಡಿ.ಜೆ ಹಳ್ಳಿಯಲ್ಲಿ (KGHalli-DGHalli Riots) ನಾಲ್ಕು ವರ್ಷದ ಹಿಂದೆ ಶಾಸಕರ ಮನೆಯನ್ನೇ ಸುಟ್ಟು ಹಾಕಿದ ಗಲಭೆಕೋರರನ್ನು ಅಮಾಯಕರೆಂದು ಬಿಂಬಿಸಿ ಬಿಡುಗಡೆ ಮಾಡಲು ಹವಣಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ನಡೆಸಿದ ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ ಕಾರ್ಯಕ್ರಮದಲ್ಲಿ ಕೇಳಿಬಂದ ಬೇಡಿಕೆ, ಪುಲಿಕೇಶಿ ನಗರದ ಶಾಸಕ ಶ್ರೀನಿವಾಸ್‌ ಅವರು ಗಲಭೆಕೋರರನ್ನು ಅಮಾಯಕರೆಂದು ಹೇಳಿದ್ದು ಬಿಜೆಪಿ (BJP Karnataka) ಕೈಗೆ ಅಸ್ತ್ರವಾಗಿದೆ. ಹೀಗಾಗಿ ಅದು ಕರಸೇವಕರನ್ನು, ರಾಮ ಭಕ್ತರನ್ನು ಕ್ರಿಮಿನಲ್‌ಗಳು ಎಂದು ಬಿಂಬಿಸಿ, ಗಲಭೆ ಮಾಡಿದವರನ್ನು ಬಿಡುಗಡೆಗೆ ಮುಂದಾಗಿರುವುದು ಯಾವ ನ್ಯಾಯ (Karnataka Politics) ಎಂದು ಪ್ರಶ್ನಿಸಿದೆ.

ಈ ಹಿಂದೆ ಡಿಎಂ ಡಿ.ಕೆ. ಶಿವಕುಮಾರ್, ಶಾಸಕ ತನ್ವೀರ್ ಸೇಠ್ ಅವರು ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಕೋರರನ್ನು ಅಮಾಯಕರು. ಅವರನ್ನು ಬಿಡುಗಡೆ ಮಾಡಬಹುದು ಎಂಬ ರೀತಿಯಲ್ಲಿ ಮನವಿ ಸಹಿತ ಪತ್ರ ಬರೆದಿದ್ದರು. ಇದೀಗ ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ಅವರು ಇದೇ ಅಂಶವನ್ನು ಉಲ್ಲೇಖಿಸಿ ಬಂಧಿತರಲ್ಲಿ ಕೆಲವರು ಅಮಾಯಕರಿದ್ದಾರೆ. ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮದ ವೇಳೆ ಹಲವು ಮುಸ್ಲಿಂ ಮಹಿಳೆಯರು ಗುಂಪಾಗಿ ನಿಂತು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಕೋರರು ಅಮಾಯಕರು, ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.

ಇದನ್ನು ಗಮನಿಸಿದ ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಬಿಜೆಪಿಯ ಹಲವು ನಾಯಕರು ಇದರ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್‌ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

ರಾಮ ಭಕ್ತರು ಮಾತ್ರ ಆರೋಪಿಗಳಾ?

ಕಾಂಗ್ರೆಸ್ ಪಕ್ಷಕ್ಕೆ ಒಂದು ವರ್ಗದವರು ಮಾತ್ರ ಅಮಾಯಕರಾಗಿ ಕಾಣುತ್ತಿದ್ದಾರೆ. ಆ ವರ್ಗದವರು ಬಾಂಬ್ ಹಾಕಿದರೂ ಅಮಾಯಕರು, ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರೂ ಅಮಾಯಕರು. ಶ್ರೀರಾಮನ ಭಕ್ತರು ಮಾತ್ರ ನಿಮಗೆ ಆರೋಪಿಗಳಾ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್‌ ಪ್ರಶ್ನೆ ಮಾಡಿದ್ದಾರೆ.

ಶಾಸಕರ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರಾ?

ಪೊಲೀಸ್‌ ಠಾಣೆಗೆ ಕಲ್ಲು ಹೊಡೆದವರು ಮತ್ತು ಶಾಸಕರ ಮನೆಗೇ ಬೆಂಕಿ ಹಚ್ಚಿದವರನ್ನು ಅಮಾಯಕರು ಎನ್ನುತ್ತಿರುವ ಡಿಕೆ ಶಿವಕುಮಾರ್‌ ಮತ್ತು ಸಂಗಡಿಗರಿಗೂ, ಕ್ರಿಮಿನಲ್‌ಗಳ ಕೂಟಕ್ಕೂ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಕರಸೇವಕರ ಮೇಲೆ, ಭಗವಾಧ್ವಜ ನೆಟ್ಟವರ ಮೇಲೆ, ಭಾರತೀಯ ಸಂಸ್ಕೃತಿ ಎತ್ತಿ ಹಿಡಿದವರ ಮೇಲೆ ಹುಸಿ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುತ್ತಿರುವ ಕಾಂಗ್ರೆಸ್‌ ‌ ಸರ್ಕಾರ ಡಿಜೆ ಹಳ್ಳಿ – ಕೆಜೆ ಹಳ್ಳಿಯಲ್ಲಿ ದಾಂಧಲೆ ಎಬ್ಬಿಸಿದವರನ್ನು ಅಮಾಯಕರು ಎಂದು ಪ್ರತಿಪಾದಿಸುವ ಹುನ್ನಾರ ಮಾಡುತ್ತಿದೆ. ಓಲೈಕೆ ರಾಜಕಾರಣದ ಅಲ್ಪತನ ಬಿಟ್ಟು ಕಡೇಪಕ್ಷ ಇನ್ನೆರಡು ವಾರ ರಾಮಮಂತ್ರ ಜಪಿಸಿ. ನಿಮ್ಮ ಹೊಟ್ಟೆಯಲ್ಲಿ ಉರಿಯುತ್ತಿರುವ ಕಿಚ್ಚು ಸ್ವಲ್ಪ ಕಡಿಮೆಯಾಗಬಹುದೇನೋ… ಪ್ರಯತ್ನಿಸಿ. ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

Exit mobile version