Site icon Vistara News

Lok Sabha Election 2024: ಎಐಸಿಸಿ ಪಟ್ಟಿಯನ್ನೇ ಬದಲಾಯಿಸಿದ ಡಿಕೆಶಿ; ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸ್ಥಾನ!

KPCC president DK Shivakumar and Laxmi Hebbalkar

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿಯಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ (Congress Karnataka) ಈ ಬಾರಿ ಏನಿಲ್ಲವೆಂದರೂ 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ. ಇದರ ನಡುವೆ ಜವಾಬ್ದಾರಿಗಳನ್ನು ನೀಡುತ್ತಾ ಬಂದಿದೆ. ಈ ನಡುವೆ ಲೋಕಸಭಾ ಕ್ಷೇತ್ರದ ಸಂಯೋಜಕರನ್ನು ನೇಮಿಸಿ ಈಚೆಗೆ ಎಐಸಿಸಿ ಪಟ್ಟಿ ಕಳುಹಿಸಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (KPCC president DK Shivakumar) ಅವರು ಈ ನೇಮಕದಲ್ಲಿ ಬದಲಾವಣೆ ಮಾಡಿದ್ದಾರೆ. ಎಐಸಿಸಿ ನೀಡಿದ್ದ ಪಟ್ಟಿಯನ್ನೇ ಬದಲಾಯಿಸಿದ್ದಾರೆ. ಹೊಸ ಪಟ್ಟಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Laxmi Hebbalkar) ಸ್ಥಾನ ಕಲ್ಪಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬೆಳಗಾವಿ ಜಿಲ್ಲೆಯವರಾಗಿರುವ ಕಾರಣ ಅವರನ್ನು ಚಿಕ್ಕೋಡಿ ಕ್ಷೇತ್ರದ ಸಂಯೋಜಕರನ್ನಾಗಿ ನೇಮಿಸಿ ಡಿ.ಕೆ. ಶಿವಕುಮಾರ್‌ ಅವರು ಆದೇಶವನ್ನು ಹೊರಡಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರಕ್ಕೆ ಈ ಹಿಂದೆ ಎಚ್.ಕೆ ಪಾಟೀಲ್ ಅವರನ್ನು ಸಂಯೋಜಕರನ್ನಾಗಿ ಎಐಸಿಸಿ ನೇಮಕ ಮಾಡಿತ್ತು. ಈಗ ಅವರ ಬದಲಿಗೆ ಅಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸ್ಥಾನ ಕಲ್ಪಿಸಲಾಗಿದೆ.

ಇದನ್ನೂ ಓದಿ: BY Vijayendra: ಸ್ತಬ್ದಚಿತ್ರ ವಿಷಯದಲ್ಲಿ ದುರುದ್ದೇಶ ಇಲ್ಲ, ಕಾಂಗ್ರೆಸ್‌ನಿಂದ ಮೊಸಳೆ ಕಣ್ಣೀರು: ಬಿ.ವೈ. ವಿಜಯೇಂದ್ರ

ಹಾವೇರಿಗೆ ಎಚ್.ಕೆ. ಪಾಟೀಲ್ ನೇಮಕ

ಇನ್ನು ಎಚ್‌.ಕೆ. ಪಾಟೀಲ್‌ ಅವರನ್ನು ಹಾವೇರಿ ಜಿಲ್ಲೆಗೆ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಎಚ್.ಕೆ ಪಾಟೀಲ್ ಸಹೋದರ ಈ ಹಿಂದೆ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದರು. ಹೀಗಾಗಿ ಅವರನ್ನು ಹಾವೇರಿಗೆ ನೇಮಕ ಮಾಡಲಾಗಿದೆ.

ಎಐಸಿಸಿ ಜತೆ ಶಿವಾನಂದ್‌ ಪಾಟೀಲ್‌ ಸಂಯೋಜಕ

ಶಿವಾನಂದ್‌ ಪಾಟೀಲ್‌ಗೆ ರಾಜ್ಯ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಸ್ಥಾನ ಇಲ್ಲದಂತಾಗಿದೆ. ಹಾಗಂತ ಅವರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ. ಅವರನ್ನು ಹಾವೇರಿ ಸಂಯೋಜಕ ಸ್ಥಾನದಿಂದ ತೆಗೆದು ಎಐಸಿಸಿ ಜತೆ ಸಂಯೋಜಕರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Forced Conversion : ಮನೆಯೊಳಗೆ ಅನಧಿಕೃತ ಚರ್ಚ್‌ ನಿರ್ಮಿಸಿ ಪ್ರಾರ್ಥನೆ; ಭದ್ರಾವತಿಯಲ್ಲಿ ಮತಾಂತರಕ್ಕೆ ಪ್ರಚೋದನೆ!

ಮೈಸೂರು – ಚಾಮರಾಜನಗರಕ್ಕೆ ಅದಲು – ಬದಲು

ಇನ್ನು ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಯೋಜಕರನ್ನು ಅದಲು-ಬದಲು ಮಾಡಲಾಗಿದೆ. ಸಚಿವ ವೆಂಕಟೇಶ್ ಅವರನ್ನು ಈ ಹಿಂದೆ ಮೈಸೂರು ಸಂಯೋಜಕರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಅವರನ್ನು ಚಾಮರಾಜನಗರಕ್ಕೆ ನಿಯುಕ್ತಿ ಮಾಡಲಾಗಿದೆ. ಚಾಮರಾಜನಗರದಲ್ಲಿ ಸಂಯೋಜಕರಾಗಿ ನೇಮಕಗೊಂಡಿದ್ದ ಡಾ. ಎಚ್‌.ಸಿ. ಮಹದೇವಪ್ಪ ಅವರನ್ನು ಚಾಮರಾಜನಗರ ಬದಲು ಮೈಸೂರಿಗೆ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶವನ್ನು ಹೊರಡಿಸಿದ್ದಾರೆ.

Exit mobile version