Site icon Vistara News

ಸಿದ್ದರಾಮಯ್ಯ ನೇತೃತ್ವದಲ್ಲೆ ಚುನಾವಣೆಯಾಗಲಿ: ಡಿಕೆಶಿ ವಿರುದ್ಧ ಮುನಿಸಿಕೊಂಡಿರುವ ಸೀತಾರಾಂ

m-r-seetharam

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನ ಮಾತ್ರವಲ್ಲ, ಇದು ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಕಾರ್ಯಕ್ರಮ ಎಂದು ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕರು ಇದೇ ಮಾತನ್ನು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಬೇಸರಗೊಂಡು ಇನ್ನೇನು ಪಕ್ಷವನ್ನು ಬಿಡುತ್ತಾರೆ ಎನ್ನಲಾಗುತ್ತಿದ್ದ ಮಾಜಿ ಸಚಿವ ಎಂ. ಆರ್‌. ಸೀತಾರಾಂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮಗೆ ಇತ್ತೀಚಿನ ವಿಧಾನ ಪರಿಷತ್‌ ಸದಸ್ಯರಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವಕಾಶ ನೀಡಲಿಲ್ಲ ಎಂಬ ಬೇಸರ ಅವರಿಗಿತ್ತು.

ಜತೆಗೆ, ತಮ್ಮ ಪುತ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದಿದ್ದರೂ ಮೊಹಮ್ಮದ್‌ ನಲಪಾಡ್‌ ಅವರಿಗೆ ನೀಡಿದ್ದ ಬೇಸರವೂ ಇತ್ತು. ಇದೆಲ್ಲದರ ನಡುವೆ ಸಿದ್ದರಾಮೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಕೋಲಾರದಿಂದ ಚಾಮರಾಜನಗರದವರೆಗೂ ರಾಜ್ಯದ ಎಲ್ಲರೂ ಮೆಚ್ಚಿರುವ ಏಕೈಕ ಜನನಾಯಕ ಸಿದ್ದರಾಮಯ್ಯ. ಹಲವಾರು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ನಾಯಕರ ಬೆಳವಣಿಗೆಯನ್ನು ನಾವು ನೋಡಿಕೊಂಡು ಬಂದಿದ್ದೇವೆ. ಇವರಲ್ಲಿ ಪ್ರಮುಖವಾಗಿ ದೇವರಾಜ ಅರಸು ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಶೋಷಿತ ವರ್ಗದವರಿಗೆ ಮಾನ್ಯತೆ ನೀಡಿದ್ದರು. ದೇವರಾಜ ಅರಸು ಅವರ ನಂತರ ಬಹಳ ದೀರ್ಘಕಾಲದ ರಾಜಕೀಯದಲ್ಲಿ ನಾನು ನೋಡಿದಂತೆ ದಕ್ಷ, ಪ್ರಾಮಾಣಿಕ ಹಾಗೂ ನೇರ ನುಡಿಯ ಏಕೈಕ ರಾಜಕಾರಣಿ ಎಂದರೆ ಸಿದ್ದರಾಮಯ್ಯ.

ರಾಜ್ಯದ ಉದ್ದಗಲಕ್ಕೂ ಎಲ್ಲ ಕಡೆಗಳಿಂದ ನಾವೆಲ್ಲರೂ ಬಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಇವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಜಯಿಸಲು ಜನರು ಆಶೀರ್ವಾದ ನೀಡಬೇಕು. ಇದಕ್ಕೆ ಸಿದ್ದರಾಮಯ್ಯ ಅವರಿಗೆ ಎಲ್ಲರೂ ಹಾರೈಸಬೇಕು ಎಂದರು.

ಇದನ್ನೂ ಓದಿ | Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್‌ ಬಿಯರ್‌

Exit mobile version