Site icon Vistara News

Parliament Election : ಮೈಸೂರಲ್ಲಿ ನನ್ನನ್ನು ಬಿಟ್ಟು ಯಾರಿದ್ದಾರೆ?; ಟಿಕೆಟ್‌ ಮಿಸ್ಸಾಗಲ್ಲ ಎಂದ ಪ್ರತಾಪಸಿಂಹ

Parliament-Elections-Pratapsimha

ಮೈಸೂರು: ನಾನು ಮೈಸೂರು- ಕೊಡಗು ಕ್ಷೇತ್ರದಲ್ಲಿ (Mysore Kodadu Constituency) ಗೆದ್ದರೆ ಸಿಎಂ ಸಿದ್ದರಾಮಯ್ಯ ಸೀಟು ಅಲುಗಾಡುತ್ತದೆ. ಆ ಮಟ್ಟದ ಹವಾ ಇದೆ. ನಾನು ಸಂಸದನಾಗಿ ಯಾರೂ ಮಾಡದಷ್ಟು ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಟಿಕೆಟ್‌ ನೀಡಿಯೇ ನೀಡುತ್ತಾರೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರು.

ಪ್ರತಾಪ್‌ ಸಿಂಹ ಅವರು ಉತ್ತಮ ಕೆಲಸಗಾರರೇ ಆದರೂ ಪಕ್ಷದೊಳಗೆ ವಿರೋಧ ಕಟ್ಟಿಕೊಂಡಿದ್ದಾರೆ, ಆರೆಸ್ಸೆಸ್‌ನ ಬೆಂಬಲವೂ ಇಲ್ಲ. ಲೋಕಸಭಾ ಚುನಾವಣೆಯ (Parliament Election) ಸಮೀಕ್ಷಾ ವರದಿಗಳು ಅವರ ಪರವಾಗಿಲ್ಲ. ಹೀಗಾಗಿ ಈ ಬಾರಿ ಅವರಿಗೆ ಪಕ್ಷ ಟಿಕೆಟ್‌ ನೀಡುವುದು ಡೌಟ್‌. ಅವರ ಬದಲಿಗೆ ಮೈಸೂರು ಒಡೆಯರಾದ ಯದುವೀರ್‌ ಒಡೆಯರ್‌ (Yaduveer Odeyar) ಅವರಿಗೆ ಟಿಕೆಟ್‌ ನೀಡಬಹುದು ಎಂಬ ಸುದ್ದಿ ಜೋರಾಗಿ ಓಡುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ, ಟಿಕೆಟ್‌ ಗೊಂದಲದ ಬಗ್ಗೆ ಪ್ರತಾಪ್‌ ಸಿಂಹ ಅವರು ಮಾತನಾಡಿದ್ದಾರೆ.

ಟಿಕೆಟ್‌ ನನಗೇ ಯಾಕೆ? ಪ್ರತಾಪ್‌ ಸಿಂಹ ಸಮರ್ಥನೆ ಹೀಗಿದೆ.

1. ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನ. ರಾಜ್ಯದಲ್ಲಿ 28 ಮಂದಿ ಸಂಸದರು ಇದ್ದಾರೆ. ಪರ್‌‌ಫಾರ್ಮೆನ್ಸ್ ನೋಡಿ ಟಿಕೆಟ್ ನೀಡುತ್ತಾರೆ.. ಜನ ಖುಷಿಯಾಗಿದ್ದಾರೆ ಅಂದ್ರೆ ಮೇಲಿನವರು ಅದೇ ನಿರ್ಧಾರ ಮಾಡ್ತಾರೆ.

2. ಮೈಸೂರಿನಲ್ಲಿ ನಾನು ಇಂಥ ಕೆಲಸ ಮಾಡಿಲ್ಲ ಎಂದು ಹೇಳಲಿ. ಮೈಸೂರಿನಲ್ಲಿ ಯಾರೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಬೃಹತ್ ಮೈಸೂರು ಮಾಡಲು ನಾನು ಹೊರಟಿದ್ದೇನೆ. ಹಲವು ಅಭಿವೃದ್ಧಿ ಯೋಜನೆಗಳನ್ನು ನಾನು ಮಾಡಿದ್ದೇನೆ. ಕರ್ನಾಟಕ ಆಳಿದವರಿಂದಲೂ ಔಟರ್ ರಿಂಗ್‌ರೋಡ್ ತರಲು ಆಗಿಲ್ಲ. ನಾನು ರಾಜ್ಯದಲ್ಲಿ ಮೊದಲಾಗಿ ಮೈಸೂರಿಗೆ ಮೊದಲ ಪೆರಿಫೆರಲ್ ರಿಂಗ್ ರೋಡ್ ತರಲು ಹೊರಟಿದ್ದೇನೆ.

ಇದನ್ನೂ ಓದಿ : Parliament Election : ಪ್ರತಾಪ್‌ಸಿಂಹಗೆ ಮಿಸ್‌ ಆಗುತ್ತಾ ಮೈಸೂರು ಟಿಕೆಟ್‌; ಯದುವೀರ್‌ಗೆ ಅವಕಾಶ?

3. ಯಾರೋ ಒಂದಷ್ಟು ಜನ ಅಸೂಯೆಗೆ ಮಾತನಾಡುತ್ತಾರೆ. ಕೆಲಸವೇ ನನಗೆ ಶ್ರೀರಕ್ಷೆ. ಮೈಸೂರು ಕೊಡಗು ಜನರು ನನ್ನ ಕೈ ಹಿಡಿಯುತ್ತಾರೆ. ಕಾಯಲು ಬೆಟ್ಟದ ಮೇಲೆ ಒಬ್ಬಳು ತಾಯಿ ಇದ್ದಾಳೆ. ತಾಯಿ ಚಾಮುಂಡಿ ನನ್ನ ಕೈ ಬಿಡಲ್ಲ.

4. ಹಿಂದೂತ್ವದ ಪರ ನಾನು ಕೆಲಸ ಮಾಡಿದ್ದೇನೆ. ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾದಾಗ ನಿಂತಿದ್ದು ನಾನು. ಬಿಜೆಪಿ ಕಾರ್ಯಕರ್ತರು ಖುಷಿ ಪಡುವ ಎಂಪಿ ಇದ್ರೆ ಅದು ನಾನೇ. ಈ ವಿಚಾರವಾಗಿ ಪ್ರತಾಪ್ ಸಿಂಹ ಎರಡು ಕೇಸ್ ಹಾಕಿಸಿಕೊಂಡಿದ್ದಾನೆ. ಈ ಭಾಗದಲ್ಲಿ ಹನುಮ ಜಯಂತಿ ಆಗುತ್ತಿದ್ರೆ ಅಂದ್ರೆ ಅದಕ್ಕೆ ಪ್ರತಾಪ್ ಸಿಂಹ ಕಾರಣ.

5.ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. 10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ಚಾಲೆಂಜಿಂಗ್ ಮಾಡಿ ಹೇಳ್ತೀನಿ ನನ್ನ ರೀತಿ ಕೆಲಸ ಯಾರು ಮಾಡಿಲ್ಲ. ಈ ಬಾರಿಯೂ ನಾನು 2 ರಿಂದ 3 ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಜನರು ನನ್ನ ಕೈ ಹಿಡಿಯಲು ರೆಡಿ ಇದ್ದಾರೆ. ಪಕ್ಷ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ.

6. ರಾಜಕೀಯದಲ್ಲಿ ದ್ವೇಷ ಅಸೂಯೆ ಇದ್ದೆ ಇರುತ್ತೆ. ಪ್ರೀತಿಸುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಮೈಸೂರು ಕೊಡಗು ಜನರ ಪ್ರೀತಿಯ ನಡುವೆ ಅಸೂಯೆ ಯಾವುದು ನಿಲ್ಲಲ್ಲ. ಪಾರ್ಟಿಯ ಕಾರ್ಯಕರ್ತರು ಯಾರು ಅಭ್ಯರ್ಥಿ ಆಗಬೇಕೆಂದು ಹೇಳಿದ್ದಾರೆ. ಅದರ ಶೀಟ್ ನೋಡಿದ್ರೆ ಗೊತ್ತಾಗುತ್ತೆ.

7. ಪ್ರತಾಪ್ ಸಿಂಹ ರೂಲರ್ ಅಲ್ಲ, ಕೆಲಸಗಾರ. ಜನರಿಗೆ ರೂಲರ್ ಬೇಡಾ, ಬೇಕಿರೋದು ಕೆಲಸಗಾರ. ಪತ್ರಕರ್ತನಾಗಿದ್ದವನನ್ನು ಎರಡು ಬಾರಿ ಎಂಪಿ ಮಾಡಿದ್ದು ಬಿಜೆಪಿ.

8. ಕಾಂಗ್ರೆಸ್ ಅವರಿಗೆ ಅಭ್ಯರ್ಥಿ ಹುಡುಕಲು ಆಗ್ತಾ ಇಲ್ಲ. ಇದರಿಂದ ಪ್ರತಾಪ್ ಸಿಂಹ ಶಕ್ತಿ ಏನು ಅಂತಾ ಕಾಂಗ್ರೆಸ್ ಅವರಿಗೆ ಗೊತ್ತಿದೆ. ನಾನು ಗೆದ್ದರೆ ಸಿದ್ದರಾಮಯ್ಯ ಅವರ ಸೀಟು ಅಲುಗಾಡುತ್ತೆ. ಪ್ರತಾಪ್ ಸಿಂಹ ಸೋಲಿಸಲು ಆಗಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಿದೆ.

Exit mobile version