ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಪೆನ್‌ಡ್ರೈವ್ ಹಂಚಿಕೆ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಾರೆ ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ತಾವು ಅರ್ಧ ನಿಮಿಷಗಳ ಕಾಲ ಮಾತನಾಡಿದ್ದಾಗಿ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಸಾಕ್ಷಿ ಏನಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಇದು ಸರಿಯೇ? ಇದ್ದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ ನಿಮಗೇ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈಗಿನ ಪೆನ್‌ಡ್ರೈವ್ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಸಿದ್ದರಾಮಯ್ಯ ಅವರ ಸಾಕ್ಷಿ ಕೇಳುತ್ತಿದ್ದಾರೆ. ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ಸಂಭಾಷಣೆಯಲ್ಲಿ ಏನಿದೆ? ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ, ಶಿವರಾಮೇಗೌಡ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಸಂಭಾಷಣೆಯಲ್ಲಿ ಏನಿದೆ? ಇದ್ಯಾವುದನ್ನೂ ಇವರು ಸಾಕ್ಷಿಯಾಗಿ ಪರಿಗಣಿಸುವುದಿಲ್ಲವೇ? ಇದಕ್ಕಿಂತ ಮತ್ತೇನು ಸಾಕ್ಷಿಗಳು ಬೇಕು ನಿಮಗೆ? ಎಂದು ಕೇಳಿದರು.
ಯಾರು ಯಾರೋ ಬರುತ್ತಿರುತ್ತಾರೆ. ಕೆಟ್ಟವರು ಬರ್ತಾರೆ, ಒಳ್ಳೆಯವರು ಬರ್ತಾರೆ ಅಂತ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ವಕೀಲ ದೇವರಾಜೇಗೌಡರ ಜತೆಗೆ ಡಿಕೆಶಿ ಅರ್ಧ ನಿಮಿಷ ಮಾತನಾಡಿರುವುದು ಪ್ರಮುಖವಾದ ಅಂಶ ಅಲ್ವಾ ಇವರಿಗೆ? ಸಾಕ್ಷಿ ಕೊಡಿ ಸಾಕ್ಷಿ ಕೊಡಿ ಅಂತ ಹೇಳ್ತಾರೆ. ಎಸ್‌ಐಟಿ ತಂಡದಿಂದ 7 ಜನರನ್ನು ಬಂಧನ ಮಾಡಿ ಕರೆ ತಂದಿದ್ದಾರೆ. ಹಾಗಾದರೆ ಯಾವ ಸಾಕ್ಷಿ ಮೇಲೆ ಬಂಧನ ಮಾಡಿ ಕರೆ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಲವಾರು ಜನರನ್ನು ಪ್ರತಿ ನಿತ್ಯ ಕರೆಯುವ ಎಸ್‌ಐಟಿ ಅಧಿಕಾರಿಗಳು ಈಗ ಮಾಡುತ್ತಿರುವುದು ಏನು? ಕಿರುಕುಳ ಅಲ್ಲವೇ? ಅವರಿಗೂ ಇದಕ್ಕೂ ಏನು ಸಂಬಂಧ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಈ ಪ್ರಕರಣದಲ್ಲಿ ಈಗ ಎಲ್ಲವೂ ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮಾಹಿತಿ ಏನು ಇದೆಯೋ ಎಲ್ಲವನ್ನು ಸಹ ಕೊಡಿ ಅಂತ ಕೇಳುತ್ತಾರೆ. ದೂರನ್ನು ಬಹಳ ಕಷ್ಟಪಟ್ಟು ಕೊಡಿಸಿದ್ದೇವೆ ಅಂತ ಹೇಳುತ್ತಾರೆ. ಅ ವ್ಯಕ್ತಿ ಜೊತೆ ಮಾತನಾಡಬೇಕಾದರೆ ಕಷ್ಟ ಪಟ್ಟು ಕೊಡಿಸಿದ್ದೇವೆ ಅಂತ ಹೇಳ್ತಾರೆ. ಇದಕ್ಕಿಂತಲೂ ಸಿಎಂ ಅವರಿಗೆ ಸಾಕ್ಷಿ ಬೇಕಾ..? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಏನೋ 6 ಪ್ರಶ್ನೆ ಇಟ್ಟಿದ್ದಾರಂತೆ..?
ಬಿಜೆಪಿಯವರಿಗೆ ಏನೋ ಪತ್ರ ಬರೆದಿದ್ದಾರಂತೆ, ಗೊತ್ತಿದ್ದು ಯಾಕೆ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿರಿ? ಜೆಡಿಎಸ್ ಅವರು ಪ್ರಜ್ವಲ್ ಅವರನ್ನು ಸಸ್ಪೆಂಡ್ ಯಾಕೆ ಮಾಡಿದರು? ಈಗ 5- ಪ್ರಶ್ನೆ ಕೇಳಿದ್ದೇವೆ ಅಂತ ಹೇಳುತ್ತಾರೆ. ನಾನು ಪಾರ್ಟಿಯಿಂದ ವಜಾ ಮಾಡುವ ನಿರ್ಧಾರ ಕೈಗೊಂಡೆ. ಆದರೆ, ಸಿಎಂ ಹೇಳಿಕೆಯನ್ನು ನೋಡಿದರೆ ಆರೋಪಿಯನ್ನು ಅಪರಾಧಿಯನ್ನಾಗಿ ಮಾಡಿದ್ದಾರೆ. ಆದರೆ, ಪ್ರಜ್ವಲ್ ಇನ್ನೂ ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಅನ್ನುವುದನ್ನು ಕೋರ್ಟ್ ನಿರ್ಧಾರ ಮಾಡಲಿದೆ? ಅದೀಗ ಎಲ್ಲಿ ಸಾಬೀತಾಗಿದೆ? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.
ಇದನ್ನೂ ಓದಿ: CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ
ನಿಮ್ಮ ಎಸ್‌ಐಟಿಯವರು ಹೇಳುವ ಪ್ರಕಾರ, ವಿಡಿಯೊಗಳಲ್ಲಿ ಪ್ರಜ್ವಲ್ ಮುಖ ಕಾಣುತ್ತಿಲ್ಲ. ಹಾಗಾದರೆ, ಅಪರಾಧಿ ಸ್ಥಾನದಲ್ಲಿ ಯಾಕೆ ನಿಲ್ಲಿಸಿದ್ದೀರಿ? ಈ ಆರೋಪ ಪ್ರಜ್ವಲ್ ಮೇಲೆ ಬಂದ ತಕ್ಷಣ ನಾವು ನೈತಿಕತೆ ಉಳಿಸಿಕೊಳ್ಳಲು ಮೇಲೆ ಸಸ್ಪೆಂಡ್ ಮಾಡಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.