ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳ (Congress Candidates) ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದ (Vidhana Soudha) ಮುಂದೆಯೇ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ (Nasir Husein) ಅವರ ಅಭಿಮಾನಿಗಳು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ್ದಾರೆ ಎಂಬ ವಿವಾದ (Sedition Case) ತಾರಕಕ್ಕೇರಿದೆ. ಈ ಬಗ್ಗೆ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿ ಬಿಜೆಪಿ ಘಟಕವು ದೂರು ನೀಡಿದ್ದು ತನಿಖೆ ಆರಂಭಗೊಂಡಿದೆ.
ಈ ನಡುವೆ ಅಲ್ಲಿ ಯಾರೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಲ್ಲ. ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂಬಂತೆ ಬಿಂಬಿಸಲಾಗಿದೆ ಎಂಬ ವಾದವನ್ನು ಕಾಂಗ್ರೆಸ್ ಮಂಡಿಸಿದೆ. ಅದಕ್ಕೆ ಪೂರಕವಾಗಿ ಫ್ಯಾಕ್ಟ್ ಚೆಕ್ ವರದಿಯನ್ನು ಟ್ಯಾಗ್ ಮಾಡಿದೆ.
ಈಗ ಎಲ್ಲರ ಕುತೂಹಲವಿರುವುದು ವಿಜಯಿ ಅಭ್ಯರ್ಥಿ ನಾಸಿರ್ ಹುಸೇನ್ ಅವರು ಏನು ಹೇಳುತ್ತಾರೆ ಎನ್ನುವ ಕುತೂಹಲವದೆ. ಘಟನಾ ಸ್ಥಳದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಸಿಡಿಮಿಡಿಗೊಂಡು ಸಿಟ್ಟಿಗೆದ್ದಿದ್ದ ನಾಸಿರ್ ಹುಸೇನ್ ಬಳಿಕ ಒಂದು ವಿಡಿಯೋದ ಮೂಲಕ ಅಲ್ಲಿನ ಘಟನಾವಳಿಗಳ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ : Sedition Case: ತನಿಖೆ ನಡೆಯುತ್ತಿದೆ, ಕೂಗಿದ್ದು ಸಾಬೀತಾದರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ
Sedition Case : ಹಾಗಿದ್ದರೆ ಘಟನೆಯ ಬಗ್ಗೆ ನಾಸಿರ್ ಹುಸೇನ್ ಹೇಳುವುದೇನು?
ವಿಧಾನಸೌಧದ ಮುಂಭಾಗದಲ್ಲಿ ನಡೆದ ವಿಜಯೋತ್ಸವದ ವೇಳೆ ಕೆಲವು ಬೆಂಬಲಿಗರು ‘ನಾಸಿರ್ ಹುಸೇನ್ ಜಿಂದಾಬಾದ್’, ‘ನಾಸಿರ್ ಸಾಹೇಬ್ ಜಿಂದಾಬಾದ್’ ಮತ್ತು ‘ಕಾಂಗ್ರೆಸ್ ಪಾರ್ಟಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಯಾರೂ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನನಗೆ ಕೇಳಿಸಿಲ್ಲ. ಬೇಕಿದ್ದರೆ ಇದರ ಬಗ್ಗೆ ತನಿಖೆ ನಡೆಯಲಿ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
- ಇದ್ದಕ್ಕಿದ್ದಂತೆ ನಾನು ನನ್ನ ಮನೆಗೆ ಹೊರಡುತ್ತಿದ್ದಾಗ, ಯಾರೋ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದ್ದಾರೆ ಎಂದು ಮಾಧ್ಯಮಗಳು ನನಗೆ ಕರೆ ಮಾಡಿದವು.
- ನಾನು ಜನರ ಮಧ್ಯೆ ಇದ್ದಾಗ, ಸಾಕಷ್ಟು ಘೋಷಣೆಗಳನ್ನು ಕೂಗಲಾಗುತ್ತಿತ್ತು ಆದರೆ ನಾನು ಎಂದಿಗೂ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಕೇಳಲಿಲ್ಲ,
- ಆದರೆ ಅದು ಏನೇ ಇರಲಿ ನಾವು ಪೊಲೀಸರನ್ನು ಕೇಳಿದ್ದೇವೆ ಮತ್ತು ಪೊಲೀಸರು ತನಿಖೆ ನಡೆಸಲಿ.
- ಯಾರಾದರೂ ಅಂತಹ ಘೋಷಣೆಯನ್ನು ಕೂಗಿದ್ದರೆ, ಅವರನ್ನು ಕಾನೂನಿನ ಪ್ರಕಾರ ದಂಡಿಸಬೇಕು. ಈ ಬಗ್ಗೆ ತನಿಖೆ ನಡೆಯಬೇಕು.
- ಯಾರಾದರೂ ವೀಡಿಯೊವನ್ನು ಮಾರ್ಫಿಂಗ್ ಮಾಡಿದ್ದರೆ ಮತ್ತು ಕಿಡಿಗೇಡಿತನವನ್ನು ಮಾಡಿದ್ದರೆ, ಅದರ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ.
- ಯಾರಾದರೂ ಘೋಷಣೆಯನ್ನು ಮಾಡಿದ್ದರೆ, ಆ ವ್ಯಕ್ತಿ ಯಾರು, ಅವನು ಎಲ್ಲಿಂದ ಬಂದ, ಆತ ಆವರಣವನ್ನು ಹೇಗೆ ಪ್ರವೇಶಿಸಿದ ಮತ್ತು ಆ ಘೋಷಣೆಗಳನ್ನು ಎತ್ತುವುದರ ಹಿಂದಿನ ಉದ್ದೇಶ ಏನು ಎನ್ನುವುದರ ಸರಿಯಾದ ತನಿಖೆ ನಡೆಯಬೇಕು.
- ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಅಲ್ಲಿದ್ದಾಗ, ಅಂತಹ ಯಾವುದೇ ಘೋಷಣೆಗಳನ್ನುಕೂಗಿಲ್ಲ, ಏಕೆಂದರೆ ನಮ್ಮ ಉಪಸ್ಥಿತಿಯಲ್ಲಿ ಘೋಷಣೆಗಳನ್ನು ಕೂಗಿದ್ದರೆ, ಯಾವುದೇ ಬುದ್ಧಿವಂತ ಅಥವಾ ಭಾರತೀಯ ನಾಗರಿಕ ಅದನ್ನು ಸಹಿಸುತ್ತಿರಲಿಲ್ಲ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ನಾವು ವಿಚಾರಣೆಗಾಗಿ ಕಾಯೋಣ.
Clarification on today's incident pic.twitter.com/cJuiYCU3H1
— Dr Syed Naseer Hussain,MP Rajya Sabha (@NasirHussainINC) February 27, 2024