Site icon Vistara News

Sumalatha Ambarish : ನಾನು ಬಿಜೆಪಿ ಸದಸ್ಯೆಯಲ್ಲ, ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ; ಸುಮಲತಾ ಮಾತಿನ ಅರ್ಥವೇನು?

Sumalatha Ambarish says her views are not connected with BIP

ಮಂಡ್ಯ: ನಾನು ಬಿಜೆಪಿ ಸಂಸದೆ ಅಲ್ಲ, ಸದಸ್ಯೆಯೂ ಅಲ್ಲ. ಸ್ವತಂತ್ರಳಾಗಿ ಸಂಸತ್ತಿಗೆ (I am Independent MP) ಆಯ್ಕೆಯಾದವಳು. ನಾನು ಬಿಜೆಪಿಗೆ ಬೆಂಬಲ ನೀಡಿರುವುದು. ನೀಡುತ್ತಿರುವುದು ನಿಜ. ಹಾಗಂತ ಪಕ್ಷದ ನಿರ್ಧಾರಗಳಿಗೂ ನನಗೂ ಸಂಬಂಧ ಇಲ್ಲ. ಹೀಗೆಂದು ಸ್ಪಷ್ಟವಾಗಿ ಹೇಳಿದ್ದಾರೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ (Sumalatha Ambarish). ಇದೇ ಹೊತ್ತಿಗೆ ಅವರು ತನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ (No invitation from Congress says Sumalatha) ಎಂದು ಹೇಳಿದ್ದಾರೆ. ಅವರ ಈ ಎರಡೂ ಹೇಳಿಕೆಗಳನ್ನು ಇಟ್ಟುಕೊಂಡು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ರೈತರ ಸಮಸ್ಯೆಗಳು, ನೀರಿನ ಸಮಸ್ಯೆಗಳ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು. ಹಾಗಂತ ತಾನು ಬಿಜೆಪಿಯ ಸದಸ್ಯೆಯಲ್ಲ ಎನ್ನುವುದನ್ನು ಒತ್ತಿ ಹೇಳಿದರು.

ಬಿಜೆಪಿ ನಾಯಕರು ಮಾಡಿರುವ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನನಗೂ ಸಂಬಂಧವಿಲ್ಲ. ಯಾರು ಆರೋಪ ಮಾಡಿದ್ದಾರೆಯೋ ಅವರೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಿರುವಾಗ ಆ ವಿಚಾರವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ಸ್ವತಂತ್ರ ಸಂಸದೆ ಮಾತ್ರವಲ್ಲ, ಸ್ವತಂತ್ರವಾಗಿ ನನ್ನದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ನನ್ನ ನಿಲುವು ಏನು ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ಪಕ್ಷದ ನಿಲುವಿನ ಬಗ್ಗೆ ಸಂಬಂಧಪಟ್ಟವರಲ್ಲಿ ಅಥವಾ ಪಕ್ಷದ ವಕ್ತಾರರ ಬಳಿ ಕೇಳಿ ಎಂದರು.

ಬಿಜೆಪಿಯ ನಿರ್ಧಾರಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಲಾರೆ. ಹಾಗೆಂದು ನನ್ನ ಸ್ವಂತ ಅಭಿಪ್ರಾಯ ನನ್ನದು. ಪಕ್ಷದ ನಿಲುವನ್ನು ನನ್ನ ಬಳಿ ತಿಳಿಸಿ, ಅದರ ಬಗ್ಗೆ ನನಗೆ ಸಹಮತ ಮೂಡಿದರೆ ಖಂಡಿತಾ ಬೆಂಬಲಿಸುತ್ತೇನೆ ಎಂದರು.

ಆಪರೇಷನ್‌ ಹಸ್ತದ ಬಗ್ಗೆ ಸುಮಲತಾ ಹೇಳಿದ್ದೇನು?

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಆಪರೇಷನ್‌ ಹಸ್ತ ಮಾಡಲಾಗುತ್ತಿದೆ ಎಂಬ ಬಗ್ಗೆ ಕೇಳಿದಾಗ, ಈ ವಿಚಾರದಲ್ಲಿ, ಯಾರೂ ನನಗೆ ಕಾಂಗ್ರೆಸ್‌ಗೆ ಆಹ್ವಾನ ನೀಡಿಲ್ಲ ಎಂದರು. ಕಾಂಗ್ರೆಸ್ ನಿಂದ ಆಫರ್ ವಿಚಾರವೆಲ್ಲವೂ ಊಹಾಪೋಹ ಎಂದರು. ರಾಜಕೀಯ ಅನ್ನೋದು ನನಗೆ ಅನಿವಾರ್ಯ ಅಲ್ಲ, ಆಕಸ್ಮಿಕ. ಎಲ್ಲವೂ ಸರಿ ಎನಿಸಿದ್ರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.

ಸುಮಲತಾ ಹಾಜರಾದ ಸಭೆಗೆ ಪ್ರತಾಪ್‌ ಸಿಂಹ ಗೈರು

ಮಂಡ್ಯದಲ್ಲಿ ನಡೆದ ಕಾವೇರಿ ವಿಚಾರದಲ್ಲಿ ಬಿಜೆಪಿ ಆಯೋಜಿಸಿದ ಸಭೆಯಲ್ಲಿ ಸಂಸದೆ ಸುಮಲತಾ ಹಾಜರಾಗಿದ್ದರೆ, ಮೈಸೂರು ಸಂಸದ ಪ್ರತಾಪ್‌ ಸಿಂಹ ಗೈರುಹಾಜರಾಗಿದ್ದರು. ಮಾಜಿ ಶಾಸಕ ರಾಮದಾಸ್, ಸಿ ಪಿ ಯೋಗೇಶ್ವರ್ ಕೂಡಾ ಬಂದಿಲ್ಲ.

ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ, ಮಾಜಿ ಶಾಸಕ ಎಲ್ ನಾಗೇಂದ್ರ, ನಿರಂಜನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್ ಭಾಗಿಯಾಗಿದ್ದಾರೆ. ಕಾವೇರಿ ವಿಚಾರದಲ್ಲೂ ಇಬ್ಬರು ಮುಖಂಡರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

Exit mobile version