Site icon Vistara News

Minister D Sudhakar : ಸಚಿವ ಡಿ. ಸುಧಾಕರ್‌ ವಿರುದ್ಧ ದಾಖಲಾದ ಕೇಸ್‌ಗಳು ಯಾವುವು? ಅದಕ್ಕೇನು ಶಿಕ್ಷೆ?

Minister D Sudhakar

ಬೆಂಗಳೂರು: ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ಪ್ರಕರಣವು ಬಹಳ ಗಂಭೀರವಾಗಿದೆ. ಆದರೆ, ಇವರು ಸಚಿವರು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಜನಸಾಮಾನ್ಯರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾದರೆ ಕೂಡಲೇ ಬಂಧನ ಮಾಡಲಾಗುತ್ತದೆ. ಈಗ ಸಚಿವರ ವಿರುದ್ಧ ದಾಖಲಾಗಿರುವ ಸೆಕ್ಷನ್‌ಗಳು ಏನು? ಅದಕ್ಕೆ ಕಾನೂನಿನಲ್ಲಿ ಏನೆಲ್ಲ ಶಿಕ್ಷೆ ಆಗಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಸಚಿವ ಡಿ ಸುಧಾಕರ್ ವಿರುದ್ಧ ಈಗ ಜಾಮೀನು ರಹಿತ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: Minister D Sudhakar : ಸುಧಾಕರ್‌ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್‌: ಡಿ.ಕೆ. ಶಿವಕುಮಾರ್

ಇದನ್ನೂ ಓದಿ: Minister D Sudhakar : ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ

ಏನಿದು ಪ್ರಕರಣ?

ದಲಿತ ಸಮುದಾಯದ ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ್ದ ದೂರಿನನ್ವಯ ಸಚಿವ ಡಿ. ಸುಧಾಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ಸಚಿವ ಡಿ. ಸುಧಾಕರ್‌ ನಿರಾಕರಣೆ ಮಾಡಿದ್ದಾರೆ.

Exit mobile version