Site icon Vistara News

Yathindra siddaramaiah : ಪುತ್ರನಿಗೆ ರಾಜಕೀಯ ಆಶ್ರಯ ನೀಡಿದ ಸಿದ್ದರಾಮಯ್ಯ; ಎರಡು ಹುದ್ದೆಗೆ ಯತೀಂದ್ರ ನೇಮಕ

Siddaramaiah yathindra

ಬೆಂಗಳೂರು/ಮೈಸೂರು: ವರುಣಾ ಕ್ಷೇತ್ರವನ್ನು (Varuna Constituency) ಬಿಟ್ಟುಕೊಟ್ಟು ತ್ಯಾಗ ರಾಜಕಾರಣ ಮೆರೆದ ಪುತ್ರನಿಗೆ ರಾಜಕೀಯ ʻಆಶ್ರಯʼ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. (CM Siddaramaiah) ಯಾವುದೇ ಹುದ್ದೆ ಇಲ್ಲದೆ ಜವಾಬ್ದಾರಿ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರಿಗೆ ಎರಡೆರಡು ಸಾಂವಿಧಾನಿಕ ಹುದ್ದೆಗಳನ್ನು ದಯಪಾಲಿಸಲಾಗಿದೆ! ಹೌದು ಯತೀಂದ್ರ ಅವರು ಈಗ ಆಶ್ರಯ ಸಮಿತಿ ಅಧ್ಯಕ್ಷರು ಮತ್ತು ಕೆಡಿಪಿ ಸಮಿತಿ ಸದಸ್ಯರು! (Appointed as Ashraya Committee President and KDP Committee Member)

ಕಳೆದ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರು ಸಿಎಂ ಆಗಿ ಹೆಚ್ಚು ಕಡಿಮೆ ಬೆಂಗಳೂರಿಗೆ ಸೀಮಿತವಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ಅವರು ಯಾವುದೇ ಹುದ್ದೆ ಇಲ್ಲದಿದ್ದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ, ಸಣ್ಣದಾದರೂ ಸರಿ ಒಂದು ಜವಾಬ್ದಾರಿ ಬೇಕು ಎಂದು ನೇರವಾಗಿ ಕೇಳಿದ್ದರು. ಅಧಿಕಾರ ಇಲ್ಲದೆ ಇದ್ದರೆ ಅಧಿಕಾರಿಗಳು ಕೂಡಾ ಮಾತು ಕೇಳುವುದಿಲ್ಲ ಎಂದು ಅವರು ತಮ್ಮ ಮಾತಿಗೆ ವಿವರಣೆ ಕೊಟ್ಟಿದ್ದರು. ಜತೆಗೆ ವಿರೋಧ ಪಕ್ಷಗಳು ಕೂಡಾ ಯತೀಂದ್ರ ಅವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅವರು ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದವು.

ಇದೀಗ ಸಿದ್ದರಾಮಯ್ಯಾ ಅವರು ತಮ್ಮ ಪುತ್ರನಿಗೆ ಎರಡೆರಡು ಹುದ್ದೆಗಳನ್ನು ನೀಡಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷತೆ ಮತ್ತು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಈಗ ಅವರು ಹಲವು ಮಹತ್ವದ ಸಭೆಗಳಲ್ಲಿ ಅಧಿಕಾರಯುತವಾಗಿ ಪಾಲ್ಗೊಳ್ಳಬಹುದಾಗಿದೆ

ಈ ಹುದ್ದೆಗಳ ಬಲದಿಂದ ಅವರು ಕ್ಷೇತ್ರದ ಸರ್ಕಾರಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ತಾಲ್ಲೂಕು ಮತ್ತು ಜಿಲ್ಲಾಪಂಚಯತ್ ಸಭೆಗಳಲ್ಲಿ ಭಾಗವಹಿಸಬಹುದು. ಈ ಮೂಲಕ ವರುಣ ಕ್ಷೇತ್ರದ ಜನರ ಸಮಸ್ಯೆಗಳನ್ನ ನೇರವಾಗಿ ಬಗೆಹರಿಸಲು ಅವಕಾಶ ಸಿಗಲಿದೆ.

ನಿಜವೆಂದರೆ ಯಾವುದೇ ಅಧಿಕಾರವಿಲ್ಲದ ಹಿನ್ನೆಲೆಯಲ್ಲಿ ಯತೀಂದ್ರ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಅವರು ಎಲ್ಲಿಗೇ ಹೋದರು ಜನರು ಅವರಿಗೆ ಮುತ್ತಿಗೆ ಹಾಕುತ್ತಿದ್ದರು. ದೂರು, ಮನವಿಗಳನ್ನು ಸಲ್ಲಿಸುತ್ತಿದ್ದರು. ಆದರೆ, ಯಾವುದೇ ಅಧಿಕಾರವಿಲ್ಲದೆ ಅವರು ಅಸಹಾಯಕರಾಗಿದ್ದರು. ಇದೀಗ ಸರ್ಕಾರ ನೂರು ದಿನ ಪೂರೈಸಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಅವರು ಪುತ್ರನಿಗೆ ಭರ್ಜರಿ ಡಬಲ್‌ ಗಿಫ್ಟ್ ನೀಡಿರುವುದರಿಂದ ಅವರ ಸಮಸ್ಯೆ ಬಗೆಹರಿದಂತಾಗಿದೆ.!

ಇದನ್ನೂ ಓದಿ: CM Siddaramaiah : ಸಿದ್ಧಾಂತ ಒಪ್ಪಿದವರು ಸೇರಬಹುದು ಎಂದ ಸಿಎಂ ಸಿದ್ದರಾಮಯ್ಯ; ಆಪರೇಷನ್‌ ಹಸ್ತಕ್ಕೆ ಗ್ರೀನ್‌ ಸಿಗ್ನಲ್‌?

ಮೊದಲ ದಿನವೇ ಭಾರಿ ಡಿಮ್ಯಾಂಡ್‌

ಕೆಡಿಪಿ ಸದಸ್ಯರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಗೆ ಆಗಮಿಸಿದಾಗ ಅವರಿಗೆ ಫುಲ್‌ ಡಿಮ್ಯಾಂಡ್‌ ಸೃಷ್ಟಿಯಾಯಿತು.

ಡಾ.ಯತೀಂದ್ರ ಮೊದಲ ಸಾಲಿನಲ್ಲೇ ಕುಳಿತಿದ್ದರು. ಮತ್ತು ಹಲವಾರು ಅಧಿಕಾರಿಗಳು ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಹುಡುಕಿಕೊಂಡು ಹೋಗಿ ಮಾತನಾಡುತ್ತಿರುವುದು ಕಂಡುಬಂತು. ನಾಗರಿಕರು ಕೂಡಾ ಯತೀಂದ್ರ ಅವರಿಗೆ ಮನವಿ ಪತ್ರಗಳನ್ನು ನೀಡಲು ಸಾಲುಸಾಲಾಗಿ ಬರುತ್ತಿದ್ದಾರೆ.

ವರುಣಾ ಕ್ಷೇತ್ರದ ಮಾಜಿ ಶಾಸಕ Varuna Constituency ಸಿಎಂ ಸಿದ್ದರಾಮಯ್ಯ. CM Siddaramaiah ಯತೀಂದ್ರ ಸಿದ್ದರಾಮಯ್ಯ ಎರಡೆರಡು ಸಾಂವಿಧಾನಿಕ ಹುದ್ದೆ ಆಶ್ರಯ ಸಮಿತಿ ಅಧ್ಯಕ್ಷ ಕೆಡಿಪಿ ಸಮಿತಿ ಸದಸ್ಯರು

Exit mobile version