ವಿಜಯಪುರ/ಬೆಳಗಾವಿ: ವಿಜಯಪುರದ ಧರ್ಮಗುರು, ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಷ್ಮಿ (Tanveer Peera) ಮತ್ತು ಅವರ ವಠಾರದಲ್ಲೇ ವಾಸವಾಗಿರುವ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda pateel Yatnal) ನಡುವಿನ ʻಐಸಿಸ್ ಯುದ್ಧʼ ಇನ್ನಷ್ಟು (Yatnal Vs Moulvi) ಜೋರಾಗಿದೆ.
ತನ್ವೀರ್ ಪೀರಾ ಅವರಿಗೆ ಐಸಿಎಸ್ ಸಂಪರ್ಕವಿದೆ ಎಂದು ಆರೋಪ ಮಾಡಿದ್ದ ಯತ್ನಾಳ್, ಅದರ ಜತೆಗೇ ಆತನ ಕೊಲೆ ಪ್ರಕರಣವೊಂದರ ಆರೋಪಿ ಎಂದೂ ಹೇಳಿದ್ದರು. ಈಗ ಕೊಲೆ ಆರೋಪಿ ಎಂಬುದಕ್ಕೆ ಪೂರಕವಾಗಿ ಕೊಲೆಯಾದವನ ಪತ್ನಿ ನೀಡಿದ ದೂರನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ. ಅದರ ಜತೆಗೆ ತನ್ವೀರ್ ಪೀರ್ ದೇಶ ಬಿಟ್ಟು ಓಡಿ ಹೋಗುವ ಅಪಾಯವೂ ಇದೆ ಎಂದು ಎಚ್ಚರಿಸಿದ್ದಾರೆ.
ಯತ್ನಾಳ್ ಸರಣಿ ಟ್ವೀಟ್ ನಲ್ಲಿ ಹೇಳಿರುವುದೇನು?
1.ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.
2.ಕೊಲೆ ಕೇಸಿನಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ ನಿಂದ ತೆಗಿಸಲಾಯಿತು..
ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.
— Basanagouda R Patil (Yatnal) (@BasanagoudaBJP) December 7, 2023
1/1 pic.twitter.com/Xr3dlhO4bQ
3.ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್ ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ
4.ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ/ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು..
5.ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರಧಲ್ಲಿ ಹಂಚಿಕೊಳ್ಳಲಿದ್ದೇನೆ..ಈತ ದೇಶದಿಂದ ಪೇರಿಕಿತ್ತಲು ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಪೀರನ ಮೇಲೆ ನಿಗಾ ವಹಿಸಬೇಕು.
ಇದನ್ನೂ ಓದಿ: ಉಗ್ರರ ಪರವೆಂದು ಸಾಬೀತಾದ್ರೆ ದೇಶ ತೊರೆಯುವೆ; ಯತ್ನಾಳ್‌ಗೆ ಮುಸ್ಲಿಂ ಧರ್ಮಗುರು ಸವಾಲ್
ಸಿದ್ದರಾಮಯ್ಯನವರ ಮಾತುಗಳನ್ನು ಕೇಳಿರಿ "ನಮ್ಮ ಪೊಲೀಸ್ ಹೋಗೋದು ಬೇಡ ಅಂತಾರೆ"
— Basanagouda R Patil (Yatnal) (@BasanagoudaBJP) December 8, 2023
ಪೊಲೀಸರು ತನ್ವಿರ್ ಪೀರಾ ಮನೆಗೆ ಹೋಗೋದು ಬೇಡ ಅಂದ ಮೇಲೂ ಸಿದ್ದರಾಮಯ್ಯನವರು ಅವರ ಮನೆಗೆ ಹೋಗಿರುವುದು ಓಲೈಕೆ ಅಲ್ಲದೆ ಮತ್ತೇನು?
ಪೊಲೀಸರು ಸೂಕ್ಷ್ಮವಾಗಿ ಅವರ ಮನೆಗೆ ಹೋಗೋದು ಬೇಡ ಸಮಯ ಆಗಿದೆ ಅಂತ ಹೇಳಿದ ಮೇಲೂ ಸಿದ್ದರಾಮಯ್ಯನವರು ಪೀರಾ ಮನೆಗೆ ಭೇಟಿ… pic.twitter.com/hGwrSISedX
ಕೊಲೆಯಾದವನ ಹೆಂಡತಿ ಬರೆದ ಪತ್ರದಲ್ಲಿ ಏನಿದೆ?
ವಿಜಯಪುರ ಮಹಾನಗರಪಾಲಿಕೆ ಸದಸ್ಯೆಯಾಗಿದ್ದ ನಿಶಾತ ಹೈದರ್ ಅವರ ಪತಿ ಹೈದರ್ ಅಲಿ ನದಾಫ್ ಅವರನ್ನು 2023ರ ಮೇ 6ರಂದು ಕೊಲೆಯಾಗಿತ್ತು. ತನ್ನ ಗಂಡನ ಹಂತಕರು ಜೈಲಿನಿಂದ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಪ್ರಕರಣದ ಆರೋಪಿಗಳಾದ ಅಸೀಮುಲ್ಲಾ ಖಾದ್ರಿ, ತನ್ವೀರ್ ಪೀರಾ ಪಿರಜಾದೆ ಮತ್ತು ರಾಜೀವ್ ಪೀರಾ ಪಿರಜಾದೆ ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ಪೀರಜಾದೆಯ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖವಿದೆ.