ನವದೆಹಲಿ: ಪೆರುವಿನ (Peru) ಲಿಮಾದಲ್ಲಿ (Lima) ಸುಮಾರು 3000 ವರ್ಷಗಳಷ್ಟು ಹಳೆಯದಾದ ಮಮ್ಮಿಯನ್ನು (3000 Year Old Mummy) ಪುರಾತತ್ವಶಾಸ್ತ್ರಜ್ಞರು (Archaeologist) ಉತ್ಖನನ ಮಾಡಿದ್ದಾರೆ. ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉತ್ಖನನ ಮಾಡುವಾಗ ಹತ್ತಿ ಬಂಡಲ್‌ನೊಳಗೆ ತಲೆ ಬುರಡೆ ಮತ್ತು ಕೂದಲುಗಳು ಪತ್ತೆಯಾಗಿದ್ದವು. ಬಳಿಕ 3 ಸಾವಿರ ಹಳೆಯ ಮಮ್ಮಿಯು ದೊರೆತಿದೆ ಎಂದು ಘೋಷಣೆ ಮಾಡಲಾಯಿತು.
ವಿದ್ಯಾರ್ಥಿಗಳು ಈಗ ಉತ್ಖನನ ಮಾಡಿರುವ ಮಮ್ಮಿ ಪ್ರಾಯಶಃ ಕ್ರಿಸ್ತಶಕ ಪೂರ್ವ 1500 ಮತ್ತು 1000 ನಡುವೆ ಲಿಮಾದ ಕಣಿವೆಗಳಲ್ಲಿ ಅಭಿವೃದ್ಧಿ ಹೊಂದಿದ ಮಂಚಯ್ ಸಂಸ್ಕೃತಿಗೆ ಸೇರಿದ್ದಾಗಿರಬಹುದು ಎಂದು ಪುರಾತತ್ವಶಾಸ್ತ್ರಜ್ಞ ಮಿಗುಯೆಲ್ ಅಗ್ಯುಲರ್ ಅಭಿಪ್ರಾಯಪಟ್ಟಿದ್ದಾರೆ. ಈ ಮಮ್ಮಿಯು ಸೂರ್ಯೋದಯದ ಕಡೆಗೆ ಸೂಚಿಸುವ ಯು(U) ಆಕಾರದಲ್ಲಿ ನಿರ್ಮಿಸಲಾದ ದೇವಾಲಯಗಳ ನಿರ್ಮಾಣದೊಂದಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗಿದೆ.
ಈ ದೇವಾಲಯದ ನಿರ್ಮಾಣದ ಕೊನೆಯ ಹಂತದಲ್ಲಿ ವ್ಯಕ್ತಿಯನ್ನು ಬಿಡಲಾಗಿದೆ ಅಥವಾ (ಬಲಿಯಾಗಿ) ಅರ್ಪಿಸಲಾಗಿದೆ. ಇದು ಸುಮಾರು ಮೂರು ಸಾವಿರದಷ್ಟು ಹಳೆಯದ್ದಾಗಿದ ಎಂದು ಎಂದು ಅಗ್ಯುಲರ್ ಹೇಳಿದ್ದಾರೆ. ಪುರಾತತ್ತ್ವಜ್ಞರು ಕಾರ್ನ್, ಕೋಕಾ ಎಲೆಗಳು ಮತ್ತು ಬೀಜಗಳನ್ನು ಒಳಗೊಂಡಂತೆ ದೇಹದೊಂದಿಗೆ ಸಮಾಧಿ ಮಾಡಲಾದ ಇತರ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಈ ಮಮ್ಮಿಯನ್ನು ಉತ್ಖನನ ಮಾಡುವ ಮುನ್ನ ಆ ಸ್ಥಳದಲ್ಲಿ ಸುಮಾರು 8 ಟನ್ ಕಸವನ್ನು ಎಚ್ಚರಿಕೆಯಿಂದ ತೆಗೆದು ಹಾಕಲಾಗಿದೆ ಎಂಬ ಪುರಾತತ್ತ್ವ ಶಾಸ್ತ್ರಜ್ಞ ಮಿಗುಯೆಲ್ ಅಗ್ಯುಲರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Madinah Gold | ಮದೀನಾದಲ್ಲಿ ಚಿನ್ನದ ಉತ್ಖನನಕ್ಕೆ ಸೌದಿ ಆದೇಶ, ಪೆಟ್ರೋಲ್ ನಾಡಲ್ಲಿ ಎಷ್ಟಿದೆ ಬಂಗಾರ?
ಯು (U) ಆಕಾರದ ದೇವಾಲಯದ ಮಧ್ಯಭಾಗದಲ್ಲಿರುವ ಸಮಾಧಿಯಲ್ಲಿ ಮಮ್ಮಿಯನ್ನು ಇರಿಸಲಾಗಿತ್ತು. ಸುಮಾರು 3,000 ವರ್ಷಗಳ ಹಿಂದೆ “ರಚನೆಯ ಯುಗದ” ಮಂಚಯ ಸಂಸ್ಕೃತಿಯ ವಿಶಿಷ್ಟವಾದ ದೇಹವನ್ನು ಚಪ್ಪಟೆಯಾಗಿ ಇಡಲಾಗಿದೆ ಎಂದು ಅವರು ಹೇಳಿದರು. ಹತ್ತಿ ಮತ್ತು ತರಕಾರಿ ನಾರುಗಳಿಂದ ಮಾಡಲಾದ ಬಟ್ಟೆಯಲ್ಲಿ ದೇಹವನ್ನು ಸುತ್ತಿ ಇಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.