Site icon Vistara News

Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

Aliens

ಏಲಿಯನ್‌ಗಳು (Aliens) ಬೇರೆ ಗ್ರಹದಿಂದ ಬಂದದ್ದಲ್ಲ. ಅವು ಭೂಮಿಯ (earth) ಮೇಲೆಯೇ ಸಹಸ್ರಾರು ವರ್ಷಗಳಿಂದ ಇವೆ. ಸಾಗರ ಮತ್ತು ಆಳವಾದ ಭೂಗತ ಪ್ರದೇಶಗಳಂತಹ (oceans and deep underground) ಅನ್ವೇಷಿಸಲಾಗದ ಪ್ರದೇಶಗಳಲ್ಲಿ (New Invention) ಅವುಗಳು ಯಾರ ಕಣ್ಣಿಗೂ ಕಾಣದಂತೆ ಮರೆಯಾಗಿ ವಾಸಿಸುತ್ತವೆ ಎಂದು ಹಾರ್ವರ್ಡ್ ವಿಜ್ಞಾನಿಗಳು (Harvard scientists) ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಂನ ಹೊಸ ಪ್ರಬಂಧವು “ಕ್ರಿಪ್ಟೋಟೆರೆಸ್ಟ್ರಿಯಲ್” ಜೀವಿಗಳ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದೆ. ಇದರಲ್ಲಿ ಏಲಿಯನ್‌ಗಳನ್ನು ಅನ್ಯಗ್ರಹ ಜೀವಿಗಳೆಂದು ನಾವು ಭಾವಿಸಿದ್ದೇವೆ. ಆದರೆ ಅವು ದೂರದ ಗ್ರಹಗಳಿಂದ ಅಲ್ಲ. ಭೂಮಿಯ ಮೇಲೆ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿವೆ. ಯಾರ ಕಣ್ಣಿಗೆ ಕಾಣದಂತೆ ಮರೆಯಾಗಿವೆ ಎಂದು ಇದೀಗ ಹಾರ್ವರ್ಡ್ ವಿಜ್ಞಾನಿಗಳು ಹೇಳಿರುವುದು ಅನ್ಯಗ್ರಹದಲ್ಲಿ ಜೀವಿಗಳು ಅಸ್ತಿತ್ವದಲ್ಲಿವೆ, ಬ್ರಹ್ಮಾಂಡದ ಇತರ ಭಾಗಗಳಿಂದ ಭೂಮಿಗೆ ಬರುತ್ತವೆ ಎನ್ನುವ ನಂಬಿಕೆಗೆ ಸವಾಲು ಮಾಡಿದಂತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಪ್ರೇರೇಪಣೆ ನೀಡಿದಂತಾಗಿದೆ.

ಭೂಮಿಯಲ್ಲಿ ಇನ್ನೂ ವಿಶಾಲವಾದ, ಅನ್ವೇಷಿಸದ ಪ್ರದೇಶಗಳು ಇವೆ. ಭೂಮಿಯ ಶೇ. 80ರಷ್ಟು ಸಾಗರಗಳು ನಕ್ಷೆಯಲ್ಲಿ ಇಲ್ಲ. ಅಂತಹ ಪ್ರದೇಶಗಳಲ್ಲಿ ಇಂತಹ ಜೀವಿಗಳು ವಾಸಿಸಲು ಸಾಕಷ್ಟು ಜಾಗವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದು, ಇವರು ದೂರದ ಗ್ರಹದಿಂದ ಭೂಮಿಗೆ ಬರುವವರಲ್ಲ. ನಮ್ಮದೇ ಪ್ರಪಂಚದಲ್ಲಿರುವ ದೀರ್ಘಾವಧಿಯ ನಿವಾಸಿಗಳು ಎಂದಿದ್ದಾರೆ.


ಮುಳುಗಿರುವ ರಹಸ್ಯ

ಸಂಶೋಧಕರು ಇದಕ್ಕಾಗಿ ಪ್ರಾಚೀನ ನಾಗರಿಕತೆಗಳ ಬಗ್ಗೆ ವಿವರಿಸುತ್ತಾರೆ. ಪ್ರಾಚೀನ ನಾಗರಿಕತೆಯ ಅನೇಕ ಅವಶೇಷಗಳು ಸಮುದ್ರದ ಕೆಳಗೆ ಅಡಗಿವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಜಪಾನ್‌ನ ಯೋನಾಗುನಿ ಜಿಮಾದ ಕರಾವಳಿಯಲ್ಲಿ ಬೃಹತ್ ಮುಳುಗಿರುವ ಕಲ್ಲಿನ ರಚನೆ. ಇದನ್ನು 5,000 ವರ್ಷಗಳಷ್ಟು ಹಳೆಯದಾದ ಪಿರಮಿಡ್‌ನ ಅವಶೇಷ ಎಂದು ಕೆಲವರು ನಂಬುತ್ತಾರೆ. ಇದನ್ನು ಸಾಮಾನ್ಯವಾಗಿ ಜಪಾನೀಸ್ ಅಟ್ಲಾಂಟಿಸ್ ಎಂದು ಕರೆಯಲಾಗುತ್ತದೆ. ಈ ರಚನೆಯು ಅಜ್ಞಾತ, ಮುಂದುವರಿದ ನಾಗರಿಕತೆಗಳು ಅಸ್ತಿತ್ವದಲ್ಲಿದ್ದಿರಬಹುದು ಮತ್ತು ಇನ್ನೂ ಅಸ್ತಿತ್ವದಲ್ಲಿರಬಹುದು ಎಂಬ ವಾದವನ್ನು ಉತ್ತೇಜಿಸುತ್ತದೆ.

ಭೂಗತ ಅಭಯಾರಣ್ಯಗಳು

ಅಧ್ಯಯನದ ಪ್ರಕಾರ ಅನ್ಯಲೋಕದ ಜೀವಿಗಳು ಆಳವಾದ ಭೂಗತ, ಜ್ವಾಲಾಮುಖಿಗಳ ಕೆಳಗೆ ಅಥವಾ ಸಮುದ್ರದ ಕತ್ತಲೆಯಲ್ಲಿ ಅನ್ವೇಷಿಸದ ಕಂದಕಗಳಲ್ಲಿ ನೆಲೆಗೊಂಡಿರಬಹುದು ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಇದು ಈಗ ಪ್ರಪಂಚದಾದ್ಯಂತದ ಬಾಹ್ಯಾಕಾಶ ಸಂಸ್ಥೆಗಳ ಆಸಕ್ತಿಯನ್ನು ಹೆಚ್ಚಿಸಿವೆ.

ಇದನ್ನೂ ಓದಿ: Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ತಜ್ಞರಿಂದ ಎಚ್ಚರಿಕೆ

ಅನ್ಯಗ್ರಹದ ಜೀವಿಗಳನ್ನು ಹುಡುಕುವ ವಿಚಾರದಲ್ಲಿ ಸಂಶೋಧಕರು ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಮಾನವರ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಜೀವಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವುದಾಗಿ ಹೇಳಲಾಗುತ್ತದೆ. ಹೀಗಾಗಿ ಗೌಪ್ಯವಾಗಿರುವ ರಹಸ್ಯಗಳನ್ನು ಎಚ್ಚರಿಕೆಯಿಂದ ಮತ್ತು ಗೌರವಾನ್ವಿತ ವಿಧಾನದಿಂದ ಅಧ್ಯಯನ ನಡೆಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಈ ಅಧ್ಯಯನವು ಚಿಂತನೆಯ ಹೊಸ ಮಾರ್ಗಗಳನ್ನು ತೆರೆದಿದೆ. ನಮ್ಮ ಗ್ರಹದ ವಿಶಾಲ ಪ್ರದೇಶಗಳನ್ನು ಇದು ಗುರುತಿಸಿದೆ. ಮಾತ್ರವಲ್ಲದೇ ರಹಸ್ಯವಾಗಿ ಮುಚ್ಚಿ ಹೋಗಿರುವ ಅನೇಕ ವಿಚಾರಗಳನ್ನು ಅನ್ವೇಷಿಸಲು ಪ್ರೇರಣೆ ನೀಡಿದೆ.

Exit mobile version