Site icon Vistara News

Chandrayaan 3: ಚಂದ್ರಯಾನ 3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್! ಇತಿಹಾಸ ಸೃಷ್ಟಿಸಿದ ಇಸ್ರೋ

Chandrayaan 3 Lander

ಬೆಂಗಳೂರು, ಕರ್ನಾಟಕ: ಭಾರತ ಕಳುಹಿಸಿದ್ದ ಚಂದ್ರಯಾನ 3 ನೌಕೆಯ (Chandrayaan 3) ಲ್ಯಾಂಡರ್ (Lander) ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ(Chandrayaan-3 Mission Soft-landing). ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian space research organisation – ISRO) ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ (Moon’s South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ, ಈ ಸಕ್ಸೆಸ್‌ನೊಂದಿಗೆ ಭಾರತವು (India) ಅಮೆರಿಕ (America), ರಷ್ಯಾ (Russia) ಮತ್ತು ಚೀನಾ (China) ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಮಧ್ಯೆ, ಚಂದ್ರಯಾನ-3 ಲ್ಯಾಂಡರ್ ಮತ್ತು ಬೆಂಗಳೂರಿನಲ್ಲಿರುವ MOX-ISTRAC ಸೆಂಟರ್ ಮಧ್ಯೆ ಸಂಪರ್ಕ ಏರ್ಪಟ್ಟಿದೆ. ಲ್ಯಾಂಡರ್‌ ತನ್ನ ಹಾರಿಜಂಟಲ್ ಕ್ಯಾಮೆರಾಗಳಿಂದ ಇಳಿಯುವಾಗ ತೆಗೆದ ಕೆಲವು ಫೋಟೋಗಳನ್ನು ಭೂಮಿಗೆ ರವಾನಿಸಿದೆ.

ಜುಲೈ 14ರಂದು ಇಸ್ರೋ ಚಂದ್ರಯಾನ-3 ಮಿಷನ್‌ಗೆ ಚಾಲನೆ ನೀಡಿತ್ತು. ಚಂದ್ರಯಾನ 3 ನೌಕೆಯನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಭೂಮಿಯ ಕಕ್ಷೆ ಸೇರಿದ್ದ ಚಂದ್ರಯಾನ 3 ಬಳಿಕ ಚಂದ್ರನ ಕಕ್ಷೆ ಯಶಸ್ವಿಯಾಗಿ ಸೇರಿ, ಇದೀಗ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಸಕ್ಸೆಸ್ ಕಂಡಿದೆ. 2019ರಲ್ಲಿ ಕೈಗೊಳ್ಳಲಾಗಿದ್ದ, ಚಂದ್ರಯಾನ 2 ಲ್ಯಾಂಡಿಂಗ್ ಮಾಡುವಾಗಲೇ ವಿಫಲವಾಗಿತ್ತು. ಚಂದ್ರಯಾನ 3 ತಪ್ಪನ್ನು ಮೀರಿ, ಯಶಸ್ಸು ಕಂಡಿದೆ.

ಚಂದ್ರಯಾನ-3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಲೈವ್

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನದ ನಂತರ ಮುಂದೇನು? ಇಸ್ರೋದ ಮುಂದಿನ ಯೋಜನೆಗಳು ಹೀಗಿವೆ

ಜುಲೈ 14ರಂದು ಚಂದ್ರಯಾನ-3 ಉಡಾವಣೆ

ಚಂದ್ರಯಾನ 3 ಯಶಸ್ವಿಯಾಗಲಿ ಎಂದು ದೇಶಾದ್ಯಂತ ಮಂದಿರ, ಮಸೀದಿ ಮತ್ತು ಚರ್ಚುಗಳಲ್ಲಿ ಜನರು ವಿಶೇಷ ಪ್ರಾರ್ಥನೆ ಕೈಗೊಂಡಿದ್ದರು. ವಿಶೇಷ ಹೋಮಗಳನ್ನು ನಡೆಸಲಾಗಿತ್ತು. ಚಂದ್ರಯಾನ-3, ಇದು ಭಾರತದ ಮೂರನೇ ಚಂದ್ರನ ಯೋಜನೆಯಾಗಿದೆ. ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸ್ಟೇಷನ್ ಮೂಲಕ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಚಂದ್ರಯಾನ-3 ಮಿಷನ್ ಮೂಲಕ ಭಾರತವು ಎಲೈಟ್ ಗುಂಪುಗಳ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಈಗಾಗಲೇ ಅಮೆರಿಕ, ಈ ಹಿಂದಿನ ಸೋವಿಯತ್ ಯೂನಿಯನ್ ಹಾಗೂ ಚೀನಾ ಈ ಸಾಧನೆಯನ್ನು ಮಾಡಿದ ರಾಷ್ಟ್ರಗಳಾಗಿವೆ. ಭಾರತವು ಈ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version