Site icon Vistara News

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Headless Chicken

ಪವಾಡಗಳು (Miracle) ಜೀವನದ (life) ಭಾಗವಾಗಿದೆ. ವಿಜ್ಞಾನದ (science) ಪ್ರಶ್ನೆಗೂ ನಿಲುಕದ ಕೆಲವೊಂದು ಸಂಗತಿಗಳು ಘಟಿಸುತ್ತವೆ. ಯಾರ ಬಳಿಯೂ ಉತ್ತರವಿರುವುದಿಲ್ಲ. ಈ ವಿಷಯಗಳನ್ನು ಅಲೌಕಿಕ (supernatural) ವಿದ್ಯಮಾನದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಈ ಕೋಳಿಯೂ (Headless Chicken) ಒಂದು. ಇದು ಊಹೆಗೂ ನಿಲುಕದಂತಿದೆ. ನಂಬಲು ಕಷ್ಟ ಮತ್ತು ಆಶ್ಚರ್ಯಕರವಾಗಿದೆ.

ಇದೀಗ ಒಂದು ಪವಾಡ ಪ್ರಕರಣವೊಂದು ವರದಿಯಾಗಿದೆ. ಇದರಲ್ಲಿ ‘ಮೈಕ್’ ಎಂಬ ಕೋಳಿ (Miracle Mike) ತನ್ನ ಉಳಿದ 18 ತಿಂಗಳ ಸುದೀರ್ಘ ಜೀವನವನ್ನು ತಲೆಯಿಲ್ಲದೇ ಕಳೆದಿದೆ.

1945 ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ (United States) ಕೊಲೊರಾಡೋದ (Colorado) ಫ್ರೂಟಾದಲ್ಲಿ ವಾಸಿಸುತ್ತಿದ್ದ ಓಲ್ಸೆನ್ ಕುಟುಂಬವು ಸಂಜೆಯ ಊಟಕ್ಕಾಗಿ ಚಿಕನ್ ತಯಾರಿಸಲು ಯೋಚನೆ ಮಾಡುತ್ತಿತ್ತು. ಅದಕ್ಕಾಗಿ ರೈತ ಲಾಯ್ಡ್ ಓಲ್ಸೆನ್ ಮನೆಗೆ ತಾಜಾ ಮಾಂಸವನ್ನು ತರಲು ಹೊಲಕ್ಕೆ ಹೋಗುತ್ತಾನೆ.

ಅಲ್ಲಿ ಆತ ‘ಮೈಕ್’ ಎಂದು ಗುರುತಿಸಲ್ಪಟ್ಟ ಐದೂವರೆ ತಿಂಗಳ ಗಂಡು ವಯಾಂಡೊಟ್ಟೆ ಕೋಳಿಯನ್ನು ಎತ್ತಿಕೊಂಡು ತರುತ್ತಾನೆ. ಅದನ್ನು ಎಷ್ಟೇ ಕೊಲ್ಲಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲಿಲ್ಲ. ತಲೆಯನ್ನೇ ಕತ್ತರಿಸಿದರೂ ಅದು ಉಸಿರು ಚೆಲ್ಲಲಿಲ್ಲ. ಅದೊಂದು ಅಭೂತಪೂರ್ವ ಘಟನೆಯಾಗಿದ್ದು, ವಿಶ್ವವೇ ಬೆರಗಾಗುವಂತೆ ಮಾಡಿತು.


18 ತಿಂಗಳು ಹೇಗೆ ಬದುಕಿತು?

ಲಾಯ್ಡ್ ಕೋಳಿಯ ಶಿರಚ್ಛೇದ ಮಾಡಿದ. ಕತ್ತಿಯ ಏಟು ಅದರ ತಲೆಯ ಹೆಚ್ಚಿನ ಭಾಗಗಳನ್ನು ಕತ್ತರಿಸಿದರೂ ಅದು ಕುತ್ತಿಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಂಠನಾಳವನ್ನು ಸೀಳುವಲ್ಲಿ ವಿಫಲವಾಯಿತು. ಹೀಗಾಗಿ ಅದು ಬದುಕುಳಿಯಿತು. ಒಂದು ಕಿವಿ ಮತ್ತು ಮೆದುಳಿನ ಹೆಚ್ಚಿನ ಕಾಂಡವು ಹಾನಿಗೊಳಗಾದರೂ ಅದು ಸಾಯಲಿಲ್ಲ. ರಕ್ತ ವೇಗವಾಗಿ ಹೆಪ್ಪುಗಟ್ಟಿದ್ದರಿಂದ ಅತಿಯಾದ ರಕ್ತದ ನಷ್ಟವಾಗಲಿಲ್ಲ.

ಬಳಿಕ ಲಾಯ್ಡ್ ಮೈಕ್‌ ಗೆ ಹೊಸ ಜೀವನ ನೀಡಲು ಮುಂದಾದ. ಕೋಳಿಯನ್ನು ಮನೆಗೆ ತಂದು ಸಂಪೂರ್ಣ ಆರೈಕೆ ಮಾಡಲು ನಿರ್ಧರಿಸಿದರು.

ಲಾಯ್ಡ್ ಅದಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುವ ಆಹಾರವನ್ನು ತಯಾರಿಸಿದ. ಐಡ್ರಾಪರ್ ಮೂಲಕ ಅದಕ್ಕೆ ಆಹಾರವನ್ನು ನೀಡಿದ. ಕೆಲವು ಹುಳು ಮತ್ತು ಜೋಳವನ್ನು ನೀಡಿದನು.

ಮೈಕ್ ಗಳಿಸಿದ ಖ್ಯಾತಿ

ಈ ಘಟನೆಯು ಜಗತ್ತಿಗೇ ಸುದ್ದಿಯಾಗುವಷ್ಟು ವಿಸ್ಮಯಕಾರಿಯಾಗಿತ್ತು. ಮೈಕ್ ಭಾರೀ ಜನಮನಗೆದ್ದಿತು ಮತ್ತು ಸಂಶೋಧನೆಯ ವಿಷಯವಾಯಿತು.

ಹಲವಾರು ನಿಯತಕಾಲಿಕೆಗಳಿಗೆ ಇದನ್ನು ವರದಿ ಮಾಡಿತ್ತು. ಅನೇಕ ಪತ್ರಿಕೆಗಳಿಗೆ ಇದು ಮುಖಪುಟದ ವಿಷಯವಾಯಿತು. ಮೈಕ್ ಅನ್ನು 25 ಸೆಂಟ್ಸ್ ವೆಚ್ಚದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಯಿತು.

“ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ” ಅನ್ನು 1999 ರಿಂದ ಕೊಲೊರಾಡೋದ ಫ್ರೂಟಾದಲ್ಲಿ ಪ್ರತಿ ಮೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಮೈಕ್ ನಿಂದ ಕೋಳಿ ಮಾಲೀಕ ತಿಂಗಳಿಗೆ ಸುಮಾರು 45,000 ಡಾಲರ್ ಆದಾಯ ಗಳಿಸಿದ. ಈ ಅದ್ಭುತ ಕೋಳಿ ಮೌಲ್ಯ ಆಗ 10,000 ಡಾಲರ್ ಆಗಿತ್ತು.

ಸಾವು ಹೇಗಾಯಿತು?

1947ರ ಮಾರ್ಚ್ ನಲ್ಲಿ ಜೋಳದ ತುಂಡು ಮೈಕ್ ನ ಗಂಟಲಲ್ಲಿ ಸಿಲುಕಿದ ನಂತರ ಅದು ಸಾವನ್ನಪ್ಪಿತು. ಪ್ರವಾಸದಿಂದ ಹಿಂದಿರುಗುವಾಗ ಲಾಯ್ಡ್ ಶುಚಿಗೊಳಿಸುವ ಸಿರಿಂಜ್‌ಗಳನ್ನು ಬಿಟ್ಟು ಬಂದಿದ್ದರಿಂದ ಮೈಕ್ ನನ್ನು ಬದುಕಿಸಲು ವಿಫಲರಾದರು.

Exit mobile version