ನವದೆಹಲಿ: ಸಿಂಗಾಪುರದ ಡಿಎಸ್-ಎಸ್ಎಆರ್ ಉಪಗ್ರಹವನ್ನು (DS-SAR satellite) 6 ಸಹ ಪ್ರಯಾಣಿಕರೊಂದಿಗೆ ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ)-ಸಿ56 (PSLV-C56) ಅನ್ನು ಜುಲೈ 30 ರಂದು ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೋಮವಾರ ಪ್ರಕಟಿಸಿದೆ.
ಪಿಎಸ್‌ಎಲ್‌ವಿ-ಸಿ56 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿ-ಎಸ್‌ಎಚ್ಎಆರ್ ಮೊದಲ ಉಡಾವಣಾ ಕೇಂದ್ರವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಬೆಳಿಗ್ಗೆ 6.30ಕ್ಕೆ ಲಾಂಚ್ ಆಗಲಿದೆ.
ಡಿಎಸ್-ಎಸ್ಎಆರ್ ಉಪಗ್ರಹದ ಪ್ರಾಥಮಿಕ ಪೇಲೋಡ್ 360 ಕೆಜಿ ಇದೆ. ಈ ಉಪಗ್ರಹವನ್ನು ಸಿಂಗಾಪುರ ಸರ್ಕಾರವನ್ನು ಪ್ರತಿನಿಧಿಸುವ ಡಿಎಸ್‌ಟಿಎ ಮತ್ತು ಎಸ್ ಇಟಿ ಎಂಜಿನಿಯರಿಂಗ್ ನಡುವಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವನ್ನು ಇಸ್ರೋ 5 ಡಿಗ್ರಿ ಇಳಿಜಾರು ಮತ್ತು 535 ಕಿಮೀ ಎತ್ತರದಲ್ಲಿ ಸಮಭಾಜಕ ಕಕ್ಷೆಗೆ (NEO) ಸೇರಿಸಲಿದೆ.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ ನೌಕೆಯ 4ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಸಕ್ಸೆಸ್, ಚಂದಿರನ ಅಂಗಳಕ್ಕೆ ಮತ್ತಷ್ಟು ಹತ್ತಿರ!
ಡಿಎಸ್-ಎಸ್ಎಆರ್ ಉಪಗ್ರಹ ನಿಯೋಜನೆಗೆ ಇಸ್ರೋ ನ್ಯೂ ಸ್ಪೇಸ್ ಇಂಡಿಯಾ ಲಿ.(ಎನ್ಎಸ್ಐಎಲ್)ನಿಂದ ಪಿಎಸ್ಎಲ್‌ವಿ-ಸಿ56 ಖರೀದಿಸಿದೆ. ಸಿಂಗಾಪುರಕ್ಕೆ ಸೇರಿದ TeLEOS-2 ಮತ್ತು Lumelite-4 ಎಂಬ ಎರಡು ಉಪಗ್ರಹಗಳನ್ನು ಪಿಎಸ್ಎಲ್‌ವಿ ಇಸ್ರೋ ಈ ಹಿಂದೆ ಉಡಾವಣೆ ಮಾಡಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.