Site icon Vistara News

Japan Moon Mission: ಚಂದ್ರಯಾನದಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದ ಜಪಾನ್! ಕಾರಣ ಏನು?

Japan's H2A Rocket

ನವದೆಹಲಿ: ಭಾರತದ ಚಂದ್ರಯಾನ-3 (Chandrayaan 3) ಮಿಷನ್ ಯಶಸ್ವಿಯಾದ ಬೆನ್ನಲ್ಲೇ ಜಪಾನ್ ಕೂಡ ತನ್ನ ಚಂದ್ರನ ಯೋಜನೆಯನ್ನು ಆರಂಭಿಸಿತ್ತು(Japan Moons Mission). ನಿಗದಿಯಂತೆ ಸೋಮವಾರ ಜಪಾನ್‌ನ ಲೂನಾರ್ ಮಿಷನ್‌ಗೆ ಚಾಲನೆ ದೊರೆಯಬೇಕಿತ್ತು. ಲೂನಾರ್ ಉಪಗ್ರಹವನ್ನು ಹೊತ್ತ ಎಚ್2-ಎ ರಾಕೆಟ್ (H2-A Rocket) ನಭಕ್ಕೆ ನೆಗಯಬೇಕಾಗಿತ್ತು. ಆದರೆ, ಲಾಚಿಂಗ್ ಸಮಯಕ್ಕಿಂತ 30 ನಿಮಿಷಗಳ ಮೊದಲಿಗೆ ಲೂನಾರ್ ಮಿಷನ್ (Japan Moon Mission Cancelled) ರದ್ದು ಮಾಡಲಾಗಿದೆ. ಜಪಾನ್ ಈ ರೀತಿಯಾಗಿ ಮೂರನೇ ಬಾರಿಗೆ ತನ್ನ ಲೂನಾರ್ ಮಿಷನ್ ಚಾಲನೆಯನ್ನು ಮುಂದಕ್ಕೆ ಹಾಕುತ್ತಿದೆ. ಜಪಾನ್, ಮತ್ತೆ ಯಾವಾಗ ಲಾಂಚ್ ಮಾಡಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ.

ಬಾಹ್ಯಾಕಾಶದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿರುವ ರಾಷ್ಟ್ರಗಳೆಲ್ಲವೂ ಈಗ ಚಂದ್ರನ ಅನ್ವೇಷಣೆಗೆ ತೊಡಿಗಿವೆ. ಭಾರತ ಇಸ್ರೋ ತನ್ನ ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದರೆ, ರಷ್ಯಾದ ಲೂನಾ-25 ಲೂನಾರ್ ಮಿಷನ್ ಫೇಲ್ ಆಗಿತ್ತು. ಅಮೆರಿಕ ಕೂಡ ಮತ್ತೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಲು ಸಜ್ಜಾಗುತ್ತಿದೆ. ಈ ಮಧ್ಯೆ, ಜಪಾನ್ ಕೂಡ ಚಂದ್ರನ ದಕ್ಷಿಣ ಧ್ರುವಕ್ಕೆ ತನ್ನ ಗಗನನೌಕೆಯನ್ನು ಕಳುಹಿಸಲು ಮುಂದಾಗಿತ್ತು.

ಜಪಾನ್ ಲೂನಾರ್ ಮಿಷನ್ ರದ್ದಾಗಲು ಕಾರಣವೇನು?

ಜಪಾನ್‌ನ ಏರೋಸ್ಪೇಸ್ ಎಕ್ಸ್‌ಪ್ರೋರೇಷನ್ ಏಜೆನ್ಸಿಯ ಅಂತ್ಯತ ವಿಶ್ವಾಸಾರ್ಹ ಹೆವಿ ಪೇಲೋಡ್ ರಾಕೆಟ್ ಎಚ್2- ಎ ವಾಸ್ತವದಲ್ಲಿ ಶನಿವಾರ ಸುಧಾರಿತ ಇಮೇಜಿಂಗ್ ಉಪಗ್ರಹವನ್ನು ಹೊತ್ತೊಯ್ಯಬೇಕಾಗಿತ್ತು. ಈ ಉಪಗ್ರಹವನ್ನು ಜನವರಿಯಲ್ಲಿ ಚಂದ್ರನ ಕಕ್ಷೆ ಸೇರಿಸಲು ನಿಗದಿಯಾಗಿತ್ತು. ಆದರೆ, ಭಾನುವಾರಕ್ಕೆ ಲಾಂಚಿಂಗ್ ಮುಂದೂಡಲಾಯಿತು. ಕೆಟ್ಟ ಹವಾಮಾನ ವರದಿಯ ಕಾರಣ ಮತ್ತೆ ಸೋಮವಾರಕ್ಕೆ ಉಡ್ಡಯವನ್ನು ನಿಗದಿ ಮಾಡಲಾಗಿತ್ತು. ಈಗ ಅದೂ ಕೂಡ ರದ್ದಾಗಿದೆ. ಉಡ್ಡಯನದ ಜವಾಬ್ದಾರಿಯನ್ನು ಹೊತ್ತಿರುವ ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಲಿಮಿಟೆಡ್ ಮುಂದಿನ ಯೋಜಿತ ಉಡಾವಣಾ ದಿನಾಂಕವನ್ನು ತಕ್ಷಣವೇ ಬಿಡುಗಡೆ ಮಾಡಿಲ್ಲ.

ಈ ಸುದ್ದಿಯನ್ನೂ ಓದಿ: Chandrayaan 3: ದೇಗುಲ ಭೇಟಿ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್‌ ಮೊದಲ ಪ್ರತಿಕ್ರಿಯೆ; ಕುಹಕಿಗಳಿಗೆ ಕುಟುಕಿದ್ದು ಹೀಗೆ…

ಒಂದು ವೇಳೆ ಜಪಾನ್ ಲೂನಾರ್ ಮಿಷನ್ ಉಡಾವಣೆ ಯಶಸ್ವಿಯಾದರೆ, ಕಳೆದ ವಾರ ರಷ್ಯಾದ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ನಂತರ ಮತ್ತು ಭಾರತದ ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದ ನಂತರ ಚಂದ್ರನನ್ನು ಗುರಿಯಾಗಿಸುವ ಇತ್ತೀಚಿನ ರಾಷ್ಟ್ರವಾಗಿ ಜಪಾನ್ ಹೊರ ಹೊಮ್ಮಲಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version