ನವದೆಹಲಿ: ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ರಾಕೆಟ್ ಮೂಲಕ ಜಪಾನ್ ಕೋಟ್ಯಧೀಶ ಯುಸಾಕು ಮೋಜಾವಾ (Yusaku maezawa) ಅವರು ಮುಂದಿನ ವರ್ಷ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ವಿಶೇಷ ಏನೆಂದರೆ, ತನ್ನೊಂದಿಗೆ ಹೋಗುವ 8 ಸಿಬ್ಬಂದಿ ಹೆಸರನ್ನು ಮೋಜಾವಾ ಅವರು ಪ್ರಕಟಿಸಿದ್ದು, ಭಾರತದ ನಟ ದೇವ್ ಜೋಶಿ ಕೂಡ ಈ ತಂಡದಲ್ಲಿದ್ದಾರೆ(SpaceX Moon Trip).
ಡಿಜೆ ಮತ್ತು ಅಮೆರಿಕದ ಸಿನಿಮಾ ನಿರ್ಮಾಪಕ ಸ್ಟೀವ್ ಆಕಿ, ಯುಟ್ಯೂಬರ್ ಟಿಮ್ ಡಾಡ್, ಜೆಕ್ ಕಲಾವಿದ ಯೆಮಿ ಎಡಿ, ಐರಿಶ್ ಫೋಟೋಗ್ರಾಫರ್ ರೈನಾನ್ ಆಡಮ್, ಬ್ರಿಟಿಷ್ ಫೋಟೋಗ್ರಾಫರ್ ಕರಿಮ್ ಇಲಿಯಾ, ಅಮೆರಿಕನ್ ಫಿಲ್ಮ್ ಮೇಕರ್ ಬ್ರೆಂಡಾನ್ ಹಾಲ್ ಕೂಡ ಯುಸುಕಾ ಮೋಜಾವಾ ಜತೆ ತೆರಳಲಿದ್ದಾರೆ. ಈ ಮಾಹಿತಿಯನ್ನು ಟ್ವಿಟರ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪಯಣವು, ಲಾಂಚ್ ಆದಾಗಿನಿಂದ ಹಿಡಿದು ಭೂಮಿಗೆ ಮರಳಲು ಎಂಟು ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಮೂರು ದಿನಗಳನ್ನು ಚಂದ್ರನನ್ನು ಸುತ್ತಲು ಬಳಸಿಕೊಳ್ಳಲಾಗುತ್ತದೆ. ಚಂದ್ರನ ಮೇಲ್ಮೈಯಿಂದ 200 ಕಿಲೋಮೀಟರ್‌ಗಳ ಒಳಗೆ ಬರುತ್ತವೆ. ಈ ಪ್ರಾಜೆಕ್ಟ್ ಮುಂದಿನ ವರ್ಷ ನಡೆಯಲು ನಿಗದಿಯಾಗಿದೆ. ಆದರೂ ಬಾಹ್ಯಾಕಾಶ ನೌಕೆ ಮತ್ತು ರಾಕೆಟ್‌ಗಳ ಪರೀಕ್ಷೆಯ ಕಾರಣಕ್ಕಾಗಿ ವಿಳಂಬವಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ | BTS 2022 | ಬಾಹ್ಯಾಕಾಶ, ರಾಕೆಟ್ ಸೈನ್ಸ್‌ನಲ್ಲಿ ತೊಡಗಿಸಿಕೊಂಡ 100 ನವೋದ್ಯಮಗಳಿಗೆ ಇಸ್ರೊ ನೆರವು