Site icon Vistara News

NASA mission: ʼಬೆನ್ನುʼ ಮುಟ್ಟಿ ಬಂದ ಓಸಿರಿಸ್‌ ರೆಕ್ಸ್‌, ಭೂಮಿಗಿಳಿದ ಕ್ಷುದ್ರಗ್ರಹ ಮಾದರಿ ಈಗ ನಾಸಾ ವಿಜ್ಞಾನಿಗಳ ಕೈಯಲ್ಲಿ

bennu sample

ನ್ಯೂಯಾರ್ಕ್‌: ಏಳು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (NASA mission) ಸಂಗ್ರಹಿಸಿದ ʼಬೆನ್ನುʼ ಕ್ಷುದ್ರಗ್ರಹದ (asteroid Bennu) ಮೊದಲ ಮಾದರಿಯನ್ನು (bennu sample) ಹೊತ್ತ ಕ್ಯಾಪ್ಸೂಲ್‌ ಅನ್ನು ವಿಜ್ಞಾನಿಗಳು ತೆರೆದಿದ್ದಾರೆ.

ಬುಧವಾರ ನಾಸಾ ವಿಜ್ಞಾನಿಗಳು (NASA scientists) ಭೂಮಿಗೆ ಮರಳಿ ಬಂದಿರುವ ಅತಿದೊಡ್ಡ ಕ್ಷುದ್ರಗ್ರಹ ಮಾದರಿಗಳನ್ನು ಹೊತ್ತ ಬಾಹ್ಯಾಕಾಶ ಸಾಧನವನ್ನು ತೆರೆದಿದ್ದು, ಕಪ್ಪು ಶಿಲಾಖಂಡರಾಶಿಗಳನ್ನು ಸಂಗ್ರಹಿಸಿದ್ದಾರೆ. ಸಂಶೋಧಕರು ಅಂತರಿಕ್ಷ ಸಾಧನ ʼಒಸಿರಿಸ್-ರೆಕ್ಸ್ʼ (Osiris-Rex) ಸೈನ್ಸ್ ಬಾಕ್ಸ್‌ನ ಮುಚ್ಚಳವನ್ನು ತೆರೆದರು. ಕಪ್ಪು ಧೂಳು ಮತ್ತು ಶಿಲಾಖಂಡರಾಶಿಗಳು ಅವರಿಗೆ ದೊರೆತವು ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಒಸಿರಿಸ್-ರೆಕ್ಸ್ 2016ರಲ್ಲಿ ಉಡಾವಣೆಯಾಯಿತು. ಮೂರುವರೆ ವರ್ಷದ ಪ್ರಯಾಣದ ಬಳಿಕ ʼಬೆನ್ನುʼ ಕ್ಷುದ್ರಗ್ರಹದ ಮೇಲೆ ಇಳಿಯಿತು. ಅದರ ಶಿಲಾ ಮೇಲ್ಮೈಯಿಂದ ಸರಿಸುಮಾರು ಒಂಬತ್ತು ಔನ್ಸ್ (250 ಗ್ರಾಂ) ಧೂಳನ್ನು ಸಂಗ್ರಹಿಸಿತು. ಬಳಿಕ ಅಲ್ಲಿಂದ ಹೊರಟು ಮೂರುವರೆ ವರ್ಷಗಳ ಕಾಲ ಪ್ರಯಾಣಿಸಿ ಇತ್ತೀಚೆಗೆ ಯುಎಸ್‌ಎಯ ಪಶ್ಚಿಮ ರಾಜ್ಯವಾದ ಉತಾಹ್‌ನ ಮರುಭೂಮಿಯಲ್ಲಿ ಭೂಮಿಗಿಳಿಯಿತು. ಇದರೊಂದಿಗೆ ಅದು 386 ಕೋಟಿ ಮೈಲಿ (621 ಕೋಟಿ ಕಿಮೀ) ಪ್ರಯಾಣವನ್ನು ಕೊನೆಗೊಳಿಸಿತು.

NASA ಪ್ರಕಾರ, ಕ್ಷುದ್ರಗ್ರಹದ ಅವಶೇಷಗಳ ಅಧ್ಯಯನದ ಮೂಲಕ, ಅವುಗಳಿಂದ ಭೂಮಿಗೆ ಬೆದರಿಕೆಯಾಗಿರಬಹುದಾದ ಕ್ಷುದ್ರಗ್ರಹಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗಲಿದೆ. ಸೌರವ್ಯೂಹದ (Solar system) ರಚನೆ ಮತ್ತು ಭೂಮಿಯು ಹೇಗೆ ವಾಸಯೋಗ್ಯವಾಯಿತು ಎಂಬುದನ್ನು ಸಂಶೋಧಕರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕೂಡ ಇದು ಸಹಾಯ ಮಾಡಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಹೆಚ್ಚಿನ ಮಾದರಿಯನ್ನು ಭವಿಷ್ಯದ ಪೀಳಿಗೆಯ ಅಧ್ಯಯನಕ್ಕಾಗಿ ಸಂರಕ್ಷಿಸಲಾಗುತ್ತದೆ. ಸರಿಸುಮಾರು ನಾಲ್ಕನೇ ಒಂದು ಭಾಗವನ್ನು ತಕ್ಷಣವೇ ಪ್ರಯೋಗಗಳಲ್ಲಿ ಬಳಸಲಾಗುವುದು. ಮಾದರಿಗಳ ಸ್ವಲ್ಪ ಭಾಗವನ್ನು ಕಾರ್ಯಾಚರಣೆಯ ಪಾಲುದಾರರಾದ ಜಪಾನ್ ಮತ್ತು ಕೆನಡಾಕ್ಕೂ ಕಳುಹಿಸಲಾಗುತ್ತದೆ.

ಇದನ್ನೂ ಓದಿ: NASA : ಕ್ಷುದ್ರಗ್ರಹದ ಸ್ಯಾಂಪಲ್​ ಹೊತ್ತು ತಂದಿದೆ ನಾಸಾದ ಕ್ಯಾಪ್ಸೂಲ್​, ಬಹಿರಂಗವಾಗಲಿದೆ ಸೌರವ್ಯೂಹದ ರಹಸ್ಯ

Exit mobile version