Site icon Vistara News

NASA Satellite | ನಾಳೆ ಭೂಮಿಗೆ ಅಪ್ಪಳಿಸಲಿದೆ 38 ವರ್ಷಗಳ ಹಳೆಯ ಉಪಗ್ರಹ; ಮನುಷ್ಯರ ಮೇಲೆ ಬೀಳುತ್ತಾ?

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ನಾಸಾ (NASA) 38 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಉಪಗ್ರಹ (NASA satellite) ಇದೀಗ ಭೂಮಿಗೆ ಬೀಳುವುದಕ್ಕೆ ಸಿದ್ಧವಾಗಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಉಪಗ್ರಹವು ಭೂಮಿಗೆ ಅಪ್ಪಳಿಸಲಿದೆ ಎಂದಿದ್ದಾರೆ ಸಂಶೋಧಕರು. ಭೂಮಿಗೆ ಅಪ್ಪಳಿಸಲಿರುವ ಇಆರ್‌ಬಿಎಸ್‌ (Earth Radiation Budget Satellite-ERBS) ಎಂಬ ಉಪಗ್ರಹವನ್ನು ನಾಸಾ 1984ರಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಇದನ್ನೂ ಓದಿ: NASA | ಚಂದ್ರನ ಮೇಲೂ ಹಕ್ಕು ಸಾಧಿಸಲು ಹವಣಿಸುತ್ತಿದೆ ಚೀನಾ: ನಾಸಾ ಮುಖ್ಯಸ್ಥ ಆರೋಪ

2450 ಕೆ.ಜಿ. ತೂಕವಿರುವ ಉಪಗ್ರಹದ ಬಹುತೇಕ ಭಾಗ ಭೂಮಿಗೆ ಬರುವುದರೊಳಗೆ ಸುಟ್ಟು ಭಸ್ಮವಾಗಲಿದೆ. ಹಾಗಿದ್ದರೂ ಕೆಲವು ಭಾಗಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದರಿಂದ ಮನುಷ್ಯರಿಗೆ ಹಾನಿಯಾಗುವ ಸಾಧ್ಯತೆ 9,400ರಲ್ಲಿ 1ರಷ್ಟಿದೆ ಎಂದು ವಿಜ್ಞಾನಿಗಳು ಮಾಹಿತಿ ಕೊಟ್ಟಿದ್ದಾರೆ. ಸರಳವಾಗಿ ಹೇಳಬೇಕೆಂದರೆ, ಮನುಷ್ಯರಿಗೆ ಅಂಥ ಯಾವುದೇ ತೊಂದರೆಯಾಗುವುದಿಲ್ಲ. ಈ ಉಪಗ್ರಹವು ಆಫ್ರಿಕಾ, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ಭಾಗಗಳಲ್ಲಿ ಈ ಉಪಗ್ರಹ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: NASA Launches SWOT | ಭೂಮಿಯ ಜಲಮೂಲಗಳ ಸಮೀಕ್ಷೆಗೆ ನಾಸಾದಿಂದ ಉಪಗ್ರಹ ಲಾಂಚ್, ಏನೆಲ್ಲ ಮಾಹಿತಿ ಸಿಗಲಿದೆ?

ಇಆರ್‌ಬಿಎಸ್‌ (Earth Radiation Budget Satellite-ERBS) ಹೆಸರಿನ ಈ ಉಪಗ್ರಹವನ್ನು 1984ರಲ್ಲಿ ಉಡಾವಣೆ ಮಾಡಲಾಗಿತ್ತು. ಎರಡು ವರ್ಷಗಳ ಕಾಲಾವಧಿಗೆಂದು ಉಡಾವಣೆ ಮಾಡಲಾಗಿದ್ದ ಈ ಉಪಗ್ರಹ 2005ರವರೆಗೂ ಕಾರ್ಯನಿರ್ವಹಿಸಿತ್ತು. ಭೂಮಿಯ ವಿಕಿರಣ, ಓಜೋನ್‌ ಪದರದ ಕುರಿತಾಗಿ ಅಧ್ಯಯನಕ್ಕೆ ಈ ಉಪಗ್ರಹ ಉಪಯುಕ್ತವಾಗಿತ್ತು.

Exit mobile version