Site icon Vistara News

New Cockroach Species : ಸಿಂಗಾಪುರದಲ್ಲಿ ಪತ್ತೆಯಾಯ್ತು ಜಿರಳೆಯ ಹೊಸ ಪ್ರಭೇದ

#image_title

ಸಿಂಗಾಪುರ: ಜಿರಳೆಯಂದ ತಕ್ಷಣ ನಮಗೆ ನೆನಪಾಗುವುದು ಒಂದೇ ರೀತಿ. ಆದರೆ ಅದೇ ಜಿರಳೆಯಲ್ಲೂ ಹಲವಾರು ಜಾತಿ, ಪ್ರಬೇಧಗಳಿವೆ. ಇದೀಗ ಹೊಸ ಪ್ರಭೇದ ಜಿರಳೆಯೊಂದು ಸಿಂಗಾಪುರದಲ್ಲಿ (New Cockroach Species) ಪತ್ತೆಯಾಗಿದೆ. ಪತ್ತೆಯಾಗಿರುವ ಹೊಸ ಜಿರಳೆಗೆ ವಿಡಿಯೊ ಗೇಮ್‌ಗಳಲ್ಲಿ ಕಾಣಿಸಿಕೊಳ್ಳುವ ಪೋಕ್ಮಾನ್‌ನ ಹೆಸರಾದ ಫೆರೋಮೋಸಾ ಹೆಸರನ್ನು ಇಡಲಾಗಿದೆ.

ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ

ಸಿಂಗಾಪುರದ ಲೀ ಕಾಂಗ್‌ ಚಿಯಾನ್‌ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಪ್ರಕಾರ ಜಿರಳೆಯಲ್ಲಿ ಈಗಾಗಲೇ ಒಟ್ಟು 32 ಪ್ರಭೇದಗಳಿವೆ. ಅದಲ್ಲದೆ ಇದೀಗ ಈ ಹೊಸ ಜಾತಿಯು ಸೇರಿಕೊಂಡಿದೆ. 20116ರಲ್ಲಿ ನೈಸರ್ಗಿಕ ಮೀಸಲು ಪ್ರದೇಶದಲ್ಲಿ ಕೀಟಗಳ ಸಮೀಕ್ಷೆ ನಡೆಸುವಾಗ ಈ ಜಿರಳೆ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಈಗಾಗಲೇ ಮಾನ್ಯತೆ ಪಡೆದಿರುವ ಜಿರಳೆಯ ಜಾತಿಯಂತೆಯೇ ಕಾಣಿಸಿಕೊಂಡಿತ್ತು. ಆದರೆ ಸೂಕ್ಷ್ಮವಾಗಿ ಪರೀಕ್ಷೆಗೆ ಒಳಪಡಿಸಿದಾಗ ಅದು ಹೊಸ ಪ್ರಭೇದ ಜಿರಳೆ ಎನ್ನುವುದು ತಿಳಿದುಬಂದಿತ್ತು.


ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಅಧಿಕಾರಿಯಾಗಿರುವ ಫೂ ಮಾಶೆಂಗ್ ಮತ್ತು ಯುಪಿಎಲ್‌ಬಿ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಅಧಿಕಾರಿಯಾಗಿರುವ ಕ್ರಿಸ್ಟಿಯನ್ ಲುಕಾನಾಸ್ ಈ ಜಿರಳೆ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಹಾಗೆಯೇ ಅದರ ಬಗ್ಗೆ ಅಧ್ಯಯನ ವರದಿ ಮಂಡಿಸಿದ್ದಾರೆ. ಆ ಬಗ್ಗೆ ಟ್ವಿಟರ್‌ನಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಟ್ವೀಟ್‌ ಎಲ್ಲೆಡೆ ಹರಿದಾಡಿದ್ದು, ಭಾರೀ ಸುದ್ದಿಯಾಗಿದೆ.

Exit mobile version