Site icon Vistara News

ಗಂಡು-ಹೆಣ್ಣು ಕೂಡದೇ ಮಗು ಹುಟ್ಟುತ್ತೆ! ವೀರ್ಯ, ಅಂಡಾಣು ಇಲ್ಲದೇ ಸಿಂಥೆಟೆಕ್ ಸೆಲ್‌ನಿಂದ ಮಾನವ ಪಿಂಡ ಸೃಷ್ಟಿ

Synthetic Embryo

ನವದೆಹಲಿ: ನೈಸರ್ಗಿಕ ನಿಯಮ ಪ್ರಕಾರ, ಯಾವುದೇ ಒಂದು ಜೀವಿ ಜನಿಸಲು ಗಂಡು ಮತ್ತು ಹೆಣ್ಣು ಜೀವಿ ಕೂಡಲೇಬೇಕು. ಆಗಲೇ ಜೀವಿ ಸೃಷ್ಟಿಯಾಗಲು ಸಾಧ್ಯ. ಇದಕ್ಕೆ ಮಾನವರು ಹೊರತಲ್ಲ. ಗಂಡು ಮತ್ತು ಹೆಣ್ಣು ಕೂಡಿದಾಗಲೇ ಮಗು ಹುಟ್ಟಲು ಸಾಧ್ಯ. ಆದರೆ, ವಿಜ್ಞಾನವು ಈ ನಿಯಮವನ್ನು ಬುಡಮೇಲು ಹೊರಟಿದೆ. ಅಂದರೆ, ವೀರ್ಯ (sperm) ಮತ್ತು ಅಂಡಾಣಗಳು (egg) ಇಲ್ಲದೇ ಈಗ ಮಗು ಜನಿಸಬಹುದು. ಹೌದು, ಇದು ಆಶ್ಚರ್ಯವಾಗಬಹುದು. ಅದ್ಭುತ ಬೆಳವಣಿಗೆಯೊಂದರಲ್ಲಿ ವಿಜ್ಞಾನಿಗಳು (Scientists) ವೀರ್ಯ ಅಥವಾ ಮೊಟ್ಟೆಗಳನ್ನು ಬಳಸದೆಯೇ ಸಿಂಥೆಟಿಕ್ ಕಾಂಡಕೋಶಗಳಿಂದ (stem cells) ಕೃತಕ ಮಾನವ ಪಿಂಡ (embryo) ಸೃಷ್ಟಿಸಿದ್ದಾರೆ.

ಬೋಸ್ಟನ್‌ನಲ್ಲಿ ನಡೆದ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಸ್ಟೆಮ್ ಸೆಲ್ ರಿಸರ್ಚ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಮ್ಯಾಗ್ಡಲೇನಾ ಝೆರ್ನಿಕಾ-ಗೋಟ್ಜ್ ಅವರು ಈ ಸಂಶೋಧನೆಯ ವಿವರಿಸಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಕೋಶಗಳ ಪುನರುತ್ಪಾದನೆಯ ಮೂಲಕ ನಾವು ಮಾನವ ಭ್ರೂಣದಂತಹ ಮಾದರಿಗಳನ್ನು ರಚಿಸಬಹುದು ಎಂದು ಝೆರ್ನಿಕಾ ಗೋಟ್ಜ್ ಅವರು ಹೇಳಿದ್ದಾರೆ. ಆದರೆ, ಸಂಶೋಧನೆಗೆ ಸಂಬಂಧಿಸಿದಂತೆ ಪೇಪರ್ ಯಾವುದೇ ಪತ್ರಿಕೆಯಲ್ಲಿ ಇನ್ನೂ ಪ್ರಕಟಗೊಂಡಿಲ್ಲ.

ಈ ಹಿಂದೆ, ಇಸ್ರೇಲ್‌ನ ವೈಜ್ಮನ್ ಇನ್ಸ್‌ಟಿಟ್ಯೂಟ್ ಹಾಗೂ ಝರ್ನಿಕಾ ಗೋಟ್ಜ್ ತಂಡವು ಇಲಿಗಳಿಂದ ಕಾಂಡಕೋಶಗಳನ್ನು ಭ್ರೂಣದಂತಹ ರಚನೆಗಳಾಗಿ ಬಡಿಯುವ ಹೃದಯ, ಮಿದುಳಿನ ಮತ್ತು ಕರುಳುವಾಳವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಹಾಗಾಗಿ, ಅಂದಿನಿಂದಲೂ ಈ ಸಂಶೋಧನಾ ತಂಡಗಳು ಮಾನವ ಜೀವಕೋಶಗಳೊಂದಿಗೆ ಅದೇ ರೀತಿಯ ರಿಸಲ್ಟ್ ಪಡೆಯಲು ಮುಂದಾಗಿದ್ದವು ಮತ್ತು ಈಗ ಯಶಸ್ವಿಯಾಗಿವೆ.

ಅಂತಹ ಭ್ರೂಣಗಳು ಮೌಲ್ಯವನ್ನು ಹೊಂದಿವೆ. ಏಕೆಂದರೆ ಅವು ವಿಜ್ಞಾನಿಗಳಿಗೆ ಅಭಿವೃದ್ಧಿಯ ಆರಂಭಿಕ ಅವಧಿಯನ್ನು ವೀಕ್ಷಿಸುವ ವಿಧಾನವನ್ನು ಒದಗಿಸುತ್ತವೆ. ಪ್ರಸ್ತುತ ನೈಸರ್ಗಿಕ ಭ್ರೂಣಗಳನ್ನು ಬಳಸುವುದರ ಮೇಲಿನ ನಿರ್ಬಂಧಗಳಿಂದಾಗಿ ವೀಕ್ಷಣೆಗೆ ಅವಕಾಶವಿದೆ. ಅಂತಾರಾಷ್ಟ್ರೀಯ ನಿಯಮಗಳ ಅಡಿಯಲ್ಲಿ, ವಿಜ್ಞಾನಿಗಳು 14 ದಿನಗಳವರೆಗೆ ಪ್ರಯೋಗಾಲಯದಲ್ಲಿ ನೈಸರ್ಗಿಕ ಭ್ರೂಣಗಳನ್ನು ಬೆಳೆಸಲು ಮಾತ್ರ ಅನುಮತಿ ನೀಡಲಾಗುತ್ತದೆ. ಅದರ ನಂತರ ಅವರು ನಂತರದ ಗರ್ಭಧಾರಣೆಯ ಸ್ಕ್ಯಾನ್‌ಗಳಿಂದ ಮಾತ್ರ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: ISRO Recruitment 2023 : ಇಸ್ರೊದಲ್ಲಿ ವಿಜ್ಞಾನಿಯಾಗಬೇಕೇ? ಈಗ ಒದಗಿ ಬಂದಿದೆ ಅವಕಾಶ!

ಅಂಡಾಣು ಮತ್ತು ವೀರ್ಯ ಇಲ್ಲದೇ ಸಿಂಥೇಟಿಕ್ ಸೆಲ್‌ನಿಂದ ನಿರ್ಮಾಣವಾದ ಪಿಂಡವನ್ನು, ಮಾನವ ಗರ್ಭದೊಳಗೆ ಸೇರಿಸಿ ಭ್ರೂಣವಾಗಿ ಬೆಳೆಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಪ್ರಾಣಿಗಳ ಒಂದೇ ರೀತಿಯ ಸಂಶ್ಲೇಷಿತ ಭ್ರೂಣಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತದ ವಿವಿಧ ಪ್ರಯೋಗಾಲಯಗಳಲ್ಲಿನ ಇತರ ಪ್ರಯೋಗಗಳು ಹಿಂದಿನ ಹಂತವನ್ನು ಮೀರಿ ಮುನ್ನಡೆಯಲಿಲ್ಲ. ಹಾಗಾಗಿ, ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಈ ನಿಟ್ಟಿನಲ್ಲಿ ಇನ್ನೂ ಹಲವು ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version