Site icon Vistara News

SpaceX Launch | ಚಂದ್ರನತ್ತ ಯುಎಇ ರೋವರ್ ಹೊತ್ತ ಜಪಾನ್‌ನ ಖಾಸಗಿ ಸ್ಪೇಸ್‌ಕ್ರಾಫ್ಟ್ ಉಡಾವಣೆ

SpaceX launch ispace Sapcecraft

ವಾಷಿಂಗ್ಟನ್: ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ (SpaceX Launch) ಮೂಲಕ ಜಪಾನ್‌ನ ನವೋದ್ಯೋಮವೊಂದರ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಉಡಾವಣೆ ಮಾಡಲಾಯಿತು. ಅಮೆರಿಕದಲ್ಲಿ ಖಾಸಗಿ ಕಂಪನಿಯೊಂದು ಇಂಥ ಪ್ರಾಜೆಕ್ಟ್ ಮಾಡಿದ್ದು ಇದೇ ಮೊದಲು ಎಂಬ ಕೀರ್ತಿಗೆ ಪಾತ್ರವಾಯಿತು. ಟೋಕಿಯೋ ಮೊಲದ ಸ್ಟಾರ್ಟ್‌ಅಪ್ ಐಸ್ಪೇಸ್ (iSpace) ತಯಾರಿಸಿದ ಸ್ಪೇಸ್‌ಕ್ರಾಫ್ಟ್ ಅನ್ನು ಸ್ಪೇಸ್‌ಎಕ್ಸ್ ಕಂಪನಿ ಫಾಲ್ಕಾನ್ 9 ರಾಕೆಟ್ ಮೂಲಕ ಭಾನುವಾರ ಉಡಾವಣೆ ಮಾಡಲಾಯಿತು.

ನಮ್ಮ ಮೊದಲ ಮಿಷನ್ ಚಂದ್ರನ ಸಾಮರ್ಥ್ಯವನ್ನು ಅನಾವರಣಗೊಳಿಸಲು ಮತ್ತು ಅದನ್ನು ದೃಢವಾದ ಮತ್ತು ರೋಮಾಂಚಕ ಆರ್ಥಿಕ ವ್ಯವಸ್ಥೆಯಾಗಿ ಪರಿವರ್ತಿಸಲು ಅಡಿಪಾಯವನ್ನು ಹಾಕುತ್ತದೆ ಎಂದು ಸ್ಟಾರ್ಟ್ಅಪ್‌ನ ಸಿಇಒ ಆಗಿರುವ ತಕೇಶಿ ಹಕಮಡಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾಗಳು ಮಾತ್ರ ಚಂದ್ರನಲ್ಲಿ ರೋಬೊಟ್ ಇಳಿಸಲು ಮಾತ್ರ ಯಶಸ್ವಿಯಾಗಿವೆ.

ಇದು ಐಸ್ಪೇಸ್‌ನ ಮೊದಲ ಮಿಷನ್ ಆಗಿದ್ದು, ಹಕುಟೊ-ಆರ್ ಎಂದು ಕರೆಯಲಾಗುತ್ತಿದೆ. ಜಪಾನ್ ‌ಭಾಷೆಯಲ್ಲಿ ಹುಕುಟೊ ಅಂದರೆ ಬಿಳಿ ಮೊಲ ಎಂದರ್ಥ . ಜಪಾನ್‌ನಲ್ಲಿ ಮೊಲದ ವರ್ಷವಾದ 2023ರ ಏಪ್ರಿಲ್‌ನಲ್ಲಿ ಚಂದ್ರನ ಗೋಚರ ಭಾಗದಲ್ಲಿ ತಾವು ಕಳುಹಿಸಿರುವ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.

2 ರಿಂದ 2.5 ಮೀಟರ್‌ಗಳಷ್ಟು ಅಳತೆಯನ್ನು ಹೊಂದಿರುವ ಬಾಹ್ಯಾಕಾಶ ನೌಕೆಯು ಯುನೈಟೆಡ್ ಅರಬ್ ಎಮಿರೇಟ್ಸ್(UAE) ನಿರ್ಮಿಸಿದ 10 ಕೆಜಿ ತೂಕದ ರೋವರ್ ಅನ್ನು ಒಳಗೊಂಡಿದೆ. ಬಾಹ್ಯಾಕಾಶ ವಿಷಯಕ್ಕೆ ಈ ಅರಬ್ ದೇಶವು ಹೊಸದು. ರಶೀದ್ ಎಂಬ ಹೆಸರಿನ ರೋವರ್ ಯಶಸ್ವಿಯಾಗಿ ಇಳಿದರೆ ಇದು ಅರಬ್ ಪ್ರಪಂಚದ ಮೊದಲ ಚಂದ್ರನ ಮಿಷನ್ ಆಗಲಿದೆ.

ಇದನ್ನೂ ಓದಿ | SpaceX Moon Trip | ಭಾರತೀಯ ನಟನೊಂದಿಗೆ ಮೂನ್ ಟ್ರಿಪ್ ಮಾಡಲಿದ್ದಾರೆ ಜಪಾನ್ ಉದ್ಯಮಿ!

Exit mobile version