Site icon Vistara News

Super Blue Moon 2023: ‘ಸೂಪರ್ ಬ್ಲ್ಯೂ ಮೂನ್‌’ ಕಂಡು ಮೂಕವಿಸ್ಮಿತರಾದ ಜನ!

blue super moon

ನವದೆಹಲಿ: ಬುಧವಾರ ರಾತ್ರಿ 9.3ರಿಂದ ಆಕಾಶವು (Sky) ಚಂದ್ರನ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಭಾರತವು (India) ಸೇರಿದಂತೆ ವಿವಿಧ ದೇಶಗಳಲ್ಲಿ ಸೂಪರ್ ಬ್ಲ್ಯೂ ಮೂನ್ (Super Blue Moon 2023) ವಿದ್ಯಮಾನ ಘಟಿಸಿತು. ವಿಜ್ಞಾನಿಗಳ ಪ್ರಕಾರ, ಸೂಪರ್ ಬ್ಲ್ಯೂ ಮೂನ್ ವಿದ್ಯಮಾನ ಗುರುವಾರ ಬೆಳಗಿನ ಜಾವ 3.30ರವೆರಗೂ ಇರಲಿದೆ. ಭಾರತದ ವಿವಿಧ ರಾಜ್ಯಗಳಲ್ಲೂ (Many States) ಜನರು ಸೂಪರ್ ಬ್ಲ್ಯೂ ಮೂನ್ ವಿದ್ಯಮಾನವನ್ನು ಕಂಡು ಜನರು ಮೂಕವಿಸ್ಮಿತರಾದರು.

ದೇಶದ ವಿವಿಧ ನಗರಗಳಾದ ದಿಲ್ಲಿ, ಮುಂಬೈ, ಪಾಟ್ನಾ, ಕೋಲ್ಕೊತಾ, ಗುವಾಹಟಿ, ಘಾಜಿಯಾಬಾದ್, ಜೈಪುರ, ಶ್ರೀನಗರಗಳಲ್ಲಿ ಜನರು ಬ್ಲೂಮೂನ್ ವಿದ್ಯಮಾನವನ್ನು ಆನಂದಿಸಿದರು. ಹಲವುರ ಚಂದ್ರನ ಫೋಟೋ ಸೆರೆ ಹಿಡಿದು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಬ್ಲೂ ಮೂನ್‌ ಎಂದರೇನು?

‘ಬ್ಲೂ ಮೂನ್ʼ ಇದು ಒಂದೇ ತಿಂಗಳಲ್ಲಿ ಕಾಣಿಸಿಕೊಳ್ಳುವ ಎರಡನೇ ಹುಣ್ಣಿಮೆ. ಹುಣ್ಣಿಮೆಗಳು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಸಂಭವಿಸುತ್ತವೆ. ಆದರೆ ನೀಲಿ ಚಂದ್ರನಿದ್ದಾಗ ಅದು ಎರಡು ಬಾರಿ ಸಂಭವಿಸುತ್ತದೆ. ನೀಲಿ ಚಂದ್ರನಲ್ಲಿ ಎರಡು ವಿಧ. ನಾಸಾದ ಪ್ರಕಾರ, ನಾಲ್ಕು ಹುಣ್ಣಿಮೆಗಳನ್ನು ಹೊಂದಿರುವ ಒಂದು ಋತುವಿನಲ್ಲಿ ಮೂರನೇ ಹುಣ್ಣಿಮೆಯೇ ನೀಲಿ ಚಂದ್ರ. ಇದು ನೀಲಿ ಚಂದ್ರನ ಸಾಂಪ್ರದಾಯಿಕ ವ್ಯಾಖ್ಯಾನ. ಮಾಸಿಕ ಬ್ಲೂ ಮೂನ್‌ ಎಂದರೆ ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಸಂಭವಿಸುವ ಎರಡನೇ ಹುಣ್ಣಿಮೆ.

ಚಂದ್ರನ ಹುಣ್ಣಿಮೆ- ಅಮವಾಸ್ಯೆಯ ಹಂತಗಳು ಸರಾಸರಿ 29.5 ದಿನಗಳ ಅಂತರದಲ್ಲಿ ಇರುತ್ತವೆ. ಹೀಗಾಗಿ 12 ಚಂದ್ರನ ಚಕ್ರಗಳು ವರ್ಷದ 354 ದಿನಗಳಲ್ಲಿ ಪೂರ್ಣಗೊಳ್ಳುತ್ತವೆ. ಹೀಗಾಗಿ 13ನೇ ಹುಣ್ಣಿಮೆಯು ಪ್ರತಿ 2.5 ವರ್ಷಗಳಿಗೊಮ್ಮೆ ಗೋಚರಿಸುತ್ತದೆ. ಈ 13ನೇ ಹುಣ್ಣಿಮೆಯನ್ನೂ ಸಾಮಾನ್ಯವಾಗಿ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.

ಸೂಪರ್ ಬ್ಲೂ ಮೂನ್ ಎಂದೇಕೆ ಕರೆಯುತ್ತಾರೆ?

ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಮೂರನೇ ಮತ್ತು ಕೊನೆಯ ಹುಣ್ಣಿಮೆಯು “ಸೂಪರ್ ಬ್ಲೂ ಮೂನ್” ಆಗಿರುತ್ತದೆ. ಏಕೆಂದರೆ ಇದು ಒಂದು ಕ್ಯಾಲೆಂಡರ್ ತಿಂಗಳಿನಲ್ಲಿ ಎರಡನೇ ಹುಣ್ಣಿಮೆ. ಚಂದ್ರ ಭೂಮಿಯನ್ನು ಸುತ್ತುವ 29 ದಿನಗಳ ಕಕ್ಷೆಯ ಪ್ರಕಾರ ಇದು ಒಂದು ʼಸೂಪರ್‌ಮೂನ್’. ಸೂಪರ್‌ಮೂನ್‌ಗಳು ಸಾಮಾನ್ಯ ಚಂದ್ರನಿಗಿಂತ 16% ಹೆಚ್ಚು ಪ್ರಕಾಶಮಾನವಾಗಿರುತ್ತವೆ. ಸಾಮಾನ್ಯ ಹುಣ್ಣಿಮೆಗಿಂತ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತದೆ. ಚಂದ್ರನು ಪೂರ್ಣವಾಗಿದ್ದಾಗ ಮತ್ತು ಅದರ ಕಕ್ಷೆಯು ಭೂಮಿಗೆ ಹತ್ತಿರದಲ್ಲಿದ್ದಾಗ ಈ ವಿದ್ಯಮಾನ ಕಾಣಿಸುತ್ತದೆ.

ಈ ಸುದ್ದಿಯನ್ನೂ ಓದಿ: Chandrayaan 3: ಸ್ಮೈಲ್‌ ಪ್ಲೀಸ್;‌ ಚಂದ್ರನೂರಿನಿಂದ ವಿಕ್ರಮ್‌ ಲ್ಯಾಂಡರ್‌ ಫೋಟೊ ಕಳುಹಿಸಿದ ಪ್ರಜ್ಞಾನ್‌

ನೀಲಿ ಸೂಪರ್‌ಮೂನ್ ಎಷ್ಟು ಅಪರೂಪ?

ನಾಸಾ ಪ್ರಕಾರ, ನೀಲಿ ಸೂಪರ್‌ಮೂನ್‌ಗಳು ಬಹಳ ಅಪರೂಪದ ವಿದ್ಯಮಾನ. ಖಗೋಳ ಪರಿಸ್ಥಿತಿಗಳಿಂದಾಗಿ ಈ ಚಂದ್ರಗಳು ಪ್ರತಿ ಹತ್ತು ವರ್ಷಗಳಿಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ; ಕೆಲವೊಮ್ಮೆ, ನೀಲಿ ಸೂಪರ್‌ಮೂನ್‌ಗಳ ನಡುವಿನ ಮಧ್ಯಂತರ ಇಪ್ಪತ್ತು ವರ್ಷಗಳವರೆಗೆ ಇರಬಹುದು. ಬ್ಲೂ ಮೂನ್‌ಗಳು ಕೇವಲ 3% ಹುಣ್ಣಿಮೆಗಳಿಗೆ ಮಾತ್ರ ಕಾರಣವಾದರೆ, ಸೂಪರ್‌ಮೂನ್‌ಗಳು ಎಲ್ಲಾ ಹುಣ್ಣಿಮೆಗಳಲ್ಲಿ ಸುಮಾರು 25%ರಷ್ಟಿದೆ. ಸೂಪರ್ ಬ್ಲೂ ಮೂನ್‌ಗಳ ನಡುವಿನ ಮಧ್ಯಂತರವು ಹೆಚ್ಚು ಅನಿಯಮಿತವಾಗಿದೆ. ಮುಂದಿನ ಸೂಪರ್ ಬ್ಲೂ ಮೂನ್‌ಗಳು 2037ರ ಜನವರಿ ಮತ್ತು ಮಾರ್ಚ್‌ನಲ್ಲಿ ಜೋಡಿಯಾಗಿ ನಡೆಯಲಿವೆ.

Exit mobile version