Site icon Vistara News

2003ರ ವಿಶ್ವಕಪ್​ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್​ ಗೆಲ್ಲುವುದು ನಿಶ್ಚಿತ!

2003 vs 2023 world cup

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ(India vs Australia Final) ತಂಡಗಳು ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿದೆ. ಇತ್ತಂಡಗಳ ಈ ಫೈನಲ್​ ಕಾದಾಟ ಭಾನುವಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಭಾರತ ತಂಡ 2003ರ ವಿಶ್ವಕಪ್‌ ಫೈನಲ್‌(India vs Australia Final 2003) ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಅಂದಿನ ಟೂರ್ನಿಗೂ ಈ ಬಾರಿಯ ಟೂರ್ನಿಯೂ ಕೆಲ ಸಾಮ್ಯತೆಗಳಿವೆ.

ಸತತ 10 ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ

2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿತ್ತು. ಭಾರತ ತಂಡ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೇರಿದೆ. ಆಸ್ಟ್ರೇಲಿಯಾ 8 ಜಯ ಸಾಧಿಸಿ ಫೈನಲ್​ ಪ್ರವೇಶಿಸಿದೆ. ಇನ್ನೊಂದು ಅಚ್ಚರಿ ಏನೆಂದರೆ 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್‌ ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿದೆ. ಹಿಂದಿನ ಸಾಮತ್ಯೆಯ ಭವಿಷ್ಯವನ್ನು ನೋಡುವಾಗ ಭಾರತವೇ ಚಾಂಪಿಯನ್​ ಆಗುವ ಎಲ್ಲ ಸಾಧ್ಯತೆ ಇದೆ.

ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

2 ಸೋಲಿಗೆ ಭಾರತ ಸೇಡು ತೀರಿಸಬೇಕಿದೆ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2 ಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕಿದೆ. ಒಂದು 2003ರ ಏಕದಿನ ವಿಶ್ವಕಪ್​ ಮತ್ತೊಂದು ಈ ವರ್ಷ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸೋಲು. ಎರಡನ್ನೂ ಸೇರಿಸಿ ಭಾರತ ಈ ಪಂದ್ಯದಲ್ಲಿ ಲೆಕ್ಕ ಚುಕ್ತ ಮಾಡಬಹುದು.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

2003ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಭಾರತದ ಬೌಲರ್‌ಗಳ ಮೇಲೆ ಘಾತಕವಾಗೆರಗಿ ಫೈನಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತು. ನಾಯಕ ಪಾಂಟಿಂಗ್‌ ಅಜೇಯ 140, ಮಾರ್ಟಿನ್‌ ಅಜೇಯ 88, ಗಿಲ್‌ಕ್ರಿಸ್ಟ್‌ 57 ರನ್‌ ಬಾರಿಸಿ ತಂಡದ ಮೊತ್ತವನ್ನು ಎರಡೇ ವಿಕೆಟಿಗೆ 359ಕ್ಕೆ ಏರಿಸಿದರು. ಚೇಸಿಂಗ್‌ ವೇಳೆ ಸಚಿನ್​ ತೆಂಡೂಲ್ಕರ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಹೋರಾಟ ಸಂಘಟಿಸಿದ್ದು ವೀರೇಂದ್ರ ಸೆಹವಾಗ್‌ ಮತ್ತು ಈಗಿನ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್‌ ಮಾತ್ರ. ಭಾರತ 39.2 ಓವರ್​ಗಳಲ್ಲಿ 234ಕ್ಕೆ ಆಲೌಟಾಗಿ 125 ರನ್ನುಗಳ ಸೋಲಿಗೆ ತುತ್ತಾಯಿತು. 

ನಂ.1 ಅದೃಷ್ಟ

ವಿಶ್ವಕಪ್​ ಟೂರ್ನಿಗೂ ಮುನ್ನ ನಂ.1 ಸ್ಥಾನ ಅಲಂಕರಿಸಿ ಪಂದ್ಯಾವಳಿಗೆ ಕಾಲಿಟ್ಟರೆ ಆ ತಂಡವೇ ಕಪ್​ ಗೆಲ್ಲಲಿದೆ ಎನ್ನುವುದು ಹಿಂದಿನಿಂದಲೂ ನಡೆದು ಬಂದ ಒಂದು ಕಾಕತಾಳಿಯ ಲೆಕ್ಕಾಚಾರವಿದೆ. ಈ ಬಾರಿ ಭಾರತ ತಂಡ ನಂ.1 ಸ್ಥಾನದೊಂದಿಗೆ ವಿಶ್ವಕಪ್​ ಆಡಲಿಳಿದು ಇದೀಗ ಫೈನಲ್​ ತನ ಬಂದು ನಿಂತಿದೆ. ಹಿಂದಿನ ಎಲ್ಲ ಲೆಕ್ಕಾಚಾರದ ಪ್ರಕಾರ ನಂ.1 ಸ್ಥಾನ ಪಡೆದ ತಂಡವೇ ಕಪ್​ ಗೆದ್ದು ಮರೆದಾಡಿತ್ತು. ಇದು ಭಾರತದ ವಿಚಾರದಲ್ಲಿಯೂ ಸುಳ್ಳಾಗದು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಅಚಲ ನಂಬಿಕೆಯಾಗಿದೆ.

2015ರ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ವಿಶ್ವಕಪ್​ಗೆ ಪ್ರವೇಶಿಸಿ, ಟ್ರೋಫಿಯನ್ನೂ ಗೆದ್ದುಕೊಂಡಿತ್ತು. ಹಾಗೆಯೇ 2019ರ ವಿಶ್ವಕಪ್​ನಲ್ಲಿ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ ಶ್ರೇಯಾಂಕದಲ್ಲಿ ನಂ 1 ಸ್ಥಾನವಾಗಿ ವಿಶ್ವಕಪ್​ಗೆ ಪ್ರವೇಶಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಈ ಸಂಖ್ಯಾ ಭವಿಷ್ಯದಲ್ಲಿ ಭಾರತವೇ ಚಾಂಪಿಯನ್​ ಆಗಬೇಕಿದೆ.

Exit mobile version