Site icon Vistara News

Asia Cup 2023: ಏಷ್ಯಾಕಪ್‌ ವೇಳಾಪಟ್ಟಿ ಫೈನಲ್; ಪಾಕ್‌ಗೆ ಹೋಗಲ್ಲ ಭಾರತ, ಬದ್ಧ ವೈರಿಗೆ ಮುಖಭಂಗ

Rohit Sharma And Babar Azam

India vs Pakistan ODI World Cup 2023 match rescheduled to October 14: Says A Report

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ, ಪಾಕಿಸ್ತಾನದ ತಗಾದೆಯಿಂದ ವಿಳಂಬವಾಗುತ್ತಿದ್ದ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ (Asia Cup 2023) ಕೊನೆಗೂ ಅಂತಿಮವಾಗಿದೆ. ಹಾಗೆಯೇ, ಭಾರತವು ಏಷ್ಯಾಕಪ್‌ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗಾಗಿ ಪಾಕಿಸ್ತಾನಕ್ಕೆ ತೆರಳದಿರಲು ತೀರ್ಮಾನಿಸಿದೆ. ಇದರಿಂದಾಗಿ ಹೇಗಾದರೂ ಮಾಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಬೇಕು ಎಂಬ ನೆರೆರಾಷ್ಟ್ರಕ್ಕೆ ಮುಖಭಂಗವಾದಂತಾಗಿದೆ.

ವೇಳಾಪಟ್ಟಿ ಫೈನಲ್‌ ಆಗಿರುವ ಕುರಿತು ಐಪಿಎಲ್‌ ಚೇರ್ಮನ್‌ ಅರುಣ್‌ ಧುಮಾಲ್‌ ಮಾಹಿತಿ ನೀಡಿದ್ದಾರೆ. “ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿಯು ಅಂತಿಮವಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹಾಗೂ ಪಿಸಿಬಿ ಮುಖ್ಯಸ್ಥ ಜಾಕಾ ಅಶ್ರಫ್‌ ಅವರು ಕಳೆದ ಗುರುವಾರ ನಡೆಸಿದ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ” ಎಂದು ಮಾಹಿತಿ ನೀಡಿದರು. ಶೀಘ್ರದಲ್ಲಿಯೇ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನಕ್ಕೆ ಹೋಗಲ್ಲ ಭಾರತ

ಪಾಕಿಸ್ತಾನಕ್ಕೆ ಹೋಗದಿರುವ ವಿಚಾರದಲ್ಲಿ ಕೊನೆಗೂ ಭಾರತಕ್ಕೇ ಮುನ್ನಡೆಯಾಗಿದೆ. ಅಕ್ಟೋಬರ್‌ 5ರಿಂದ ಭಾರತದಲ್ಲಿ ವಿಶ್ವಕಪ್‌ ಆರಂಭವಾಗಲಿದ್ದು, ಪಾಕ್‌ ಭಾರತಕ್ಕೆ ಬರಲಿದೆ. ಆದರೆ, ಭಾರತವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳುವ ಪಿಸಿಬಿ ಹಠಕ್ಕೆ ಹಿನ್ನಡೆಯಾಗಿದೆ. “ಲೀಗ್‌ ಹಂತದ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಎರಡು ಪಂದ್ಯ ಆಡಳಿದೆ. ಫೈನಲ್‌ಗೆ ಹೋದರೆ ಮೂರನೇ ಪಂದ್ಯ ಆಡಬೇಕಾಗುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯಗಳು ಶ್ರೀಲಂಕಾದಲ್ಲಿಯೇ ನಡೆಯಲಿವೆ” ಎಂದು ಅರುಣ್‌ ಧುಮಾಲ್‌ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Asia Cup 2023 : ಭಾರತ ತಂಡಕ್ಕೆ ಶುಭ ಸುದ್ದಿ; ಏಷ್ಯಾ ಕಪ್​ಗೆ ಬಲಿಷ್ಠ ಬಲಗೈ ಬ್ಯಾಟರ್​ ರೆಡಿ!

ವಿಶ್ವಕಪ್‌ ಟೂರ್ನಿಯ ಹಿನ್ನೆಲೆಯಲ್ಲಿ ಈಗಾಗಲೇ ಭಾರತಕ್ಕೆ ಆಗಮಿಸಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಆದರೆ, ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲು ಪಿಸಿಬಿ ಮೊಂಡಾಟ ಪ್ರದರ್ಶಿಸುತ್ತಿದೆ. ಇದಕ್ಕಾಗಿ ಜಯ್‌ ಶಾ ಹಾಗೂ ಜಾಕಾ ಅಶ್ರಫ್‌ ಅವರು ಮತ್ತೆ ಅಕ್ಟೋಬರ್‌ 15ರಂದು ಮಾತುಕತೆ ನಡೆಸಲಿದ್ದಾರೆ. ಆದರೆ, ಕೊನೆಗೂ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ ಅಂತಿಮವಾಗಿ, ಭಾರತ ಹಾಗೂ ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿರುವುದು ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿ ತಂದಿದೆ.

Exit mobile version