ಬೆಂಗಳೂರು: 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ(India vs Australia, Final) ಮತ್ತು 2 ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಇತ್ತಂಡಗಳ ಈ ಫೈನಲ್ ಮುಖಾಮುಖಿ ಭಾನುವಾರ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುಲಿದೆ. ಇದಕ್ಕೂ ಮುನ್ನವೇ ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್(Mitchell Marsh) ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ.
ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸಿ 2 ವಿಕೆಟ್ಗೆ 450 ಬಾರಿಸಲಿದೆ. ಬೃಹತ್ ಮೊತ್ತವನ್ನು ಬೆನ್ನಟ್ಟುವ ಭಾರತ ತಂಡ ಕೇವಲ 65 ರನ್ಗೆ ಆಲೌಟ್ ಆಗಲಿದೆ. ಆಸ್ಟ್ರೇಲಿಯಾ 385 ರನ್ ಗೆಲುವು ಸಾಧಿಸಲಿದೆ ಎಂದು ಮಿಚೆಲ್ ಮಾರ್ಷ್ ಹೇಳಿದ್ದಾರೆ. ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ತಕ್ಕ ಉತ್ತರವನ್ನು ನೀಡಿದ್ದಾರೆ.
ಇದನ್ನೂ ಓದಿ ಫೈನಲ್ ಪಂದ್ಯಕ್ಕೆ ಅಂಪೈರ್ ಪಟ್ಟಿ ಬಿಡುಗಡೆ; ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನಡುಕ!
ಮೊದಲು ನೀವು ಖಾತೆ ತೆರೆಯಿರಿ. ಆ ಬಳಿಕ ಮಾತನಾಡಿ ಎಂದಿದ್ದಾರೆ. ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಮಾರ್ಷ್ ಶೂನ್ಯಕ್ಕೆ ಔಟ್ ಆಗಿದ್ದರು. ಇನ್ನು ಕೆಲವರು ಈ ನೀವು ಸರಿಯಾದ ಭವಿಷ್ಯವನ್ನೇ ನುಡಿದಿದ್ದೀರಿ. ಆದರೆ, ಇಲ್ಲೊಂದು ಸಣ್ಣ ಬದಲಾವಣೆ ಇದೆ. 2 ವಿಕೆಟ್ಗೆ 450 ಬಾರಿಸುವ ತಂಡ ಭಾರತ, 65 ರನ್ಗೆ ಆಲೌಟ್ ಆಗುವ ತಂಡ ಆಸ್ಟ್ರೇಲಿಯಾ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ ಫೈನಲ್ ಫೈಟ್ಗೆ ಸಿದ್ಧತೆ ಆರಂಭಿಸಿದ ಟೀಮ್ ಇಂಡಿಯಾ; ಹೇಗಿತ್ತು ಇಂದಿನ ಕಸರತ್ತು?
ಆಸೀಸ್ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಭಾರತವನ್ನು ಸೋಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದ ಬಳಿಕ ಮಾತನಾಡಿದ ಸ್ಟಾರ್ಕ್, ಭಾರತ ಎಲ್ಲ ಹತ್ತು ಪಂದ್ಯಗಳನ್ನು ಗೆದ್ದಿರಬಹುದು. ಆದರೆ, ಫೈನಲ್ನಲ್ಲಿ ಗೆಲ್ಲುವುದು ಮುಖ್ಯ. ಫೈನಲ್ ಪಂದ್ಯಕ್ಕೆ ನಮ್ಮ ಪ್ರದರ್ಶನವೇ ಬೇರೆ ರೀತಿಯಲ್ಲಿರುತ್ತದೆ ಇದನ್ನೂ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಒಟ್ಟಾರೆ ಇತ್ತಂಡಗಳ ಈ ಫೈನಲ್ ಫೈಟ್ ಮಾತ್ರ ರೋಚಕವಾಗಿ ಕೂಡಿರುವುದರಲ್ಲಿ ಯಾವುವೇ ಅನುಮಾನವಿಲ್ಲ.
ಆಸ್ಟ್ರೇಲಿಯಾಗೇ ಸೋಲುಣಿಸಿದ್ದ ಭಾರತ…
ಭಾರತ ತಂಡ ವಿಶ್ವಕಪ್ ಅಭಿಯಾನ ಆರಂಭಿಸಿದ್ದು 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ. ಅಕ್ಟೋಬರ್ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ನೆರವಿನಿಂದ 49.3 ಓವರ್ಗಳಲ್ಲಿ 199 ರನ್ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್ ರಾಹುಲ್(ಅಜೇಯ 97) ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್ಗಳಲ್ಲಿ 4 ವಿಕೆಟ್ಗೆ 201 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.