Site icon Vistara News

VISTARA TOP 10 NEWS : 26ರಂದು ಬೆಂಗಳೂರು ಬಂದ್​, ವಂದೇ ಭಾರತ್​ ರೈಲುಗಳಿಗೆ ಮೋದಿ ಚಾಲನೆ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top 10 news

1. ಕಾವೇರಿ ನೀರಿಗಾಗಿ ಸೆ. 26ರಂದು ಬೆಂಗಳೂರು ಬಂದ್; ಏನಿರುತ್ತೆ, ಏನಿರಲ್ಲ?
ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ (Cauvery Protest) ಬಂದ್‌ ಬಗ್ಗೆ ತೀರ್ಮಾನ ತೆಗೆದುಕೊಂಡ ಬೆನ್ನಿಗೇ ನಾನಾ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಣೆ ಮಾಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

2. ಗಿಲ್​-ಅಯ್ಯರ್​​ ಬೊಂಬಾಟ್​ ಶತಕ; ಆಸೀಸ್​ ಗೆಲುವಿಗೆ ಬೃಹತ್​ ಗುರಿ
ಇಂದೋರ್​: ಆರಂಭದಲ್ಲಿ ಶ್ರೇಯಸ್​ ಅಯ್ಯರ್(105)​ ಮತ್ತು ಶುಭಮನ್​ ಗಿಲ್(104)​ ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್​ ರಾಹುಲ್(52) ಹಾಗೂ ಸೂರ್ಯಕುಮಾರ್​ ಯಾದವ್​(72*)​ ಅವರ ಅರ್ಧಶತಕದ ನೆರವಿನಿಂದ ಟೀಮ್​ ಇಂಡಿಯಾ ಆಸೀಸ್​ ವಿರುದ್ಧ ದ್ವಿತೀಯ ಏಕದಿನ(IND vs AUS 2nd ODI) ಪಂದ್ಯದಲ್ಲಿ ಬೃಹತ್​ ಮೊತ್ತ ದಾಖಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಐಪಿಎಲ್​ ವೇಳೆ ಕೆಜಿಎಫ್​ ಡೈಲಾಗ್​ ಹೊಡೆದ ಗ್ರೀನ್​ಗೆ ಸಿಕ್ಸರ್​ ರುಚಿ ತೋರಿಸಿದ ಸೂರ್ಯ

3. ಬೆಂಗಳೂರು-ಹೈದರಾಬಾದ್‌ ಸೇರಿ 9 ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ; ಇಲ್ಲಿದೆ ಪಟ್ಟಿ
ನವದೆಹಲಿ: ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶ ಸೇರಿ 11 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 9 ಅತ್ಯಾಧುನಿಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ (Vande Bharat) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಸೆಪ್ಟೆಂಬರ್‌ 24) ಚಾಲನೆ ನೀಡಿದ್ದಾರೆ. ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕದ ಮೂರನೇ ವಂದೇ ಭಾರತ್‌ ರೈಲು ಎನಿಸಿದೆ. ಇದೇ ವೇಳೆ ಮಾತನಾಡಿದ ಮೋದಿ, “ವಂದೇ ಭಾರತ್‌ ರೈಲುಗಳು ದೇಶದಲ್ಲಿ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿವೆ” ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಮಾಜಿ ಸಿಎಂ ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ; ಮಂಡ್ಯ ಸ್ಪರ್ಧೆ ಬಗ್ಗೆ ಹೇಳಿದ್ದೇನು?
ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ (BJP and JDS alliance) ಮೈತ್ರಿ ಬೆನ್ನಲ್ಲೆ ರಾಜ್ಯ ರಾಜಕೀಯದಲ್ಲಿ (Karnataka Politics) ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ‌ (Former CM BS Yediyurappa) ಅವರ ನಿವಾಸಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (JDS state youth wing president Nikhil Kumaraswamy) ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5. ಮಧ್ಯಪ್ರದೇಶ, ಛತ್ತೀಸ್​​ಗಢದಲ್ಲಿ ಗೆಲುವು ನಿಶ್ಚಿತ, ರಾಜಸ್ಥಾನದಲ್ಲೂ ವಿಜಯದ ಸನಿಹ ಎಂದ ರಾಹುಲ್​ ಗಾಂಧಿ
ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿಶ್ಚಿತವಾಗಿ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಕರ್ನಾಟಕದ ಚುನಾವಣೆಯ ಫಲಿತಾಂಶದ ಬಳಿಕ ಕಲಿತ ಪಾಠವನ್ನೂ ವಿವರಿಸಿದ್ದಾರೆ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. Mann Ki Baat: ಬೇಲೂರು, ಹಳೆಬೀಡು ದೇಗುಲಗಳಿಗೆ ವಿಶ್ವಮಾನ್ಯತೆ; ಮನ್‌ ಕಿ ಬಾತ್‌ನಲ್ಲಿ ಮೋದಿ ಸಂತಸ

7. ಏಷ್ಯನ್‌ ಗೇಮ್ಸ್;‌ ಮೊದಲ ದಿನವೇ ಭಾರತ 5 ಪದಕ ಬೇಟೆ, ಇಲ್ಲಿದೆ ವಿಜೇತರ ಮಾಹಿತಿ

8 ವಿದೇಶದಲ್ಲಿ ಕುಳಿತು ದುಷ್ಕೃತ್ಯ ನಡೆಸುವ 19 ಖಲಿಸ್ತಾನಿ ಉಗ್ರರ ಪಟ್ಟಿ ಬಿಡುಗಡೆ ಮಾಡಿದ ಎನ್​ಐಎ

9. ಬಿಗ್‌ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದೆ ʻಚಾರ್ಲಿʼ!

10. ಹಾಸ್ಟೆಲ್​ ಊಟದಲ್ಲಿ ಸತ್ತ ಕಪ್ಪೆ, ವಿದ್ಯಾರ್ಥಿಗಳ ಮೋರೆ ಸಪ್ಪೆ
ಇನ್ನಷ್ಟು ವೈರಲ್​ ಸುದ್ದಿಗಳಿಗೆ ಇಲ್ಲಿ ಕ್ಲಿಕ್​ ಮಾಡಿ.

Exit mobile version