Site icon Vistara News

VISTARA TOP 10 NEWS: ಕಾಂಗ್ರೆಸ್‌ನ ಕಲೆಕ್ಷನ್‌ ವಂಶಾವಳಿ ಬಿಡುಗಡೆ, ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ಸಿಐಡಿಗೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news in kannada

1. ಕಾಂಗ್ರೆಸ್‌ನ ಕಲೆಕ್ಷನ್‌ ವಂಶಾವಳಿ ಬಿಡುಗಡೆ ಮಾಡಿದ ಬಿಜೆಪಿ; ಯಾರ ಸ್ಥಾನ ಎಲ್ಲಿದೆ?
ಬೆಂಗಳೂರು: ಕರ್ನಾಟಕವು ಕಾಂಗ್ರೆಸ್‌ ಹೈಕಮಾಂಡ್‌ (Congress High command) ಪಾಲಿಗೆ ಎಟಿಎಂ ಆಗಲಿದೆ ಎಂದು ಚುನಾವಣೆಗೆ ಮೊದಲು ಮಾಡಿದ ಆರೋಪವನ್ನು ಬಿಜೆಪಿ ಈಗ ದೊಡ್ಡ ಮಟ್ಟದಲ್ಲಿ ಪ್ರಚಾರದ ಮುಂಚೂಣಿಗೆ ತಂದಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಗುತ್ತಿಗೆದಾರರು, ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿಯಲ್ಲಿ ನೂರು ಕೋಟಿಯಷ್ಟು ಹಣ ಸಿಕ್ಕಿದ ಬಳಿಕ ತನ್ನ ಹಿಂದಿನ ಆರೋಪಕ್ಕೆ ಮರುಜೀವ ನೀಡಿದೆ. ಇದೀಗ ಕಾಂಗ್ರೆಸ್‌ನ ಕಲೆಕ್ಷನ್‌ ವಂಶಾವಳಿ (Collection tree) ಎಂಬ ಹೆಸರಿನಲ್ಲಿ ಹಣ ಎಲ್ಲಿಂದ ಯಾವ ದಾರಿಯಲ್ಲಿ ಬರುತ್ತದೆ ಎಂದು ವಿವರಣೆ ನೀಡುವ ಪೋಸ್ಟರ್‌ ಬಿಡುಗಡೆ (Poster release) ಮಾಡಿ ಕಾಂಗ್ರೆಸ್‌ನ್ನು ಕೆಣಕಿದೆ.
ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

2.ಇನ್ನಷ್ಟು ಆಸ್ತಿ ಮಾಹಿತಿ ಮುಚ್ಚಿಟ್ಟರೇ ಡಿಕೆಶಿ; ಸಿಬಿಐ ಕೋರ್ಟ್‌ಗೆ ಹೇಳಿದ್ದೇನು?
ಬೆಂಗಳೂರು: ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ (Misappropriate asset Case) ಮಾಡಿದ ಆರೋಪದಲ್ಲಿ ಸಿಬಿಐ ತನಿಖೆ (CBI Enquiry) ಎದುರಿಸಬೇಕಾಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಸಾಕಷ್ಟು ಆಸ್ತಿ ಮಾಹಿತಿಗಳನ್ನು ಮುಚ್ಚಿಟ್ಟಿದ್ದರೇ ಎಂಬ ಸಂಶಯ ಎದುರಾಗಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

3. ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ
ತುಮಕೂರು: ಕಲಬುರಗಿಯ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣದ (Shivakumar Poojary) ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಿಯೊದಲ್ಲಿ ಸಚಿವ ಶರಣ ಪ್ರಕಾಶ ಪಾಟೀಲ್ ಹೆಸರು ಹೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

4. ಬೆಂಗಳೂರಿನ ಬಳಿಕ ಮೈಸೂರಿಗೂ ಮೆಟ್ರೋ ರೈಲು; ಪ್ರಧಾನಿ ಮೋದಿ ಘೋಷಣೆ
ಬೆಂಗಳೂರು: ದೇಶಾದ್ಯಂತ ರೈಲು ಸೇವೆಗಳು ತ್ವರಿತಗತಿಯಲ್ಲಿ ವಿಸ್ತಾರಗೊಳ್ಳುತ್ತಿದ್ದು, ಹಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ (Namma Metro) ಆರಂಭವಾಗಲಿದೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲೂ ಮೆಟ್ರೋ ಸೇವೆ (Metro service at Mysore) ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಘೋಷಿಸಿದರು. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ
ಇದನ್ನೂ ಓದಿ : Namma Metro : ನಮ್ಮ ಮೆಟ್ರೊ ವಿಸ್ತೃತ ನೇರಳೆ ಮಾರ್ಗ ಲೋಕಾರ್ಪಣೆ ಮಾಡಿದ ಮೋದಿ; ಏನಿದರ ವಿಶೇಷತೆ?
Namo Bharat: ‘ನಮೋ ಭಾರತ್‌’ ರೈಲಿಗೆ ಮೋದಿ ಚಾಲನೆ; ಈ ರೈಲುಗಳು ಏಕೆ ವಿಶಿಷ್ಟ?

5. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ
ಬೆಂಗಳೂರು: ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಂಖಂಡರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್‌ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ (Operation Hasta) ಸೇರ್ಪಡೆಯಾದರು. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

6. ಚಿಕಿತ್ಸೆಗಾಗಿ ಬೆಂಗಳೂರು ತಲುಪಿದ ಹಾರ್ದಿಕ್​ ಪಾಂಡ್ಯ; ವಿಶ್ವಕಪ್​ನಿಂದ ಬಹುತೇಕ ಔಟ್
ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ(Hardik Pandya) ಅವರು ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್​ ಎದುರಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಪಾಂಡ್ಯ ಹೆಚ್ಚಿನ ಚಿಕಿತ್ಸೆಗಾಗಿ ಈಗಾಗಲೇ ಬೆಂಗಳೂರಿಗೆ ತಪುಪಿದ್ದು ಎನ್​ಸಿಎಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ
ಕೊಹ್ಲಿಯ ಶತಕ ನ್ಯಾಯಯುತ, ಅವರು ಯಾವುದೇ ತಪ್ಪು ಮಾಡಿಲ್ಲ; ವಿರೋಧಿಗಳಿಗೆ ತಿರುಗೇಟು ನೀಡಿದ ಶ್ರೀಕಾಂತ್‌
ವಿಶ್ವಕಪ್‌ ಟೂರ್ನಿಯ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

7. ಬಡವರ ಬ್ಯಾಂಕ್‌ ಖಾತೆ ಖರೀದಿಸಿ ಸೈಬರ್‌ ವಂಚಕರಿಗೆ ಮಾರಾಟ; ಬಯಲಾಯ್ತು ಭಯಾನಕ ಜಾಲ
ಭುವನೇಶ್ವರ: ದೇಶದಲ್ಲಿ ಬಡತನ ಎಂದರೆ ಎಷ್ಟು ಶಾಪವೋ, ರಾಜಕಾರಣಿಗಳು ಸೇರಿ ಹಲವರಿಗೆ ಅದು ವರ. ಪ್ರತಿ ಬಾರಿ ಚುನಾವಣೆ ಬಂದಾಗಲೂ, ನಾವು ಬಡವರ ಏಳಿಗೆಗೆ ಶ್ರಮಿಸುತ್ತೇವೆ ಎಂದು ನಂಬಿಸಿ, ಮತ ಪಡೆದು, ರಾಜಕಾರಣಿಗಳು ಶ್ರೀಮಂತರಾಗುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಈಗಲೂ ರಾಜಕಾರಣಿಗಳು ಬಡತನ (Poverty) ನಿರ್ಮೂಲನೆ ಮಾಡುತ್ತೇವೆ ಎಂದೇ ಹೇಳುತ್ತಾರೆ. ಹೀಗೆ ಜನರ ಬಡತನವು ಕೂಡ ದೇಶದಲ್ಲಿ ‘ಬಂಡವಾಳ’ ಆಗಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಒಡಿಶಾ (Odisha) ಸೇರಿ ಹಲವು ರಾಜ್ಯಗಳಲ್ಲಿ ಬಡವರ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳನ್ನು (Bank Accounts) ಸೈಬರ್‌ ಅಪರಾಧಿಗಳು (Cyber Criminals) ಕೊಂಡುಕೊಳ್ಳುವ ಜಾಲವೊಂದು ಬಯಲಾಗಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

8. Rs 1,000 Notes: ಮತ್ತೆ ಬರಲಿದೆಯೇ 1 ಸಾವಿರ ರೂ. ನೋಟು? ಇಲ್ಲಿದೆ ಬಿಗ್ ಅಪ್‌ಡೇಟ್‌
ನವದೆಹಲಿ: ದೇಶದಲ್ಲಿ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ಆರ್‌ಬಿಐ (RBI) ಹಿಂತೆಗೆದುಕೊಂಡಿದ್ದು, ಈಗ 500 ರೂ. ಮೌಲ್ಯದ ನೋಟುಗಳು ಮಾತ್ರ ಗರಿಷ್ಠ ಮುಖಬೆಲೆಯ ನೋಟುಗಳು ಎನಿಸಿವೆ. ಆದರೆ, ಶೀಘ್ರದಲ್ಲಿಯೇ ದೇಶದಲ್ಲಿ ಆರ್‌ಬಿಐ ಮತ್ತೆ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು (Rs 1,000 Notes) ಮತ್ತೆ ಜಾರಿಗೆ ತರಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ದೇಶದಲ್ಲಿ ಮತ್ತೆ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವುದಿಲ್ಲ ಎಂದು ಇತ್ತೀಚಿನ ಮಾಹಿತಿ ದೃಢಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್​ ಕ್ಲಿಕ್​ ಮಾಡಿ

9. ಎರಡು ನಿಮಿಷದ ಸುಖಕ್ಕಾಗಿ…ʼʼ: ಹುಡುಗಿಯರಿಗೆ ಕೋಲ್ಕೊತಾ ಹೈಕೋರ್ಟ್‌ ಕಿವಿಮಾತು!
ಕೋಲ್ಕತಾ: ʼಕೇವಲ ಎರಡು ನಿಮಿಷದ ಲೈಂಗಿಕ ಸುಖಕ್ಕಾಗಿ ಕಾತರಿಸಿ ಸಮಾಜದ ಕಣ್ಣಿನಲ್ಲಿ ಸಣ್ಣವರೆನಿಸಿಕೊಳ್ಳಬೇಡಿʼ ಎಂದು ಕೋಲ್ಕೊತಾ ಹೈಕೋರ್ಟ್‌ (Calcutta High Court) ಹದಿಹರೆಯದ ಹುಡುಗಿಯರಿಗೆ ಕಿವಿಮಾತು ಹೇಳಿದೆ. ಅಪ್ರಾಪ್ತ ವಯಸ್ಕಳೊಬ್ಬಳ ಅತ್ಯಾಚಾರ ಪ್ರಕರಣವೊಂದರಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಹೈಕೋರ್ಟ್‌ ಈ ಬಗ್ಗೆ ಅಭಿಪ್ರಾಯ ನೀಡಿದೆ. ಹದಿಹರೆಯದ ಹುಡುಗ ಮತ್ತು ಹುಡುಗಿಯಿಬ್ಬರ ಲೈಂಗಿಕ ಸಂಬಂಧದ ಪ್ರಕರಣದಲ್ಲಿ, ಇನ್ನೂ 18 ವರ್ಷ ದಾಟದ ಹುಡುಗಿಯ ಜತೆ ದೈಹಿಕ ಸಂಪರ್ಕ ಸಾಧಿಸಿದ ಯುವಕನಿಗೆ 20 ವರ್ಷದ ಜೈಲು ಶಿಕ್ಷೆಯನ್ನು ಸೆಷನ್ಸ್‌ ಕೋರ್ಟ್‌ ವಿಧಿಸಿತ್ತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?
ರಾಯ್‌ಪುರ: ಸಾಮಾನ್ಯವಾಗಿ ದೊಡ್ಡ ಉದ್ಯಮಿಗಳು, ಕೋಟ್ಯಧಿಪತಿಗಳು, ರಾಜಕಾರಣಿಗಳು, ನಟರು ಸ್ವಂತ ಹೆಲಿಕಾಪ್ಟರ್ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬರು ಕೃಷಿಕರು ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಹೊಂದಿದ್ದಾರೆ ಎಂದರೆ ನಂಬುತ್ತೀರಾ? ಹೌದು, ಛತ್ತೀಸ್‌ಗಢದ ಡಾ. ರಾಜಾರಾಮ್ ತ್ರಿಪಾಠಿ ಎನ್ನುವ 50 ವರ್ಷದ ರೈತ ಸ್ವಂತ ಹೆಲಿಕಾಪ್ಟರ್ ಹೊಂದಿ ಗಮನ ಸೆಳೆದಿದ್ದಾರೆ. ‘ಹೆಲಿಕಾಪ್ಟರ್ ಕೃಷಿಕ’ (Helicopter farmer) ಎಂದೇ ಇವರನ್ನು ಕರೆಯಲಾಗುತ್ತದೆ (Success Story). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಸಿಗರೇಟ್‌ ಸೇದಿ ಪೊಲೀಸರಿಗೆ ಹೊಗೆ ಬಿಟ್ಟು ರೀಲ್ಸ್‌ ಮಾಡಿದ ರೌಡಿಶೀಟರ್‌!
ಮತ್ತಷ್ಟು ವೈರಲ್​ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

Exit mobile version