ಬೆಂಗಳೂರು: ಭಾರತ ತಂಡದ ವೇಗಿ ದೀಪಕ್ ಚಹಾರ್ ಮದುವೆಯಲ್ಲಿ ಪಾಲ್ಗೊಳ್ಳುವ ಬದಲಿಗೆ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ತಮ್ಮ ಬಹುಕಾಲದ ಗೆಳೆಯನ ವಿವಾಹದಲ್ಲಿ ಪಾಲ್ಗೊಂಡರು. ಕರ್ನಾಟಕ ಕ್ರಿಕೆಟ್ ಟೀಮ್‌ಮೇಟ್ ಡೇವಿಡ್ ಮಥಾಯಿಸ್ ಮದುವೆಯಲ್ಲಿ ಕುರ್ತಾ ಪೈಜಾಮ ತೊಟ್ಟು ಮಿಂಚಿದರು.
ಬುಧವಾರ ಬಹ್ರೇನ್‌ನಲ್ಲಿ ಗೆಳತಿ ಕಲ್ಯಾಣಿ ದೇಸಾಯಿಯನ್ನು ಮಥಾಯಿಸ್ ಕೈ ಹಿಡಿದರು. ಅದ್ಧೂರಿಯಾಗಿ ನಡೆದ ಈ ಸಮಾರಂಭದಲ್ಲಿ ಭಾರತದ ಟಿ-20 ತಂಡದ ನಾಯಕ ರಾಹುಲ್ ಭಾಗವಹಿಸಿದರು. ನಡೆದ ಡೇವಿಡ್ ಕೀಲನ್ ಮಥಾಯಿಸ್ ಮದುವೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ʼಭಾಯಿ ಕಿ ಶಾದಿʼ ಎಂದು ಬರೆದು ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದೇ ದಿನ ದೀಪಕ್ ಚಹಾರ್ ಮದುವೆಯೂ ಆಗ್ರಾದಲ್ಲಿ ನಡೆಯಿತು. ಆದರೆ ಅದರಲ್ಲಿ ಪಾಲ್ಗೊಳ್ಳದೆ ಬಹು ಕಾಲದ ಗೆಳೆಯನ ಮದುವೆಗೆ ರಾಹುಲ್ ತೆರಳಿದ್ದು ವಿಶೇಷ.
ಡೇವಿಡ್ ಮಥಾಯಿಸ್ ಕರ್ನಾಟಕದಲ್ಲಿ ಹುಟ್ಟಿ, ಬಹ್ರೇನ್‌ನಲ್ಲಿ ಬೆಳೆದವರು. ಡೇವಿಡ್ 12ನೇ ವಯಸ್ಸಿನಲ್ಲಿ, ಭಾರತದಲ್ಲಿ 2004ರಲ್ಲಿ ನಡೆದ ACC ಅಂಡರ್ -17 ಕಪ್‌ನಲ್ಲಿ ಬಹ್ರೇನ್ ಅನ್ನು ಪ್ರತಿನಿಧಿಸಿದರು. ನಂತರ ಮಥಾಯಿಸ್ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. 2015-16ರ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗಿಂದಲೂ ಟೀಮ್ ಮೇಟ್‌ಗಳಾದ ರಾಹುಲ್-ಮಥಾಯಿಸ್ ಇಬ್ಬರ ನಡುವೆ ಗಾಢವಾದ ಸ್ನೇಹವಿದೆ.
ಇದನ್ನೂ ಓದಿ: IPL 2022| ಹಾರ್ದಿಕ್ ಕಮಾಲ್, ನಾಯಕನಾದ ಮೊದಲ ಟೂರ್ನಿಯಲ್ಲೆ ಟ್ರೋಫಿ ಗೆದ್ದ ಪಾಂಡ್ಯ