Site icon Vistara News

Salman Khan: ಸಲ್ಮಾನ್‌ ಖಾನ್‌ರನ್ನು ನೋಡಿಯೂ ನೋಡದ ಹಾಗೆ ಹೋದ ರೊನಾಲ್ಡೊ; ಫ್ಯಾನ್ಸ್‌ ಕೆಂಡ!

Salman Khan And Ronaldo

Cristiano Ronaldo Ignores Salman Khan At A Boxing Event, Fans React

ರಿಯಾಧ್:‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಬೇರೆ ದೇಶಗಳ ಸೆಲೆಬ್ರಿಟಿಗಳೇ ಸಲ್ಮಾನ್‌ ಖಾನ್‌ (Salman Khan) ಅವರ ನಟನೆಯನ್ನು ಮೆಚ್ಚುತ್ತಾರೆ. ಆದರೆ, ಇತ್ತೀಚೆಗೆ ಫುಟ್‌ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರು ಬಾಕ್ಸಿಂಗ್‌ ಪಂದ್ಯವೊಂದರ ವೇಳೆ ಸಲ್ಮಾನ್‌ ಖಾನ್‌ ಅವರು ಪಕ್ಕದಲ್ಲಿ ನಿಂತಿದ್ದರೂ, ಅವರನ್ನು ನೋಡಿಯೂ ನೋಡದ ಹಾಗೆ ಹೋದ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ. ಹಾಗೆಯೆ, ಸಲ್ಮಾನ್‌ ಖಾನ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

ಸೌದಿ ಅರೇಬಿಯಾದ ರಿಯಾಧ್‌ನಲ್ಲಿ ಇತ್ತೀಚೆಗೆ ಟೈಸನ್‌ ಫ್ಯೂರಿ ಹಾಗೂ ಫ್ರಾನ್ಸಿಸ್‌ ಗನ್ನೌ ಮಧ್ಯೆ ಬಾಕ್ಸಿಂಗ್‌ ಪಂದ್ಯ ನಡೆದಿದೆ. ಪಂದ್ಯ ವೀಕ್ಷಣೆಗೆ ಆಗಮಿಸಿದ ಗಣ್ಯರಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಕೂಡ ಇದ್ದರು. ಇದೇ ವೇಳೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಪತ್ನಿ ಜಾರ್ಜಿನಾ ಜತೆ ಆಗಮಿಸಿದರು. ಪಕ್ಕದಲ್ಲೇ ಸಲ್ಮಾನ್‌ ಖಾನ್‌ ಇದ್ದರೂ ರೊನಾಲ್ಡೊ ಅವರು ಪತ್ನಿ ಕೈ ಹಿಡಿದು ಹೋಗಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ವೈರಲ್‌ ಆದ ವಿಡಿಯೊ

ವಿಡಿಯೊ ವೈರಲ್‌ ಆಗುತ್ತಲೇ ಒಂದಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಂದ್ಯದ ವೇಳೆ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಸಲ್ಮಾನ್‌ ಖಾನ್‌ ಅವರು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ. ಸುಖಾಸುಮ್ಮನೆ ಸುಳ್ಳು ಹಬ್ಬಿಸಬೇಡಿ” ಎಂದು ಹೇಳಿದ್ದಾರೆ. ಹಾಗೆಯೇ, ಸಲ್ಮಾನ್‌ ಖಾನ್‌ ಅವರನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೂಡ ಪೋಸ್ಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ

ಸಲ್ಮಾನ್‌ ಖಾನ್‌ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೊ ಜತೆಗಿರುವ ಫೋಟೊ ಕೂಡ ವೈರಲ್‌ ಆಗಿದೆ.

ಇದನ್ನೂ ಓದಿ: Shiva Rajkumar: ʻಟೈಗರ್‌ʼ ಸಲ್ಮಾನ್‌ ಖಾನ್‌ರನ್ನು ಭೇಟಿ ಮಾಡಿದ ʻಘೋಸ್ಟ್‌ʼ ಶಿವಣ್ಣ!

ಮತ್ತೊಂದಿಷ್ಟು ಜನ ಸಲ್ಮಾನ್‌ ಖಾನ್‌ ಅವರನ್ನು ಟ್ರೋಲ್‌ ಮಾಡಿದ್ದಾರೆ. “ಕ್ರಿಸ್ಟಿಯಾನೋ ರೊನಾಲ್ಡೊ ಅವರು ನಿರ್ಲಕ್ಷಿಸಿಲ್ಲ, ಸಲ್ಮಾನ್‌ ಖಾನ್‌ ಅವರೇ ರೊನಾಲ್ಡೊ ಅವರನ್ನು ನಿರ್ಲಕ್ಷಿಸಿದ್ದಾರೆ” ಎಂದೆಲ್ಲ ಟ್ರೋಲ್‌ ಮಾಡಿದ್ದಾರೆ. ಇನ್ನೂ ಕೆಲವರು, “ಭಾರತದ ಹೊರಗೆ ಸಲ್ಮಾನ್‌ ಖಾನ್‌ ಅವರು ತುಂಬ ಸೌಮ್ಯವಾಗಿರುತ್ತಾರೆ” ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಒಂದು ವಿಡಿಯೊ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

Exit mobile version