ಮೆಲ್ಬೋರ್ನ್: ಪಾಕಿಸ್ತಾನ (IND-PAK ) ವಿರುದ್ಧದ ಟಿ೨೦ ವಿಶ್ವಕಪ್‌ನ ಮೊದಲ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ನೆಟ್ಸ್‌ನಲ್ಲಿ ಹೆಚ್ಚುವರಿ ಅಭ್ಯಾಸ ನಡೆಸಿ ಬೆವರು ಸುರಿದ್ದಾರೆ. ಟೀಮ್ ಇಂಡಿಯಾದ ಈ ಅಭ್ಯಾಸವನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆಟಗಾರರಿಗೆ ಹುರಿದುಂಬಿಸಿದ ವಿಡಿಯೊ ವೈರಲ್ ಆಗಿದೆ.
ಸಾಮಾನ್ಯವಾಗಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರು ನೂಕುನುಗ್ಗಲು ಮಾಡುವುದು ಸಾಮಾನ್ಯ. ಆದರೆ ಅಭ್ಯಾಸವನ್ನೂ ನೋಡಲು ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದಿರುವುದು ಇದೇ ಮೊದಲು. ಅಷ್ಟರ ಮಟ್ಟಿಗೆ ಭಾರತ ತಂಡದ ಕ್ರಿಕೆಟ್ ಖ್ಯಾತಿ ವಿಶ್ವಾದ್ಯಂತ ಪಸರಿಸಿದೆ. ಪಂದ್ಯ ನಡೆಯುವಾಗ ಇದ್ದ ಚೀರಾಟ ಅಭ್ಯಾಸದ ವೇಳೆಯೂ ಕಂಡು ಬಂತು. ಎಷ್ಟರ ಮಟ್ಟಿಗೆ ಅಭಿಮಾನಿಗಳ ಚೀರಾಟ ಇತ್ತೆಂದರೆ ಆಟಗಾರರಿಗೆ ಅಭ್ಯಾಸವನ್ನು ನಡೆಸಲು ಸಾಧ್ಯವಾಗದ ರೀತಿಯಲ್ಲಿತ್ತು. ಅದರಂತೆ ಶುಕ್ರವಾರ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ಅಭಿಮಾನಿಗಳಿಗೆ ಬೈದ ಪ್ರಸಂಗವೂ ನಡೆದಿತ್ತು.
ಮೆಲ್ಬೋರ್ನ್ ಮೈದಾನ ಭಿನ್ನ
ಮೆಲ್ಬೋರ್ನ್ ಕ್ರಿಕೆಟ್ ಮೈದಾನವು ಇತರ ಕ್ರೀಡಾಂಗಣಗಳಿಗಿಂತ ಭಿನ್ನವಾಗಿದೆ. ಅಲ್ಲದೆ, ಆಟಗಾರರಿಗೆ ಅಭ್ಯಾಸ ಮಾಡಲು ವಿಶೇಷ ಸೌಲಭ್ಯಗಳಿವೆ. ಶುಕ್ರವಾರದ ಅಭ್ಯಾಸದಲ್ಲಿ ರೋಹಿತ್ ಶರ್ಮಾ ವಿಶೇಷ ಆಕರ್ಷಣೆಯಾಗಿದ್ದರು.
ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಶಾಹೀನ್ ಅಫ್ರಿದಿ ಅವರ ಎಸೆತವನ್ನು ಸಮರ್ಥವಾಗಿ ಎದುರಿಸಲು ಎಡಗೈ ಸೀಮರ್‌ಗಳು ಮತ್ತು ಸ್ಪಿನ್ನರ್‌ಗಳ ಬೌಲಿಂಗ್‌ನಲ್ಲಿ ಅವರು ದೀರ್ಘಕಾಲ ಅಭ್ಯಾಸ ಮಾಡಿದರು.
ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಆಡಲೇಬೇಡಿ!; ಓವೈಸಿ ಹೇಳಿಕೆಯ ಹಿಂದಿನ ಮರ್ಮವೇನು?