Site icon Vistara News

ತಾವು ಸಲಿಂಗಕಾಮಿ ಎಂದು ಘೋಷಿಸಿದ ರಷ್ಯಾದ Tennis​ ತಾರೆ ಡಾರಿಯಾ ಕಸಟಕಿನಾ

tennis

ಮಾಸ್ಕೊ: ಸಲಿಂಗಕಾಮಿಗಳು ತಮ್ಮ ಲೈಂಗಿಕ ಸಂಬಂಧಗಳನ್ನು ಈಗ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಕೆಲವು ದೇಶಗಳಲ್ಲಿ ಈ ಮಾದರಿಯರ ರಿಲೇಷನ್​ಷಿಪ್​ಗಳಿಗೆ ಕಾನೂನಿನ ಅಂಕಿತವೂ ಇದೆ. ಆದರೆ, ರಷ್ಯಾದಲ್ಲಿ ನಿಷೇಧ ಹಾಗೂ ಬಹುಚರ್ಚಿತ ವಿಷಯ. ಆದಾಗ್ಯೂ, ಅಲ್ಲಿನ Tennis ತಾರೆ ಡಾರಿಯಾ ಕಸಟಕಿನಾ ತಾವು ಸಲಿಂಗಿ ಎಂಬುದನ್ನು ಇತ್ತೀಚೆಗೆ ಘೋಷಣೆ ಮಾಡಿದ್ದು, ಒಲಿಂಪಿಕ್​​ ಪದಕ ವಿಜೇತೆ ಮಹಿಳಾ ಸ್ಕೇಟರ್ ನತಾಲಿಯಾ ಜಾಬಿಯಾಕೊ ಜತೆಗಿನ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಇತ್ತೀಚೆಗೆ ಯೂ ಟ್ಯೂಬ್​ ಇಂಟರ್​ವ್ಯೂ ಒಂದರಲ್ಲಿ ಮಾತನಾಡಿದ ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿ ಕಸಟಕಿನಾ ತಾವು ಸಲಿಂಗಿ ಎಂಬುದನ್ನು ಹೇಳಿಕೊಳ್ಳುವ ಜತೆಗೆ ಎಲ್ಲರೂ ಇಂಥ ಸಂಬಂಧಗಳನ್ನು ಹೇಳಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೆ, ವ್ಯಕ್ತಿಯೊಬ್ಬರು ನೆಮ್ಮದಿಯಿಂದ ಬದುಕುವುದೇ ಮುಖ್ಯವಾಗುತ್ತದೆ. ಅವರು ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

2013ರಲ್ಲಿ ರಷ್ಯಾದಲ್ಲಿ ಎಲ್​ಜಿಬಿಟಿ ಸಮುದಾಯದ ವಿರುದ್ಧ ಕಾನೂನು ರೂಪಿಸಲಾಗಿದ್ದು, ಅನೈಸರ್ಗಿಕವಾಗಿರುವ ಸಂಬಂಧಗಳನ್ನು ಪ್ರಕಟಿಸುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. ಈ ಕುರಿತು ರಷ್ಯಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚೆಗೆ ರಷ್ಯಾದ ಮಹಿಳಾ ಫುಟ್ಬಾಲ್ ಅಟಗಾರ್ತಿ​ ನಾಡ್ಯಾ ಕರ್ಪೊವಾ ತಾವು ಸಲಿಂಗಿ ಎಂಬುದನ್ನು ಒಪ್ಪಿಕೊಂಡಿದ್ದರು. ಸಂದರ್ಶನದಲ್ಲಿ ಕಸ್ಟಕಿನಾ ಅವರಿಗೆ ನಾಡ್ಯಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ವೇಳೆ ತಾವೂ ಸಲಿಂಗಿ ಎಂಬುದನ್ನು ಪ್ರಕಟಿಸಿದ್ದಾರೆ.

ಕತ್ತಲೆ ಕೋಣೆಯಲ್ಲಿ ಇರಬಾರದು

ತಮ್ಮ ಲೈಂಗಿಕ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಹೇಳುವಂತಿರಬೇಕು. ಕದ್ದುಮುಚ್ಚಿ ಜೀವನ ನಡೆಸುವಂತಾಗಬಾರದು. ನನಗೂರು ಗರ್ಲ್​ ಫ್ರೆಂಡ್​ ಇದ್ದಾಳೆ. ಇಂಥ ಸಂಬಂಧಗಳ ಬಗ್ಗೆ ಮಾತನಾಡುವ ಸಮಯ ಬಂದಿದೆ. ಯುವಜನಾಂಗಕ್ಕೆ ಸಮಾಜದಿಂದ ಬೆಂಬಲ ದೊರೆಯಬೇಕಾಗಿದೆ, ಎಂದು ಕಸಟಕಿನಾ ಹೇಳಿದ್ದಾರೆ. ಈ ಮೂಲಕ ಅಲ್ಲಿನ ಸರಕಾರದ ಕಾನೂನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡ್ಯಾರಿಯಾ ಕಸಟಕಿನಾ ಅವರು ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿಯಾಗಿದ್ದು, ಈ ಹಿಂದಿನ ಫ್ರೆಂಚ್ ಓಪನ್​ ಟೆನಿಸ್​ ಟೂರ್ನಿಯಲ್ಲಿ ಅವರು ಸೆಮಿಫೈನಲ್​ಗೆ ಪ್ರವೇಶ ಪಡೆದಿದ್ದರು.

ಇದನ್ನೂ ಓದಿ | ಟೆನಿಸ್‌ಗೆ ವಿದಾಯ ಹೇಳುವರೇ ರೋಜರ್‌ ಫೆಡರರ್‌

Exit mobile version