Site icon Vistara News

French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌

French Open 2022 : ಫ್ರೆಂಚ್ ಓಪನ್ ಟೆನಿಸ್‌ ಟೂರ್ನಮೆಂಟ್‌ನಲ್ಲಿ ಸ್ಪೇನ್‌ನ ರಫಾಲ್ ನಡಾಲ್ ಐತಿಹಾಸಿಕ ಗೆಲವು ಸಾಧಿಸಿದ್ದಾರೆ. ಆಸ್ಟ್ರೇಲಿಯಾದ ಜೋರ್ಡನ್ ಥಾಂಪ್ಸನ್‌ ವಿರುದ್ಧದ ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮ್ಯಾಚ್ ಗೆಲ್ಲುವ ಮೂಲಕ ರಫಾಲ್ ನಡಾಲ್ ಅವರು ಗ್ರಾನ್‌ಸ್ಲಾಮ್‌ ಒಂದರ ಸಿಂಗಲ್ಸ್‌ನಲ್ಲಿ 106ನೇ ಗೆಲುವನ್ನು ದಾಖಲಿಸಿದ್ದಾರೆ. 

ಭಾನುವಾರದಿಂದ ಪ್ರಸಕ್ತ ಸಾಲಿನ ಫ್ರೆಂಚ್‌ ಓಪನ್‌ ಗ್ರಾನ್‌ಸ್ಲಾಮ್‌ ಟೂರ್ನಿ ಆರಂಭಗೊಂಡಿದ್ದು ಪುರುಷರ ನಂಬರ್‌ ವನ್‌ ಆಟಗಾರ ನೋವಾಕ್‌ ಜಾಕೋವಿಕ್‌, ಮಹಿಳೆಯರ ಅಗ್ರ ಶ್ರೆಯಾಂಕಿತೆ ಇಗಾ ಸ್ವೆಟಿಕ್‌ ಸೇರಿದಂತೆ ಘಟಾನುಘಟಿ ಆಟಗಾರರು ಪ್ರಶಸ್ತಿಗೆ ಸೆಣಸುತ್ತಿದ್ದಾರೆ. 13 ಬಾರಿ ಫ್ರೆಂಚ್‌ ಓಪನ್‌ ಮುಡಿಗೇರಿಸಿಕೊಂಡಿರುವ ನಡಾಲ್‌ ಗಾಯದ ಸಮಸ್ಯೆಯ ನಡುವೆ ಕಣಕ್ಕಿಳಿದಿದ್ದರು. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ತನ್ನ ನೆಚ್ಚಿನ ಅವೆ ಅಂಕಣದಲ್ಲಿ ಥಾಂಪ್ಸನ್‌ ವಿರುದ್ಧ ಟೂರ್ನಿಯ ಮೊದಲ ಪಂದ್ಯ ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಆರಂಭಿಸಿದ್ದಾರೆ.

ಸ್ಟಾಟಿಸ್ಟಿಕ್ಸ್ ಹೀಗಿದೆ:

ನಡಾಲ್ ಅವರ ಗೆಲುವು ಯಾಕೆ ಐತಿಹಾಸಿಕ?

ಈ ಪಂದ್ಯಕ್ಕೂ ಮುನ್ನ ನಡಾಲ್ ಅವರು 105 ಪಂದ್ಯಗಳನ್ನು (ಫ್ರೆಂಚ್ ಓಪನ್) ಗೆದ್ದಿದ್ದರು. ರೊಜರ್ ಫೆಡರರ್ ಕೂಡ 105 ಗ್ರಾಂಡ್ ಸ್ಲಾಮ್(ವಿಂಬಲ್ಡನ್) ಪಂದ್ಯವನ್ನು ಗೆದ್ದಿದ್ದರು. ಆದರೆ, ನಡಾಲ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಪಂದ್ಯವನ್ನು ಗೆದ್ದಿರುವರಲ್ಲಿ ಅಗ್ರಗಣ್ಯರಾಗಿದ್ದಾರೆ. ರೊಜರ್ ಫೆಡರರ್ ಜತೆ ಇದ್ದ ಟೈ ಮುರಿದು ಈಗ ನಡಾಲ್ ಮುಂದೆ ಸಾಗಿದ್ದಾರೆ. 

ಹಾಲಿ ಚಾಂಪಿಯನ್‌ ಕ್ರಜಿಕೊವಾ ಔಟ್‌:

ಫ್ರೆಂಚ್ ಯುವ ಟೆನ್ನಿಸ್ ಆಟಗಾರ್ತಿ ಡಿಯನೆ ಪೆರ್ರಿ ಹಾಲಿ ಚಾಂಪಿಯನ್ ಆಗಿದ್ದ ಬರ್ಬೊರಾ ಕ್ರಜಿಕೊವಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ (1-6, 6-2, 6-3). ಫ್ರಾನ್ಸ್‌ನ ಯುವ ಪ್ರತಿಭೆ ಪೆರ್ರಿ ಅವರ ಈ ಗೆಲುವು ವಿಶ್ವದ ಟಾಪ್ 10 ಆಟಗಾರರ ವಿರುದ್ಧದ ಮೊದಲ ಗೆಲುವಾಗಿದೆ. ಕ್ರೆಜಿಕೊವಾ ಟಾಪ್ 10 ಆಟಗಾರರಲ್ಲಿ  ಒಬ್ಬರಾದವರು. ಅವರು ಈ ಪಂದ್ಯವನ್ನು ಸೋತು ಫ್ರಂಚ್ ಓಪನ್ ಸರಣಿಯಿಂದ ಹೊರಬಿದ್ದಿದ್ದಾರೆ. ಇವರಲ್ಲದೆ ಈಗಾಗಲೇ ನವಾಮಿ ಒಸಾಕ, ಡಾಮಿನಿಕ್‌ ಥೀಮ್‌, ಡೆನಿಸ್‌ ಶಪಾವಲೋವ್‌ ಮೊದಲಾದ ಅಗ್ರಮಾನ್ಯ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

Exit mobile version