French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌ - Vistara News

ಕ್ರೀಡೆ

French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌

French Open 2022 : ನಡಾಲ್ ಹಾಗೂ ಥಾಂಪ್ಸನ್‌ ವಿರುದ್ಧದ ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸಿದ್ದಾರೆ. ಈ ಗ್ರಾನ್‌ಸ್ಲಾಮ್‌ನಲ್ಲಿ 106 ಪಂದ್ಯವನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

French Open 2022 : ಫ್ರೆಂಚ್ ಓಪನ್ ಟೆನಿಸ್‌ ಟೂರ್ನಮೆಂಟ್‌ನಲ್ಲಿ ಸ್ಪೇನ್‌ನ ರಫಾಲ್ ನಡಾಲ್ ಐತಿಹಾಸಿಕ ಗೆಲವು ಸಾಧಿಸಿದ್ದಾರೆ. ಆಸ್ಟ್ರೇಲಿಯಾದ ಜೋರ್ಡನ್ ಥಾಂಪ್ಸನ್‌ ವಿರುದ್ಧದ ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮ್ಯಾಚ್ ಗೆಲ್ಲುವ ಮೂಲಕ ರಫಾಲ್ ನಡಾಲ್ ಅವರು ಗ್ರಾನ್‌ಸ್ಲಾಮ್‌ ಒಂದರ ಸಿಂಗಲ್ಸ್‌ನಲ್ಲಿ 106ನೇ ಗೆಲುವನ್ನು ದಾಖಲಿಸಿದ್ದಾರೆ. 

ಭಾನುವಾರದಿಂದ ಪ್ರಸಕ್ತ ಸಾಲಿನ ಫ್ರೆಂಚ್‌ ಓಪನ್‌ ಗ್ರಾನ್‌ಸ್ಲಾಮ್‌ ಟೂರ್ನಿ ಆರಂಭಗೊಂಡಿದ್ದು ಪುರುಷರ ನಂಬರ್‌ ವನ್‌ ಆಟಗಾರ ನೋವಾಕ್‌ ಜಾಕೋವಿಕ್‌, ಮಹಿಳೆಯರ ಅಗ್ರ ಶ್ರೆಯಾಂಕಿತೆ ಇಗಾ ಸ್ವೆಟಿಕ್‌ ಸೇರಿದಂತೆ ಘಟಾನುಘಟಿ ಆಟಗಾರರು ಪ್ರಶಸ್ತಿಗೆ ಸೆಣಸುತ್ತಿದ್ದಾರೆ. 13 ಬಾರಿ ಫ್ರೆಂಚ್‌ ಓಪನ್‌ ಮುಡಿಗೇರಿಸಿಕೊಂಡಿರುವ ನಡಾಲ್‌ ಗಾಯದ ಸಮಸ್ಯೆಯ ನಡುವೆ ಕಣಕ್ಕಿಳಿದಿದ್ದರು. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ತನ್ನ ನೆಚ್ಚಿನ ಅವೆ ಅಂಕಣದಲ್ಲಿ ಥಾಂಪ್ಸನ್‌ ವಿರುದ್ಧ ಟೂರ್ನಿಯ ಮೊದಲ ಪಂದ್ಯ ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಆರಂಭಿಸಿದ್ದಾರೆ.

ಸ್ಟಾಟಿಸ್ಟಿಕ್ಸ್ ಹೀಗಿದೆ:

  • ನಡಾಲ್ ಹಾಗೂ ಥಾಮ್ಸನ್ ನಡುವಿನ ಪಂದ್ಯದ ಸ್ಕೋರ್ ಹೀಗಿದೆ: 6-2, 6-2, 6-2
  • ನಡಾಲ್ ಒಟ್ಟು 9೦ ಆಂಕಗಳನ್ನು ಪಡೆದಿದ್ದಾರೆ. ಹಾಗೂ 27 ವಿನ್ನರ್ ಅಂಕವನ್ನು ಗಳಿಸಿದ್ದಾರೆ
  • ನಡಾಲ್ ಒಟ್ಟು 54%ರಷ್ಟು(43/80) ರಿಸೀವಿಂಗ್ ಅಂಕ ಹಾಗೂ 64%ರಷ್ಟು(7/11) ಬ್ರೇಕ್ ಅಂಕವನ್ನು ಗಳಿಸಿದ್ದಾರೆ.
  • 75%ರಷ್ಟು (12/16) ನೆಟ್ ಪಾಯಿಂಟ್ಸ್ ನಡಾಲ್ ಈ ಪಂದ್ಯದಲ್ಲಿ ಗಳಿಸಿದ್ದಾರೆ. 
  • ಈ ಪಂದ್ಯದಲ್ಲಿ ಕೇವಲ ಒಂದೇ ಡಬಲ್-ಫಾಲ್ಟ್ ಆಗಿದೆ. ಆಸ್ಟ್ರೇಲಿಯಾದ ಥಾಮ್ಸನ್ ಈ ಫಾಲ್ಟ್ ಮಾಡಿದ್ದಾರೆ.
  • ಆಸ್ಟ್ರೇಲಿಯಾ ತಂಡದಿಂದ ಒಟ್ಟು 29 ಅನ್ಫೋರ್ಸ್ಡ್ ತಪ್ಪುಗಳಾಗಿವೆ. 

ನಡಾಲ್ ಅವರ ಗೆಲುವು ಯಾಕೆ ಐತಿಹಾಸಿಕ?

ಈ ಪಂದ್ಯಕ್ಕೂ ಮುನ್ನ ನಡಾಲ್ ಅವರು 105 ಪಂದ್ಯಗಳನ್ನು (ಫ್ರೆಂಚ್ ಓಪನ್) ಗೆದ್ದಿದ್ದರು. ರೊಜರ್ ಫೆಡರರ್ ಕೂಡ 105 ಗ್ರಾಂಡ್ ಸ್ಲಾಮ್(ವಿಂಬಲ್ಡನ್) ಪಂದ್ಯವನ್ನು ಗೆದ್ದಿದ್ದರು. ಆದರೆ, ನಡಾಲ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಪಂದ್ಯವನ್ನು ಗೆದ್ದಿರುವರಲ್ಲಿ ಅಗ್ರಗಣ್ಯರಾಗಿದ್ದಾರೆ. ರೊಜರ್ ಫೆಡರರ್ ಜತೆ ಇದ್ದ ಟೈ ಮುರಿದು ಈಗ ನಡಾಲ್ ಮುಂದೆ ಸಾಗಿದ್ದಾರೆ. 

ಹಾಲಿ ಚಾಂಪಿಯನ್‌ ಕ್ರಜಿಕೊವಾ ಔಟ್‌:

ಫ್ರೆಂಚ್ ಯುವ ಟೆನ್ನಿಸ್ ಆಟಗಾರ್ತಿ ಡಿಯನೆ ಪೆರ್ರಿ ಹಾಲಿ ಚಾಂಪಿಯನ್ ಆಗಿದ್ದ ಬರ್ಬೊರಾ ಕ್ರಜಿಕೊವಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ (1-6, 6-2, 6-3). ಫ್ರಾನ್ಸ್‌ನ ಯುವ ಪ್ರತಿಭೆ ಪೆರ್ರಿ ಅವರ ಈ ಗೆಲುವು ವಿಶ್ವದ ಟಾಪ್ 10 ಆಟಗಾರರ ವಿರುದ್ಧದ ಮೊದಲ ಗೆಲುವಾಗಿದೆ. ಕ್ರೆಜಿಕೊವಾ ಟಾಪ್ 10 ಆಟಗಾರರಲ್ಲಿ  ಒಬ್ಬರಾದವರು. ಅವರು ಈ ಪಂದ್ಯವನ್ನು ಸೋತು ಫ್ರಂಚ್ ಓಪನ್ ಸರಣಿಯಿಂದ ಹೊರಬಿದ್ದಿದ್ದಾರೆ. ಇವರಲ್ಲದೆ ಈಗಾಗಲೇ ನವಾಮಿ ಒಸಾಕ, ಡಾಮಿನಿಕ್‌ ಥೀಮ್‌, ಡೆನಿಸ್‌ ಶಪಾವಲೋವ್‌ ಮೊದಲಾದ ಅಗ್ರಮಾನ್ಯ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IPL 2024 : ಮೈದಾನದಿಂದಲೇ ಅನುಷ್ಕಾಗೆ ಕೈ ಸನ್ನೆ ಮಾಡಿದ ಕೊಹ್ಲಿ; ಇಲ್ಲಿದೆ ವಿಡಿಯೊ

IPL 2024: ಐಪಿಎಲ್ 2024 ರಲ್ಲಿ ಆರ್​​ಬಿಯ ಅಭಿಯಾನ ರೋಚಕ ತಿರುವು ಪಡೆದಿದ್ದರಿಂದ ತಂಡದ ಗೆಲುವಿನ ನಂತರ ಸ್ಟಾರ್ ದಂಪತಿಗಳ ಮುಖದಲ್ಲಿ ನೆಮ್ಮದಿ ಕಾಣಿಸಿತು. ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾರೋ ಒಬ್ಬರಿಗೆ ಸಂಕೇತ ಮಾಡಿ ಏನನ್ನೋ ತೋರಿಸುತ್ತಿದ್ದರು. ಅದು ನಾವು ಹಡಗನ್ನೇ ತಿರುಗಿಸುತ್ತೇವೆ. ಅಥವಾ ಇಡೀ ಪ್ರಸಂಗವನ್ನೇ ಬದಲಾಯಿಸುತ್ತೇವೆ ಎಂಬ ಅರ್ಥದಲ್ಲಿತ್ತು. ಕ್ಯಾಮೆರಾ ಕೊಹ್ಲಿ ಕೈ ತೋರಿಸಿದ ಕಡೆಗೆ ತಿರುಗಿಸಿದಾಗ ಅದು ಪತ್ನಿ ಅನುಷ್ಕಾ ಶರ್ಮಾಗೆ ಎಂಬುದು ಗೊತ್ತಾಯಿತು.

VISTARANEWS.COM


on

IPL 2024
Koo

ಬೆಂಗಳೂರು: ಮೇ 12ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ಆರ್​ಸಿಬಿ ತಂಡ ಡಿಸಿ ತಂಡವನ್ನು ಮಣಿಸಿತ್ತು. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. 188 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವನ್ನು ಕೇವಲ 140 ರನ್​ಗಳಿಗೆ ಆಲೌಟ್ ಮಾಡಿದ ಆರ್​​ಸಿಬಿ ಆಟಗಾರರು ಸಂಭ್ರಮಿಸಿದರು. ಆಟಗಾರರು ಗೆಲುವನ್ನು ಆಚರಿಸುತ್ತಿದ್ದಂತೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಡೆಗೆ ಕ್ಯಾಮೆರಾ ತಿರುಗಿಸಿದರು. ಈ ವೇಳೆ ಅವರಿಬ್ಬರ ನಡುವಿನ ಸಂಕಚೇ

ಐಪಿಎಲ್ 2024 ರಲ್ಲಿ ಆರ್​​ಬಿಯ ಅಭಿಯಾನ ರೋಚಕ ತಿರುವು ಪಡೆದಿದ್ದರಿಂದ ತಂಡದ ಗೆಲುವಿನ ನಂತರ ಸ್ಟಾರ್ ದಂಪತಿಗಳ ಮುಖದಲ್ಲಿ ನೆಮ್ಮದಿ ಕಾಣಿಸಿತು. ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾರೋ ಒಬ್ಬರಿಗೆ ಸಂಕೇತ ಮಾಡಿ ಏನನ್ನೋ ತೋರಿಸುತ್ತಿದ್ದರು. ಅದು ನಾವು ಹಡಗನ್ನೇ ತಿರುಗಿಸುತ್ತೇವೆ. ಅಥವಾ ಇಡೀ ಪ್ರಸಂಗವನ್ನೇ ಬದಲಾಯಿಸುತ್ತೇವೆ ಎಂಬ ಅರ್ಥದಲ್ಲಿತ್ತು. ಕ್ಯಾಮೆರಾ ಕೊಹ್ಲಿ ಕೈ ತೋರಿಸಿದ ಕಡೆಗೆ ತಿರುಗಿಸಿದಾಗ ಅದು ಪತ್ನಿ ಅನುಷ್ಕಾ ಶರ್ಮಾಗೆ ಎಂಬುದು ಗೊತ್ತಾಯಿತು. ಬ್ಯಾಟ್ ಮತ್ತು ಬಾಲ್​ನಲ್ಲಿ ಅದ್ಭುತ ಪ್ರಯತ್ನಕ್ಕಾಗಿ ಆರ್​​ಸಿಬಿಯು ಭರ್ಜರಿ ಗೆಲುವಿನ ಕ್ರೆಡಿಟ್ ಕ್ಯಾಮರೂನ್ ಗ್ರೀನ್​ಗೆ ಸಲ್ಲುತ್ತದೆ.

ಇದನ್ನೂ ಓದಿ: Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

ಭಾನುವಾರ ಡಿಸಿ ವಿರುದ್ಧ 47 ರನ್​ಗಳ ಜಯದೊಂದಿಗೆ ಆರ್​​ಸಿಬಿ ತನ್ನ ಗೆಲುವಿನ ಓಟ ಮುಂದುವರಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್​​ನಲ್ಲಿ 5 ನೇ ಸ್ಥಾನಕ್ಕೆ ಜಿಗಿಯಿತು. ಪಂದ್ಯಾವಳಿಯ ಆರಂಭದಲ್ಲಿ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕಾರಣ ಪ್ಲೇಆಫ್ ಆಸೆ ದೂರದ ಕನಸಿನಂತೆ ತೋರಿತು. ರಜತ್ ಪಾಟಿದಾರ್ ಅವರ ಅರ್ಧಶತಕ ಮತ್ತು ಆರ್ಸಿಬಿ ಬೌಲರ್​ಗಳ ಶಿಸ್ತುಬದ್ಧ ಪ್ರದರ್ಶನವು ಕೊನೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟಿತು.

ಆರ್​ಸಿಬಿ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯವನ್ನು ಸಿಎಸ್ಕೆ ವಿರುದ್ಧ ತವರಿನಲ್ಲಿ ಆಡಲಿದೆ. ಒಂದು ವೇಳೆ ಆರ್​​ಸಿಬಿ 18 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಗೆದ್ದರೆ, ಅವರು ಸಿಎಸ್​ಗಿಂತ ಉತ್ತಮ ನೆಟ್​​ರನ್​ರೇಟ್ ಹೊಂದಿದರೆ ಪ್ಲೇಆಫ್​ಗೆ ಅರ್ಹತೆ ಪಡೆಯುತ್ತದೆ.

Continue Reading

ಪ್ರಮುಖ ಸುದ್ದಿ

Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

Gautam Gambhir: ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಅವರ ಯಶಸ್ಸಿನ ಮಧ್ಯೆ ಕೆಕೆಆರ್ ಮಾಜಿ ನಾಯಕ ಮತ್ತು ಪ್ರಸ್ತುತ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ವಿಷಾದಿಸಿದ್ದಾರೆ. ಕೆಕೆಆರ್​ನಲ್ಲಿ ತಂಡದಲ್ಲಿ ಇದ್ದ ಸಮಯದಲ್ಲಿ ಯಾದವ್ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗುರುತಿಸದಿರುವುದಕ್ಕೆ ಗಂಭೀರ್ ವಿಷಾದ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Gautam Gambhir
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಕ್ರಿಕೆಟ್ ಪ್ರಯಾಣವು ಅಭಿವೃದ್ಧಿ ಹೊಂದಿರುವುದು ಮುಂಬೈ ಇಂಡಿಯನ್ಸ್ ತಂಡದಲ್ಲಿ. ಅವರ ಲಭ್ಯತೆ ಆತಂಡದ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಆದರೆ ಅವರು ಆರಂಭದಲ್ಲಿ ಅಡಿದ್ದು ಮುಂಬಯಿ ಪರ ಅಲ್ಲ. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದವರು ಅವರು. ಬಳಿಕ ಅವರು ಮುಂಬೈ ತಂಡ ಸೇರಿಕೊಂಡು ಮಿಂಚಿದರು. ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್ ಅವರ ಗಮನಾರ್ಹ ಪ್ರದರ್ಶನವು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಲು ಅವಕಾಶ ನೀಡಿತು. ಅವರ ಬಗ್ಗೆ ಗೌತಮ್​ ಗಂಭೀರ್​ (Gautam Gambhir) ವಿಶೇಷ ಮಾತುಗಳನ್ನು ಆಡಿದ್ದಾರೆ.

ಸ್ಟೈಲಿಶ್ ಬ್ಯಾಟ್ಸ್ಮನ್ ಅವರ ಪ್ರಯಾಣವು 2018 ರಲ್ಲಿ ಎರಡನೇ ಬಾರಿಗೆ ಎಂಐಗೆ ಸೇರಿದಾಗ ಗಮನಾರ್ಹ ತಿರುವು ಪಡೆದುಕೊಂಡಿತು. 2012 ರಲ್ಲಿ ಅದೇ ಫ್ರಾಂಚೈಸಿಯೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2014ರಿಂದ 2017ರ ವರೆಗೆ ನಾಲ್ಕು ಆವೃತ್ತಿಗಳಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದ ಸೂರ್ಯ 54 ಪಂದ್ಯಗಳಲ್ಲಿ 608 ರನ್ ಗಳಿಸಿದ್ದರು.

ಗೌತಮ್ ಗಂಭೀರ್ ಬೇಸವರೇನು

ಲಾಭದಾಯಕ ಟಿ 20 ಲೀಗ್​​ನಲ್ಲಿ ಕೆಕೆಆರ್ ಪರ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅವರು ಕೆಲವು ರನ್​​ಗಳನ್ನು ಗಳಿಸಿದ್ದರು. ಆದರೆ ಸೂರ್ಯಕುಮಾರ್ ಅವರ ನಿಜವಾದ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್​​ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಬಯಲಾಯಿತು. ಆಧುನಿಕ ಯುಗದ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಅವರ ಯಶಸ್ಸಿನ ಮಧ್ಯೆ ಕೆಕೆಆರ್ ಮಾಜಿ ನಾಯಕ ಮತ್ತು ಪ್ರಸ್ತುತ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ವಿಷಾದಿಸಿದ್ದಾರೆ. ಕೆಕೆಆರ್​ನಲ್ಲಿ ತಂಡದಲ್ಲಿ ಇದ್ದ ಸಮಯದಲ್ಲಿ ಯಾದವ್ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗುರುತಿಸದಿರುವುದಕ್ಕೆ ಗಂಭೀರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ಮಾಜಿ ನಾಯಕ ಸೂರ್ಯ ಅವರ ನಿಜವಾದ ಸಾಮರ್ಥ್ಯ ಮತ್ತು ಆದರ್ಶ ಬ್ಯಾಟಿಂಗ್ ಸ್ಥಾನವನ್ನು ಗುರುತಿಸಲು ವಿಫಲರಾಗಿದ್ದಾರೆ ಎಂದು ಒಪ್ಪಿಕೊಂಡರು. ಇದು ಕೆಕೆಆರ್​ ಜತೆಗಿನ ಅವರ ನಾಯಕತ್ವದ ಅವಧಿಯಿಂದ ಅತಿದೊಡ್ಡ ತಪ್ಪು ಎಂದು ಹೇಳಿದರು. ಕೆಕೆಆರ್ ತಂಡವು ಸೂರ್ಯಕುಮಾರ್ ಅವರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಎಂದಿಗೂ ಸಾಧ್ಯವಾಗಲಿಲ್ಲ ಎಂದು ಗಂಭೀರ್ ಒತ್ತಿ ಹೇಳಿದರು.

ಗೌತಮ್ ಗಂಭೀರ್ ಅತ್ಯುತ್ತಮ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅದನ್ನು ಜಗತ್ತಿಗೆ ತೋರಿಸುವುದು ನಾಯಕನ ಪಾತ್ರವಾಗಿತ್ತು. ನನ್ನ ಏಳು ವರ್ಷಗಳ ನಾಯಕತ್ವದಲ್ಲಿ ನನ್ನಲ್ಲಿರುವ ಒಂದು ವಿಷಾದವೆಂದರೆ ನಾನು ಮತ್ತು ತಂಡವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

ಸೂರ್ಯ 3 ನೇ ಕ್ರಮಾಂಕದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದರು, ಆದರೆ 7 ನೇ ಕ್ರಮಾಂಕದಲ್ಲಿ ಅಷ್ಟೇ ಉತ್ತಮವಾಗಿದ್ದರು. ನೀವು ಅವರನ್ನು 6 ಅಥವಾ 7 ನೇ ಕ್ರಮಾಂಕದಲ್ಲಿ ಆಡಿಸಬಹುದು ಅಥವಾ ಬೆಂಚ್ ಕಾಯಿಸಬಹುದು. ಯಾವಾಗಲೂ ನಗುತ್ತಿದ್ದರು ಮತ್ತು ತಂಡಕ್ಕಾಗಿ ಪ್ರದರ್ಶನ ನೀಡಲು ಯಾವಾಗಲೂ ಸಿದ್ಧರಾಗಿದ್ದರು ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕೆಕೆಆರ್ ರೆಡ್-ಹಾಟ್ ಫಾರ್ಮ್​ನಲ್ಲಿದ್ದಾರೆ. ಗಂಭೀರ್ ಅವರ ಮಾರ್ಗದರ್ಶನವು ಎರಡು ಬಾರಿಯ ಚಾಂಪಿಯನ್ಸ್​​ನಲ್ಲಿ ಅದ್ಭುತಗಳನ್ನು ಮಾಡುತ್ತಿದೆ, ಈ ಋತುವಿನಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. 13 ಪಂದ್ಯಗಳಿಂದ 18 ಅಂಕ ಗಳಿಸಿರುವ ಕೆಕೆಆರ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.. ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 13 ರಂದು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಆಡಲಿದೆ.

Continue Reading

ಪ್ರಮುಖ ಸುದ್ದಿ

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಸಂಘಟಿತ ಹೋರಾಟ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Banglore) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ದ 47 ರನ್​ಗಳ ಗೆಲುವು ದಾಖಲಿಸಿದೆ. ಇದು ಆರ್​ಸಿಬಿಗೆ ಹಾಲಿ ಆವೃತ್ತಿಯಲ್ಲಿ ದೊರಕಿದ ಸತತ ಐದನೇ ಹಾಗೂ ಒಟ್ಟು 6ನೇ ಗೆಲುವಾಗಿದೆ. ಈ ಮೂಲಕ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಫಾಫ್​ ಡು ಪ್ಲೆಸಿಸ್ ಬಳಗ ಪ್ಲೇಆಫ್ ಹಂತಕ್ಕೆ ಏರಬೇಕಾದರೆ ಇನ್ನೊಂದು ಕಡ್ಡಾಯ ಗೆಲುವು ಹಾಗೂ ಇನ್ನೊಂದಿಷ್ಟು ಉಳಿದ ತಂಡಗಳ ಪಂದ್ಯಗಳ ಲೆಕ್ಕಾಚಾರ ಅಗತ್ಯವಿದೆ. ಆದರೆ ಆರ್​ಸಿಬಿ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ಆಡುತ್ತಿರುವ ರೀತಿ ಮಾತ್ರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ. ಅದೇ ರೀತಿ ಆಟಗಾರರಿಗೆ ಅತಿ ಹೆಚ್ಚು ಉತ್ಸಾಹವನ್ನು ನೀಡಿದೆ. ಅಂತೆಯೇ ತವರಿನ ಮೈದಾನದಲ್ಲಿ ಗೆದ್ದಿರುವುದು ಗೆದ್ದಿರುವುದು ಇಡೀ ಆರ್​ಸಿಬಿ ಪಾಳೆಯದ ಖುಷಿ ಹೆಚ್ಚಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ 19.1 ಓವರ್​ಗಳಲ್ಲಿ 140 ರನ್​ಗೆ ಆಲ್​ಔಟ್ ಆಯಿತು. ಡೆಲ್ಲಿ ತಂಡಕ್ಕೆ ಇದು 13 ಪಂದ್ಯಗಳಲ್ಲಿ 7ನೇ ಸೋಲಾಗಿದೆ.

ಇದನ್ನೂ ಓದಿ: Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

ಮೊದಲು ಬ್ಯಾಟ್ ಮಾಡಿದ ಆರ್​​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಫಾಫ್​​ ಡು ಪ್ಲೆಸಿಸ್ ಮತ್ತೆ 6 ರನ್​ಗೆ ಔಟಾದರು. ಅದೇ ರೀತಿ ಉತ್ತಮ ರೀತಿಯಲ್ಲಿ ಬ್ಯಾಟ್​ ಮಾಡುತ್ತಿದ್ದ ವಿರಾಟ್ ಕೊಹ್ಲಿ 27 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಜತ್​ ಪಾಟೀದಾರ್​ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಅವರು 32 ಎಸೆತಕ್ಕೆ 52 ರನ್​ ಬಾರಿಸಿದರು. ಅವರಿಗೆ ವಿಕ್​ ಜ್ಯಾಕ್ಸ್ ಉತ್ತಮ ಜತೆಯಾಟ ನೀಡಿ 29 ಎಸೆತಕ್ಕೆ 41 ರನ್ ಬಾರಿಸಿ 100 ರನ್ ಗಡಿ ದಾಟಲು ಸಹಾಯ ಮಾಡಿದರು. ಇವರಿಬ್ಬರು ಔಟಾದ ಬಳಿಕ ಆರ್​ಸಿಬಿ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕ್ಯಾಮೆರೂನ್ ಗ್ರೀನ್​ 32 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹಿಪಾಲ್​ ಲಾಮ್ರೋರ್​ 13 ರನ್ ಬಾರಿಸಿದರು.

ಡೆಲ್ಲಿಯ ಕುಸಿತ

ಅರ್​ಸಿಬಿ ತಂಡ ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿತು. ಜತೆಗೆ ಅದೃಷ್ಟವೂ ಆರ್​ಸಿಬಿಯ ಪರವಾಗಿತ್ತು. ಡೇವಿಡ್​ ವಾರ್ನರ್​ 1 ರನ್​ ಗೆ ಔಟಾರೆ ಜೇಕ್​ ಫ್ರೇಸರ್ ಮೆಗ್​ಕುರ್ಕ್​ 21 ರನ್ ಬಾರಿಸಿದ ಹೊರತಾಗಿಯೂ ದುರದೃಷ್ಟದ ರನ್​ಔಟ್​ಗೆ ಒಳಗಾಯಿತು. ಶಾಯ್​ ಹೋಪ್​ 29 ರನ್ ಗೆ ಔಟಾದರೆ ಅಭಿಷೇಕ್​ ಪೊರೆಲ್​ 1ರನ್​ ಗೆ ಸೀಮಿತಗೊಂಡರು. ವಿಕೆಟ್​ಗಳು ಉರುಳುತ್ತಿರುವ ನಡುವೆಯೂ ಹಂಗಾಮಿ ನಾಯಕ ಅಕ್ಷರ್​ ಪಟೇಲ್​ 39 ಎಸೆತಕ್ಕೆ 57 ರನ್ ಬಾರಿಸಿದರು. ಅವರು ಇನಿಂಗ್ಸ್ ಆರ್​ಸಿಬಿಗೆ ಭಯ ಉಂಟು ಮಾಡಿದರೂ ಒತ್ತಡದ ನಡುವೆ ಅವರು ಔಟಾದರು.

ಆರ್​ಸಿಬಿ ಪರ ಯಶ್​ ದಯಾಳ್​ 20 ರನ್​ಗೆ 3 ವಿಕೆಟ್​ ಪಡೆದರೆ ಲಾಕಿ ಫರ್ಗ್ಯೂಸನ್​ 23 ರನ್​ ಗೆ 2 ವಿಕೆಟ್​ ಪಡೆದರು.

Continue Reading

Latest

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Virar kohli: ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು.

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2024 ರ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೋಪಗೊಂಡ ಪ್ರಸಂಗ ನಡೆಯಿತು. ವಿವಾದಾತ್ಮಕ ಅಂಪೈರ್ ನಿರ್ಧಾರದ ಬಗ್ಗೆ ಆನ್ ಫೀಲ್ಡ್ ಅಂಪೈರ್ ಜೊತೆ ಅವರು ತೀವ್ರ ವಾಗ್ವಾದ ನಡೆಸಿದರು. ಅಭಿಷೇಕ್ ಪೊರೆಲ್ ಅವರಿಗೆ ನೀಡಲಾದ ಎಲ್​ಬಿಡಬ್ಲ್ಯು ನಿರ್ಧಾರದ ವಿರುದ್ಧ ಕೊಹ್ಲಿ ಸಿಡಿದೆದ್ದರು. ಡಿಸಿ ರನ್ ಚೇಸ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಈ ಘಟನೆ ನಡೆದಿದೆ.

ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು. ಅವರು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜತೆ ಸೇರಿ ಅಂಪೈರ್ ಜತೆ ಜಗಳಕ್ಕೆ ನಿಂತರು. ವಿಷಯದ ಬಗ್ಗೆ ಅಂಪೈರ್​ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಇದನ್ನೂ ಓದಿ: Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.


ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

Continue Reading
Advertisement
Prajwal Revanna Case
ಕರ್ನಾಟಕ32 seconds ago

Prajwal Revanna Case: ಪೆನ್‌ಡ್ರೈವ್, ವಿಡಿಯೊ ಇದ್ದವರನ್ನೆಲ್ಲ ಬಂಧಿಸ್ತಾರಾ?; ಆಪ್ತರ ಬಂಧನದ ಬಗ್ಗೆ ಪ್ರೀತಂ ಗೌಡ ಫಸ್ಟ್‌ ರಿಯಾಕ್ಷನ್

Pushpa 2 Allu Arjun fan recreates hook step on graduation day
ಟಾಲಿವುಡ್33 seconds ago

Pushpa 2: ಪದವಿ ಪ್ರದಾನ ವೇಳೆ ‘ಪುಷ್ಪ 2’ ಹುಕ್ ಸ್ಟೆಪ್ ಹಾಕಿದ ವಿದ್ಯಾರ್ಥಿ: ವಿಡಿಯೊ ವೈರಲ್‌

IPL 2024
ಪ್ರಮುಖ ಸುದ್ದಿ6 mins ago

IPL 2024 : ಮೈದಾನದಿಂದಲೇ ಅನುಷ್ಕಾಗೆ ಕೈ ಸನ್ನೆ ಮಾಡಿದ ಕೊಹ್ಲಿ; ಇಲ್ಲಿದೆ ವಿಡಿಯೊ

Maldives
ದೇಶ17 mins ago

Maldives: ಭಾರತದ ಯುದ್ಧವಿಮಾನ ಹಾರಿಸುವ ತಾಕತ್ತು ನಮ್ಮ ಪೈಲಟ್‌ಗಳಿಗಿಲ್ಲ ಎಂದ ಮಾಲ್ಡೀವ್ಸ್, ಎಂಥಾ ದುಸ್ಥಿತಿ!

Rahul Gandhi
ದೇಶ28 mins ago

Rahul Gandhi: ಮದ್ವೆ ಬಗ್ಗೆ ಕಾರ್ಯಕರ್ತರ ಪ್ರಶ್ನೆ..ವೇದಿಕೆಯಲ್ಲೇ ಉತ್ತರ ಕೊಟ್ಟ ರಾಹುಲ್‌: ವಿಡಿಯೋ ವೈರಲ್‌

Health Tips Kannada
ಆರೋಗ್ಯ35 mins ago

Health Tips Kannada: ಕಣ್ಣಿನ ಕೆಳಗಿನ ಕಪ್ಪು ಕಲೆ ನಿವಾರಿಸುವುದು ಹೇಗೆ?

Gautam Gambhir
ಪ್ರಮುಖ ಸುದ್ದಿ45 mins ago

Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

Karnataka Politics Operation Kamala is not possible says CM Siddaramaiah
ರಾಜಕೀಯ1 hour ago

Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

Ujjaini Sri Marulasiddeshwara Rathotsava
ವಿಜಯನಗರ1 hour ago

Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

Swati Maliwal
ದೇಶ1 hour ago

Swati Maliwal: ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲೇ ಆಪ್‌ ಸಂಸದೆ ಸ್ವಾತಿ ಮೇಲೆ ಹಲ್ಲೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ10 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ12 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ22 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ23 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ23 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌