ಲಖನೌ: ಐಪಿಎಲ್ 16ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಲಕ್ನೊ ಸೂಪರ್ ಜೈಂಟ್ಸ್ ಬಳಗ ಫೀಲ್ಡಿಂಗ್ ಮಾಡಬೇಕಾಗಿದೆ.
ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡುತ್ತೇವೆ. ನಿಧಾನಗತಿಯ ಟ್ರ್ಯಾಕ್‌ನಂತೆ ತೋರುತ್ತಿರುವ ಕಾರಣ ದೊಡ್ಡ ಮೊತ್ತ ಪೇರಿಸಿ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವುದೇ ಉತ್ತಮ ಎನಿಸಿದೆ. ನಮ್ಮ ಬ್ಯಾಟ್ಸ್ಮನ್ಗಳಿಗೆ ಅದನ್ನು ಪರೀಕ್ಷಿಸಲು ಸಮಯವಿಲ್ಲ ಎಂದರು.
ಪಿಚ್ ನಿಧಾನವಾಗಿದೆ ಎಂದು ಕಾಣುತ್ತದೆ. ಆದಾಗ್ಯೂ ನಮ್ಮ ಮಟ್ಟಿಗೆ ಗರಿಷ್ಠ ಸಾಧನೆ ಮಾಡಲಿದ್ದೇವೆ. ಇಲ್ಲಿ ಎಷ್ಟು ರನ್ ದಾಖಲಾದರೂ ಚೇಸ್ ಮಾಡುವ ಸಾಮರ್ಥ್ಯ ನಮಗೆ ಇದೆ ಎಂದು ಕೆ. ಎಲ್ ರಾಹುಲ್ ಹೇಳಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ತಂಡ ಮತ್ತೆ ತವರಿನಲ್ಲಿ ಆಡುತ್ತಿದೆ. ಈ ಬಾರಿ ಗುಜರಾತ್ ಟೈಟನ್ಸ್ ತಂಡಕ್ಕೆ ಆತಿಥ್ಯ ವಹಿಸುತ್ತಿದೆ. ಇಲ್ಲಿನ ಪಂದ್ಯದಲ್ಲಿ ಗೆದ್ದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ದೊರೆಯಲಿದೆ ಹಾಗೂ ತಂಡದ ಆಟಗಾರರ ವಿಶ್ವಾಸ ಹೆಚ್ಚಲಿದೆ. ಎಲ್ಎಸ್ಜಿ ತಂಡ ಇದುವರೆಗಿನ ಆರು ಪಂದ್ಯಗಳಲ್ಲಿ ನಾಲ್ಕು ಹಣಾಹಣಿಗಳಲ್ಲಿ ಗೆಲುವು ಸಾಧಿಸಿದೆ. ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಜಿದ್ದಾಜಿದ್ದಿನ ಹೋರಾಟದಲ್ಲಿ ಮಣಿಸಿದ್ದ ತಂಡದ ಆಟಗಾರರು ಉತ್ಸಾಹದಲ್ಲಿದ್ದಾರೆ. ಲಖನೌ ತಂಡಕ್ಕೆ ಆ ತಂಡದ ಬೌಲರ್ಗಳೇ ದೊಡ್ಡ ಅನುಕೂಲ.
ಇದನ್ನೂ ಓದಿ: IPL 2023 : ವೃತ್ತಿ ಜೀವನದ ಕೊನೇ ಹಂತದಲ್ಲಿದ್ದೇನೆ; ಧೋನಿ ಈ ರೀತಿ ಹೇಳಿದ್ದು ಯಾಕೆ?
ಗುಜರಾತ್ ಟೈಟನ್ಸ್ ತಂಡ ಈ ಬಾರಿ ಮಿಶ್ರ ಫಲವನ್ನು ಅನುಭವಿಸಿದೆ. ಆದಾಗ್ಯೂ ಆಡಿರುವ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಡತ್ ಓವರ್ನ ದೌರ್ಬಲ್ಯವನ್ನು ಬಹಿರಂಗಪಡಿಸಿತ್ತು. ಇದು ಬೌಲಿಂಗ್ಗೆ ಹೆಚ್ಚು ನೆರವಾಗುವ ಪಿಚ್ ಆಗಿರುವ ಕಾರಣ ಗುಜರಾತ್ ಬೌಲರ್ಗಳಿಗೆ ತಮ್ಮ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ಲಭಿಸಿದೆ.
ಇತ್ತಂಡಗಳು ಇಂತಿವೆ
ಗುಜರಾತ್ ಟೈಟಾನ್ಸ್ : ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ.
ಲಕ್ನೋ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ರವಿ ಬಿಷ್ಣೋಯ್