Gujarat Titans won the toss and elected to bat IPL 2023 : ಟಾಸ್​ ಗೆದ್ದ ಗುಜರಾತ್ ಟೈಟನ್ಸ್​ ತಂಡದಿಂದ ಬ್ಯಾಟಿಂಗ್ ಆಯ್ಕೆ - Vistara News

ಕ್ರಿಕೆಟ್

IPL 2023 : ಟಾಸ್​ ಗೆದ್ದ ಗುಜರಾತ್ ಟೈಟನ್ಸ್​ ತಂಡದಿಂದ ಬ್ಯಾಟಿಂಗ್ ಆಯ್ಕೆ

ಲಕ್ನೊ ಸೂಪರ್​ ಜಯಂಟ್ಸ್​ ತಂಡ ಈ ಪಂದ್ಯದಲ್ಲಿ ಗೆಲವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಐಪಿಎಲ್​ 16ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಲಕ್ನೊ ಸೂಪರ್​ ಜೈಂಟ್ಸ್ ಬಳಗ ಫೀಲ್ಡಿಂಗ್ ಮಾಡಬೇಕಾಗಿದೆ.

ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡುತ್ತೇವೆ. ನಿಧಾನಗತಿಯ ಟ್ರ್ಯಾಕ್‌ನಂತೆ ತೋರುತ್ತಿರುವ ಕಾರಣ ದೊಡ್ಡ ಮೊತ್ತ ಪೇರಿಸಿ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವುದೇ ಉತ್ತಮ ಎನಿಸಿದೆ. ನಮ್ಮ ಬ್ಯಾಟ್ಸ್​ಮನ್​ಗಳಿಗೆ ಅದನ್ನು ಪರೀಕ್ಷಿಸಲು ಸಮಯವಿಲ್ಲ ಎಂದರು.

ಪಿಚ್ ನಿಧಾನವಾಗಿದೆ ಎಂದು ಕಾಣುತ್ತದೆ. ಆದಾಗ್ಯೂ ನಮ್ಮ ಮಟ್ಟಿಗೆ ಗರಿಷ್ಠ ಸಾಧನೆ ಮಾಡಲಿದ್ದೇವೆ. ಇಲ್ಲಿ ಎಷ್ಟು ರನ್​ ದಾಖಲಾದರೂ ಚೇಸ್ ಮಾಡುವ ಸಾಮರ್ಥ್ಯ ನಮಗೆ ಇದೆ ಎಂದು ಕೆ. ಎಲ್​ ರಾಹುಲ್ ಹೇಳಿದ್ದಾರೆ.

ಲಖನೌ ಸೂಪರ್​ ಜಯಂಟ್ಸ್​ ತಂಡ ಮತ್ತೆ ತವರಿನಲ್ಲಿ ಆಡುತ್ತಿದೆ. ಈ ಬಾರಿ ಗುಜರಾತ್ ಟೈಟನ್ಸ್ ತಂಡಕ್ಕೆ ಆತಿಥ್ಯ ವಹಿಸುತ್ತಿದೆ. ಇಲ್ಲಿನ ಪಂದ್ಯದಲ್ಲಿ ಗೆದ್ದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ದೊರೆಯಲಿದೆ ಹಾಗೂ ತಂಡದ ಆಟಗಾರರ ವಿಶ್ವಾಸ ಹೆಚ್ಚಲಿದೆ. ಎಲ್​ಎಸ್​​ಜಿ ತಂಡ ಇದುವರೆಗಿನ ಆರು ಪಂದ್ಯಗಳಲ್ಲಿ ನಾಲ್ಕು ಹಣಾಹಣಿಗಳಲ್ಲಿ ಗೆಲುವು ಸಾಧಿಸಿದೆ. ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಜಿದ್ದಾಜಿದ್ದಿನ ಹೋರಾಟದಲ್ಲಿ ಮಣಿಸಿದ್ದ ತಂಡದ ಆಟಗಾರರು ಉತ್ಸಾಹದಲ್ಲಿದ್ದಾರೆ. ಲಖನೌ ತಂಡಕ್ಕೆ ಆ ತಂಡದ ಬೌಲರ್​ಗಳೇ ದೊಡ್ಡ ಅನುಕೂಲ.

ಇದನ್ನೂ ಓದಿ: IPL 2023 : ವೃತ್ತಿ ಜೀವನದ ಕೊನೇ ಹಂತದಲ್ಲಿದ್ದೇನೆ; ಧೋನಿ ಈ ರೀತಿ ಹೇಳಿದ್ದು ಯಾಕೆ?

ಗುಜರಾತ್ ಟೈಟನ್ಸ್ ತಂಡ ಈ ಬಾರಿ ಮಿಶ್ರ ಫಲವನ್ನು ಅನುಭವಿಸಿದೆ. ಆದಾಗ್ಯೂ ಆಡಿರುವ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಆದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಡತ್​ ಓವರ್​ನ ದೌರ್ಬಲ್ಯವನ್ನು ಬಹಿರಂಗಪಡಿಸಿತ್ತು. ಇದು ಬೌಲಿಂಗ್​ಗೆ ಹೆಚ್ಚು ನೆರವಾಗುವ ಪಿಚ್ ಆಗಿರುವ ಕಾರಣ ಗುಜರಾತ್​ ಬೌಲರ್​ಗಳಿಗೆ ತಮ್ಮ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ಲಭಿಸಿದೆ.

ಇತ್ತಂಡಗಳು ಇಂತಿವೆ

ಗುಜರಾತ್ ಟೈಟಾನ್ಸ್ : ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ.

ಲಕ್ನೋ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ರವಿ ಬಿಷ್ಣೋಯ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Rohit Sharma : ಭಾರತ ತಂಡದ ಹೊಸ ಜೆರ್ಸಿ ಬಿಡುಗಡೆ ಮಾಡಿದ ರೋಹಿತ್​ ಶರ್ಮಾ, ಇಲ್ಲಿದೆ ವಿಡಿಯೊ

Rohit Sharma : ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಇತ್ತೀಚೆಗೆ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಭಾರತ ತಂಡದ ನಾಯಕ ಹಾಗೂ ಬಿಸಿಸಿಐ ಕಾರ್ಯದರ್ಶಿ ಭಾರತದ ಹೊಸ ಬಣ್ಣಗಳನ್ನು ಮೊದಲ ಬಾರಿಗೆ ಪರಿಶೀಲಿಸುತ್ತಿರುವುದನ್ನು ಕಾಣಬಹುದು. ವಿಶೇಷ ಕಾರ್ಯಕ್ರಮದಲ್ಲಿ, ಜನಪ್ರಿಯ ಜರ್ಮನ್ ಕ್ರೀಡಾ ಉಡುಪು ತಯಾರಕ ಅಡಿಡಾಸ್ ತರಬೇತಿ ಕಿಟ್, ಕೋಚಿಂಗ್ ಸಿಬ್ಬಂದಿ ಕಿಟ್ ಮತ್ತು ಮುಖ್ಯ ಕಿಟ್ ಸೇರಿದಂತೆ ಎಲ್ಲರ ಕಿಟ್​​ಗಳನ್ನು ಪ್ರದರ್ಶಿಸಿತು.

VISTARANEWS.COM


on

Rohit Sharma
Koo

ಅಹ್ಮದಾಬಾದ್​: 2024 ರ ಟಿ 20 ವಿಶ್ವಕಪ್​​ಗಾಗಿ ಭಾರತ ತಂಡಕ್ಕಾಗಿ ರೂಪಿಸಿರುವ ಹೊಸ ಕಿಟ್ ಬಿಡುಗಡೆ ಕಾರ್ಯಕ್ರಮ ಅಹಮಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ಕೌನ್ಸಿಲ್ (BCCI) ಕಾರ್ಯದರ್ಶಿ ಜಯ್ ಶಾ ಮತ್ತು ಭಾರತ ನಾಯಕ ರೋಹಿತ್ ಶರ್ಮಾ (Rohit Sharma) ಭಾಗವಹಿಸಿದ್ದರು. ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಇತ್ತೀಚೆಗೆ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಭಾರತ ತಂಡದ ನಾಯಕ ಹಾಗೂ ಬಿಸಿಸಿಐ ಕಾರ್ಯದರ್ಶಿ ಭಾರತದ ಹೊಸ ಬಣ್ಣಗಳನ್ನು ಮೊದಲ ಬಾರಿಗೆ ಪರಿಶೀಲಿಸುತ್ತಿರುವುದನ್ನು ಕಾಣಬಹುದು. ವಿಶೇಷ ಕಾರ್ಯಕ್ರಮದಲ್ಲಿ, ಜನಪ್ರಿಯ ಜರ್ಮನ್ ಕ್ರೀಡಾ ಉಡುಪು ತಯಾರಕ ಅಡಿಡಾಸ್ ತರಬೇತಿ ಕಿಟ್, ಕೋಚಿಂಗ್ ಸಿಬ್ಬಂದಿ ಕಿಟ್ ಮತ್ತು ಮುಖ್ಯ ಕಿಟ್ ಸೇರಿದಂತೆ ಎಲ್ಲರ ಕಿಟ್​​ಗಳನ್ನು ಪ್ರದರ್ಶಿಸಿತು.

ಅಡಿಡಾಸ್ ಈ ಹಿಂದೆ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ವೀಡಿಯೊ ಮೂಲಕ ಭಾರತದ ಹೊಸ ಕಿಟ್ ಪ್ರಕಟಿಸಿತ್ತು. ಇದರಲ್ಲಿ ಭಾರತೀಯ ಕ್ರಿಕೆಟ್ ತಾರೆಗಳಾದ ರೋಹಿತ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರು ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಹೊಸ ಕಿಟ್ ಅನ್ನು ಸ್ವಾಗತಿಸಿರುವುದನ್ನು ಚಿತ್ರಿಸಲಾಗಿತ್ತು. ವೀಡಿಯೊದಲ್ಲಿ ನೋಡಿದಂತೆ, ಹೊಸ ಕಿಟ್ ದೇಹದಲ್ಲಿ ನೀಲಿ ಮತ್ತು ತೋಳುಗಳಿಗೆ ತಿಳಿ ಕಿತ್ತಳೆ ಅದ್ಭುತ ಮಿಶ್ರಣ ಹೊಂದಿದೆ. ಈ ಕಿಟ್ ಸೊಂಟದ ಬದಿಯಲ್ಲಿ ಸಮಾನಾಂತರವಾಗಿ ಚಲಿಸುವ ಎರಡು ಕಿತ್ತಳೆ ಪಟ್ಟೆಗಳನ್ನು ಒಳಗೊಂಡಿದೆ, ಅಡಿಡಾಸ್​​ನ ಮೂರು ಟ್ರೇಡ್​​ಮಾರ್ಕ್​ ಬಿಳಿ ಪಟ್ಟೆಗಳನ್ನು ಹೊಂದಿದೆ. ಮುಖ್ಯ ಕಿಟ್ ಅದರ ಕಾಲರ್ ಮೇಲೆ ತ್ರಿವರ್ಣ ಪಟ್ಟೆಗಳನ್ನೂ ಒಳಗೊಂಡಿದೆ.

ಇದನ್ನೂ ಓದಿ: MS Dhoni : ಧೋನಿಗೆ ದೇವಸ್ಥಾನ; ಸಿಎಸ್​​ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ

ಮೇ 23, 2023 ರಂದು ಬಿಸಿಸಿಐ ಅಡಿಡಾಸ್​ನೊಂದಿಗೆ ಬಹು ವರ್ಷಗಳ ಒಪ್ಪಂದವನ್ನು ಬರೆದಾಗಿನಿಂದ ಭಾರತವು ಅಡಿಡಾಸ್ನ ವಿನ್ಯಾಸಗಳನ್ನು ಧರಿಸುತ್ತಿದೆ. ಅಡಿಡಾಸ್ ಬಿಸಿಸಿಐಗೆ ಬರುವ ಮೊದಲು, ಎಂಪಿಎಲ್​​ ಬಟ್ಟೆ ಬ್ರಾಂಡ್ ಕಿಲ್ಲರ್ ಜೀನ್ಸ್ ಭಾರತದ ಕಿಟ್ ಪ್ರಾಯೋಜಕರಾಗಿದ್ದರು. ಈ ಘೋಷಣೆಯ ನಂತರ, ಅನೇಕ ಭಾರತೀಯ ಕ್ರಿಕೆಟ್ ತಾರೆಯರು ಹೊಸ ಬಣ್ಣಗಳಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಂಡಿದ್ದಾರೆ.

ಜೂನ್ 5 ರಿಂದ ಪ್ರಾರಂಭವಾಗುವ ವಿಶ್ವಕಪ್ ಅಭಿಯಾನಕ್ಕಾಗಿ ಈಗಾಗಲೇ ತಮ್ಮ ತಂಡವನ್ನು ಘೋಷಿಸಿರುವ ಭಾರತ, ಇತ್ತೀಚಿನ ಟಿ 20 ಐ ಪಂದ್ಯಗಳಲ್ಲಿ ಅದ್ಭುತ ಫಾರ್ಮ್ ನಿಂದಾಗಿ ಸ್ಪರ್ಧೆಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಟಿ20 ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್. ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Continue Reading

ಕ್ರೀಡೆ

MS Dhoni : ಧೋನಿಗೆ ದೇವಸ್ಥಾನ; ಸಿಎಸ್​​ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ

MS Dhoni: ಅವರು ಚೆನ್ನೈನ ದೇವರು ಮತ್ತು ಮುಂಬರುವ ವರ್ಷಗಳಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ನನಗೆ ಖಾತ್ರಿಯಿದೆ” ಎಂದು ರಾಯುಡು ಸ್ಟಾರ್ ಸ್ಪೋರ್ಟ್ಸ್​​ ಜತೆ ಮಾತನಾಡುತ್ತಾ ಹೇಳಿದ್ದಾರೆ. ಧೋನಿ 5 ಐಪಿಎಲ್ ಪ್ರಶಸ್ತಿಗಳಲ್ಲದೆ, ಚಾಂಪಿಯನ್ಸ್ ಲೀಗ್ ಟಿ 20 ಅನ್ನು ಎರಡು ಬಾರಿ ಗೆದ್ದಿದ್ದಾರೆ.

VISTARANEWS.COM


on

MS Dhoni
Koo

ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಸಿಎಸ್​ಕೆ ಪರ ಧೋನಿ (MS Dhoni ) ತೋರಿದ ಪ್ರದರ್ಶನವನ್ನು ಪರಿಗಣಿಸಿ ಚೆನ್ನೈನಲ್ಲಿ ಅವರಿಗೊಂದು ದೇವಾಲಯ ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪ್ಲೇಆಫ್​​ನಲ್ಲಿ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್​ ರಾಯಲ್ಸ್​ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿದೆ. ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಸಿಎಸ್ಕೆ 14 ಅಂಕಗಳೊಂದಿಗೆ +0.528 ನೆಟ್ ರನ್ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸಿಎಸ್​ಕೆ ಹೇಗಾದರೂ ಪ್ಲೇಆಫ್​ಗೆ ಅರ್ಹತೆ ಪಡೆಯದಿದ್ದರೆ ಧೋನಿ ಈಗಾಗಲೇ ಈ ಋತುವಿನಲ್ಲಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ರಜನಿಕಾಂತ್ ಮತ್ತು ಖುಷ್ಬೂ ಸೇರಿದಂತೆ ಜನಪ್ರಿಯ ತಾರೆಯರ ದೇವಾಲಯಗಳನ್ನು ಅಭಿಮಾನಿಗಳು ವರ್ಷಗಳಿಂದ ನಿರ್ಮಿಸಿದ್ದಾರೆ. ಭಾರತ ಮತ್ತು ಚೆನ್ನೈ ಅಭಿಮಾನಿಗಳಿಗೆ ತಂದ ಸಂತೋಷವನ್ನು ಗಮನದಲ್ಲಿಟ್ಟುಕೊಂಡು ಧೋನಿಯನ್ನು ಸಹ ದೇವರ ಪಟ್ಟಿಗೆ ಸೇರಿಸಬಹುದು ಎಂದು ರಾಯುಡು ಹೇಳಿದ್ದಾರೆ.

ಅವರು ಚೆನ್ನೈನ ದೇವರು ಮತ್ತು ಮುಂಬರುವ ವರ್ಷಗಳಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದು ನನಗೆ ಖಾತ್ರಿಯಿದೆ” ಎಂದು ರಾಯುಡು ಸ್ಟಾರ್ ಸ್ಪೋರ್ಟ್ಸ್​​ ಜತೆ ಮಾತನಾಡುತ್ತಾ ಹೇಳಿದ್ದಾರೆ. ಧೋನಿ 5 ಐಪಿಎಲ್ ಪ್ರಶಸ್ತಿಗಳಲ್ಲದೆ, ಚಾಂಪಿಯನ್ಸ್ ಲೀಗ್ ಟಿ 20 ಅನ್ನು ಎರಡು ಬಾರಿ ಗೆದ್ದಿದ್ದಾರೆ.

“ಅವರು ಭಾರತಕ್ಕೆ ಎರಡು ವಿಶ್ವಕಪ್ಗಳ ಸಂತೋಷವನ್ನು ತಂದಿದ್ದಾರೆ ಮತ್ತು ಸಾಕಷ್ಟು ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳೊಂದಿಗೆ ಚೆನ್ನೈಗೆ ಖುಷಿ ತಂದಿದ್ದಾರೆ. ಅವರು ತಮ್ಮ ಆಟಗಾರರ ಮೇಲೆ ನಂಬಿಕೆಯನ್ನು ತೋರಿಸುವ ಒಬ್ಬ ವ್ಯಕ್ತಿ, ಅವರು ಯಾವಾಗಲೂ ತಂಡಕ್ಕಾಗಿ, ದೇಶಕ್ಕಾಗಿ ಮತ್ತು ಸಿಎಸ್ಕೆಗಾಗಿ ಅದನ್ನು ಮಾಡಿದ್ದಾರೆ”ಎಂದು ರಾಯುಡು ಹೇಳಿದರು.

ಇದನ್ನೂ ಓದಿ: IPL 2024 : ಡೆಲ್ಲಿ ವಿರುದ್ದ ಗೆದ್ದ ಆರ್​ಸಿಬಿ ತಂಡದ ಸಂಭ್ರಮ ಹೀಗಿತ್ತು, ಇಲ್ಲಿದೆ ವಿಡಿಯೊ

ಅವರು ದಂತಕಥೆ ಮತ್ತು ಎಲ್ಲರೂ ಜನಸಮೂಹದಲ್ಲಿ ಆಚರಿಸುವ ವ್ಯಕ್ತಿ. ಚೆನ್ನೈನಲ್ಲಿ ಇದು ಅವರ ಕೊನೆಯ ಪಂದ್ಯವಾಗಬಹುದು ಎಂದು ಅವರು ಯೋಚಿಸುತ್ತಿರಬಹುದು, “ಎಂದು ರಾಯುಡು ಹೇಳಿದರು.

ರಾಯಲ್ಸ್ ವಿರುದ್ಧ ಸಿಎಸ್​ಕೆ ಗೆಲುವಿನ ನಂತರ, ಧೋನಿ ಮತ್ತು ಚೆನ್ನೈ ತಂಡವು ಚೆಪಾಕ್ನಲ್ಲಿ ವಿಜಯದ ಮಡಿಲನ್ನು ತೆಗೆದುಕೊಂಡಿತು. ಈ ಋತುವಿನಲ್ಲಿ ಪ್ರೇಕ್ಷಕರು ನೀಡಿದ ಬೆಂಬಲವನ್ನು ಶ್ಲಾಘಿಸಿದರು. ಪ್ರೇಕ್ಷಕರು ತಮ್ಮನ್ನು ರಂಜಿಸಿದ್ದಕ್ಕಾಗಿ ಧೋನಿ ಮತ್ತು ಹಳದಿ ಸೇನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಹಾಗೂ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ.

Continue Reading

ಪ್ರಮುಖ ಸುದ್ದಿ

IPL 2024 : ಡೆಲ್ಲಿ ವಿರುದ್ದ ಗೆದ್ದ ಆರ್​ಸಿಬಿ ತಂಡದ ಸಂಭ್ರಮ ಹೀಗಿತ್ತು, ಇಲ್ಲಿದೆ ವಿಡಿಯೊ

IPL 2024: ಇದಕ್ಕೂ ಮುನ್ನ ಆರ್​ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಅಗ್ರ ಕ್ರಮಾಂಕದ ಬದಲಾವಣೆಯ ಬಗ್ಗೆ ಮಾತನಾಡಿದ್ದರು. ತಮ್ಮ ಲೆಂತ್​ ಮತ್ತು ಸೆಲೆಕ್ಷನ್​ನೊಂದಿಗೆ ಸಾಧ್ಯವಾದಷ್ಟು ಆಕ್ರಮಣಕಾರಿಯಾಗಲು ಪ್ರಯತ್ನಿಸುತ್ತಿರುವ ಬೌಲಿಂಗ್ ಘಟಕವನ್ನು ಫ್ಲವರ್ ಶ್ಲಾಘಿಸಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಮೇ 12 ರ ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ (IPL 2024) ತವರು ಪಂದ್ಯವನ್ನು ಗೆದ್ದ ನಂತರ ಫಾಫ್ ಡು ಪ್ಲೆಸಿಸ್ (FaF Du Felissis ನೇತೃತ್ವದ ಆರ್ಸಿಬಿ ಪ್ಲೇ ಆಫ್ ರೇಸ್​ನಲ್ಲಿ (Ply off) ಜೀವಂತವಾಗಿ ಉಳಿದುಕೊಂಡಿದೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಸತತ 5 ನೇ ಗೆಲುವಾಗಿದೆ. ಏಕೆಂದರೆ ಋತುವಿನಲ್ಲಿ ನಿರಾಶಾದಾಯಕ ಆರಂಭದ ನಂತರ ತಂಡವು ತನ್ನ ಅದೃಷ್ಟವನ್ನು ತಿರುಗಿಸಿತು. ಗೆಲುವಿನ ಹಾದಿಗೆ ಮೊದಲು, ಆರ್​ಸಿಬಿ ಸತತ 6 ಪಂದ್ಯಗಳನ್ನು ಸೋತಿತ್ತು, ಇದು ಪಂದ್ಯಾವಳಿಯಿಂದ ಹೊರಗುಳಿಯುವ ಅಂಚಿಗೆ ತಂದಿತು.

ಬೆಂಗಳೂರು ಮೂಲದ ತಂಡವು ತಮ್ಮ ಅದೃಷ್ಟವನ್ನು ಕಂಡುಕೊಳ್ಳುವ ಹಾದಿಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಗಳನ್ನು ಮಾಡಿತು. ಭಾನುವಾರ ಡಿಸಿ ವಿರುದ್ಧ ಗೆದ್ದ ನಂತರ ಆರ್​ಸಿಬಿ ತಂಡವು ಡ್ರೆಸ್ಸಿಂಗ್ ರೂಮ್​ನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿತು. ಕೋಚಿಂಗ್ ಸಿಬ್ಬಂದಿ ಉತ್ತಮವಾಗಿ ಆಡಿದ ಪ್ರತಿಯೊಬ್ಬ ಆಟಗಾರನನ್ನು ಶ್ಲಾಘಿಸಿದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನ 2024 ರ ಋತುವಿನಲ್ಲಿ ಇದುವರೆಗೆ ಯಾರೂ ನೋಡದ ಆಚರಣೆಯನ್ನು ಮಾಡಿದರು. ಸಂಭ್ರಮಾಚರಣೆಯ ವೀಡಿಯೊವನ್ನು ಆರ್​ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಅಲ್ಲಿ ಕ್ಯಾಮೆರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಅವರಂತಹವರು ಸಂಭ್ರಮಿಸುತ್ತಿರುವುದು ಕಾಣಬಹುದು.

ಇದಕ್ಕೂ ಮುನ್ನ ಆರ್​ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಅಗ್ರ ಕ್ರಮಾಂಕದ ಬದಲಾವಣೆಯ ಬಗ್ಗೆ ಮಾತನಾಡಿದ್ದರು. ತಮ್ಮ ಲೆಂತ್​ ಮತ್ತು ಸೆಲೆಕ್ಷನ್​ನೊಂದಿಗೆ ಸಾಧ್ಯವಾದಷ್ಟು ಆಕ್ರಮಣಕಾರಿಯಾಗಲು ಪ್ರಯತ್ನಿಸುತ್ತಿರುವ ಬೌಲಿಂಗ್ ಘಟಕವನ್ನು ಫ್ಲವರ್ ಶ್ಲಾಘಿಸಿದ್ದರು.

ಇದನ್ನೂ ಓದಿ: IPL 2024 : ಮೈದಾನದಿಂದಲೇ ಅನುಷ್ಕಾಗೆ ಕೈ ಸನ್ನೆ ಮಾಡಿದ ಕೊಹ್ಲಿ; ಇಲ್ಲಿದೆ ವಿಡಿಯೊ

ಫಾಫ್ ಮತ್ತು ವಿರಾಟ್ ವಿಶೇಷವಾಗಿ ತಮ್ಮ ಕಾರ್ಯಗಳಿಂದ ಮುಂಚೂಣಿಯಿಂದ ಮುನ್ನಡೆಸಿದ್ದಾರೆ. ತಂಡದ ಉಳಿದವರು ಅತ್ಯುತ್ತಮವಾಗಿದ್ದಾರೆ. ಪವರ್​ಪ್ಲೇನಲ್ಲಿ ನಾವು ಬೌಲಿಂಗ್ ಮಾಡಿದ ರೀತಿಯಲ್ಲಿ ನಾವು ಸುಧಾರಣೆಯನ್ನು ನೋಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸಿರಾಜ್ ಮತ್ತು ಯಶ್ ದಯಾಳ್ ಮುನ್ನಡೆಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇಬ್ಬರೂ ಹೊಸ ಚೆಂಡಿನೊಂದಿಗೆ ತುಂಬಾ ಕೌಶಲ್ಯ ಮತ್ತು ಧೈರ್ಯಶಾಲಿಯಾಗಿದ್ದಾರೆ, ಎಂದು ಫ್ಲವರ್ ಆರ್ಸಿಬಿ ವೀಡಿಯೊದಲ್ಲಿ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಸೋಲಿಸಿದರೆ ಆರ್​ಸಿಬಿ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. 13 ಪಂದ್ಯಗಳಿಂದ 12 ಅಂಕ ಗಳಿಸಿರುವ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆರ್​ಸಿಬಿಗಿಂತ ಎಸ್ಆರ್​ಎಚ್, ಸಿಎಸ್​ಕೆ, ಆರ್​ಆರ್​ ಮತ್ತು ಕೆಕೆಆರ್ ಮುಂದಿವೆ. ಕೆಕೆಆರ್ ಈಗಾಗಲೇ ಅರ್ಹತೆ ಪಡೆದಿದ್ದರೆ, ಇತರ ತಂಡಗಳು ಪ್ಲೇಆಫ್ ಸ್ಥಾನದಿಂದ ಕೇವಲ ಒಂದು ಗೆಲುವಿನ ದೂರದಲ್ಲಿವೆ. ಐಪಿಎಲ್ 2024 ರ ಗ್ರೂಪ್ ಹಂತದ ಕೊನೆಯ ದಿನವಾದ ಮೇ 18 ರಂದು ಆರ್ಸಿಬಿ ಸಿಎಸ್ಕೆ ವಿರುದ್ಧ ಸೆಣಸಲಿದೆ.

Continue Reading

ಪ್ರಮುಖ ಸುದ್ದಿ

IPL 2024 : ಮೈದಾನದಿಂದಲೇ ಅನುಷ್ಕಾಗೆ ಕೈ ಸನ್ನೆ ಮಾಡಿದ ಕೊಹ್ಲಿ; ಇಲ್ಲಿದೆ ವಿಡಿಯೊ

IPL 2024: ಐಪಿಎಲ್ 2024 ರಲ್ಲಿ ಆರ್​​ಬಿಯ ಅಭಿಯಾನ ರೋಚಕ ತಿರುವು ಪಡೆದಿದ್ದರಿಂದ ತಂಡದ ಗೆಲುವಿನ ನಂತರ ಸ್ಟಾರ್ ದಂಪತಿಗಳ ಮುಖದಲ್ಲಿ ನೆಮ್ಮದಿ ಕಾಣಿಸಿತು. ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾರೋ ಒಬ್ಬರಿಗೆ ಸಂಕೇತ ಮಾಡಿ ಏನನ್ನೋ ತೋರಿಸುತ್ತಿದ್ದರು. ಅದು ನಾವು ಹಡಗನ್ನೇ ತಿರುಗಿಸುತ್ತೇವೆ. ಅಥವಾ ಇಡೀ ಪ್ರಸಂಗವನ್ನೇ ಬದಲಾಯಿಸುತ್ತೇವೆ ಎಂಬ ಅರ್ಥದಲ್ಲಿತ್ತು. ಕ್ಯಾಮೆರಾ ಕೊಹ್ಲಿ ಕೈ ತೋರಿಸಿದ ಕಡೆಗೆ ತಿರುಗಿಸಿದಾಗ ಅದು ಪತ್ನಿ ಅನುಷ್ಕಾ ಶರ್ಮಾಗೆ ಎಂಬುದು ಗೊತ್ತಾಯಿತು.

VISTARANEWS.COM


on

IPL 2024
Koo

ಬೆಂಗಳೂರು: ಮೇ 12ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ಆರ್​ಸಿಬಿ ತಂಡ ಡಿಸಿ ತಂಡವನ್ನು ಮಣಿಸಿತ್ತು. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ ಈ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. 188 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವನ್ನು ಕೇವಲ 140 ರನ್​ಗಳಿಗೆ ಆಲೌಟ್ ಮಾಡಿದ ಆರ್​​ಸಿಬಿ ಆಟಗಾರರು ಸಂಭ್ರಮಿಸಿದರು. ಆಟಗಾರರು ಗೆಲುವನ್ನು ಆಚರಿಸುತ್ತಿದ್ದಂತೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಡೆಗೆ ಕ್ಯಾಮೆರಾ ತಿರುಗಿಸಿದರು. ಈ ವೇಳೆ ಅವರಿಬ್ಬರ ನಡುವಿನ ಸಂಕಚೇ

ಐಪಿಎಲ್ 2024 ರಲ್ಲಿ ಆರ್​​ಬಿಯ ಅಭಿಯಾನ ರೋಚಕ ತಿರುವು ಪಡೆದಿದ್ದರಿಂದ ತಂಡದ ಗೆಲುವಿನ ನಂತರ ಸ್ಟಾರ್ ದಂಪತಿಗಳ ಮುಖದಲ್ಲಿ ನೆಮ್ಮದಿ ಕಾಣಿಸಿತು. ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾರೋ ಒಬ್ಬರಿಗೆ ಸಂಕೇತ ಮಾಡಿ ಏನನ್ನೋ ತೋರಿಸುತ್ತಿದ್ದರು. ಅದು ನಾವು ಹಡಗನ್ನೇ ತಿರುಗಿಸುತ್ತೇವೆ. ಅಥವಾ ಇಡೀ ಪ್ರಸಂಗವನ್ನೇ ಬದಲಾಯಿಸುತ್ತೇವೆ ಎಂಬ ಅರ್ಥದಲ್ಲಿತ್ತು. ಕ್ಯಾಮೆರಾ ಕೊಹ್ಲಿ ಕೈ ತೋರಿಸಿದ ಕಡೆಗೆ ತಿರುಗಿಸಿದಾಗ ಅದು ಪತ್ನಿ ಅನುಷ್ಕಾ ಶರ್ಮಾಗೆ ಎಂಬುದು ಗೊತ್ತಾಯಿತು. ಬ್ಯಾಟ್ ಮತ್ತು ಬಾಲ್​ನಲ್ಲಿ ಅದ್ಭುತ ಪ್ರಯತ್ನಕ್ಕಾಗಿ ಆರ್​​ಸಿಬಿಯು ಭರ್ಜರಿ ಗೆಲುವಿನ ಕ್ರೆಡಿಟ್ ಕ್ಯಾಮರೂನ್ ಗ್ರೀನ್​ಗೆ ಸಲ್ಲುತ್ತದೆ.

ಇದನ್ನೂ ಓದಿ: Gautam Gambhir : ಕೊಹ್ಲಿ ಜತೆಗಿನ ಜಗಳವಲ್ಲ, ಇನ್ನೊಂದು ವಿಚಾರದ ಬಗ್ಗೆ ಗಂಭೀರ್​ಗೆ ಸಿಕ್ಕಾಪಟ್ಟೆ ಪಶ್ಚಾತಾಪವಿದೆ

ಭಾನುವಾರ ಡಿಸಿ ವಿರುದ್ಧ 47 ರನ್​ಗಳ ಜಯದೊಂದಿಗೆ ಆರ್​​ಸಿಬಿ ತನ್ನ ಗೆಲುವಿನ ಓಟ ಮುಂದುವರಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್​​ನಲ್ಲಿ 5 ನೇ ಸ್ಥಾನಕ್ಕೆ ಜಿಗಿಯಿತು. ಪಂದ್ಯಾವಳಿಯ ಆರಂಭದಲ್ಲಿ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕಾರಣ ಪ್ಲೇಆಫ್ ಆಸೆ ದೂರದ ಕನಸಿನಂತೆ ತೋರಿತು. ರಜತ್ ಪಾಟಿದಾರ್ ಅವರ ಅರ್ಧಶತಕ ಮತ್ತು ಆರ್ಸಿಬಿ ಬೌಲರ್​ಗಳ ಶಿಸ್ತುಬದ್ಧ ಪ್ರದರ್ಶನವು ಕೊನೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟಿತು.

ಆರ್​ಸಿಬಿ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯವನ್ನು ಸಿಎಸ್ಕೆ ವಿರುದ್ಧ ತವರಿನಲ್ಲಿ ಆಡಲಿದೆ. ಒಂದು ವೇಳೆ ಆರ್​​ಸಿಬಿ 18 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಗೆದ್ದರೆ, ಅವರು ಸಿಎಸ್​ಗಿಂತ ಉತ್ತಮ ನೆಟ್​​ರನ್​ರೇಟ್ ಹೊಂದಿದರೆ ಪ್ಲೇಆಫ್​ಗೆ ಅರ್ಹತೆ ಪಡೆಯುತ್ತದೆ.

Continue Reading
Advertisement
Chandrayaan 4
ದೇಶ3 mins ago

Chandrayaan 4: ಚಂದ್ರಯಾನ 4ಕ್ಕೆ ಇಸ್ರೋ ಸಜ್ಜು; ಚಂದ್ರನ ವಿಶೇಷ ಸ್ಥಳದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್!

CBSE Class 10 Results
ಮಂಡ್ಯ5 mins ago

CBSE Class 10 Results: ಸತತ 9ನೇ ಬಾರಿಗೆ ಶೇ.100 ಫಲಿತಾಂಶ; ಅಕ್ಷರ ಇಂಟರ್‌ನ್ಯಾಷನಲ್ ಸ್ಕೂಲ್ ಅಮೋಘ ಸಾಧನೆ

Climate Plan
ಕರ್ನಾಟಕ16 mins ago

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

Namma Metro green line
ಬೆಂಗಳೂರು31 mins ago

Namma Metro : ಜುಲೈ ಅಂತ್ಯಕ್ಕೆ ನಾಗಸಂದ್ರ-ಮಾದಾವರ ಮೆಟ್ರೋ ಕಾಮಗಾರಿ ಪೂರ್ಣ!

Rohit Sharma
ಕ್ರೀಡೆ32 mins ago

Rohit Sharma : ಭಾರತ ತಂಡದ ಹೊಸ ಜೆರ್ಸಿ ಬಿಡುಗಡೆ ಮಾಡಿದ ರೋಹಿತ್​ ಶರ್ಮಾ, ಇಲ್ಲಿದೆ ವಿಡಿಯೊ

Abdu Rozik
Latest39 mins ago

Abdu Rozik: ತನಗಿಂತ ತುಂಬಾ ಎತ್ತರದ ಹುಡುಗಿ ಜತೆ ಬಿಗ್‌ ಬಾಸ್‌ ಸ್ಪರ್ಧಿಯ ಮದುವೆ!

Song Release
ಸಿನಿಮಾ45 mins ago

Song Release: ‘ಇದು ನಮ್ ಶಾಲೆ’ ಚಿತ್ರದ ಹಾಡಿನ ಅನಾವರಣ

Prajwal Revanna Case
ಕರ್ನಾಟಕ46 mins ago

Prajwal Revanna Case: ರೇವಣ್ಣಗೆ ಜಾಮೀನು; ಹೊಳೆನರಸೀಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು ವಶಕ್ಕೆ

MS Dhoni
ಕ್ರೀಡೆ58 mins ago

MS Dhoni : ಧೋನಿಗೆ ದೇವಸ್ಥಾನ; ಸಿಎಸ್​​ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ

HD Revanna Bail Revanna will not leave the country condition imposed by the court
ಕ್ರೈಂ1 hour ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ1 hour ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ1 hour ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ2 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ2 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ2 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ9 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ13 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ15 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌